ಕಾರ್ಕಳ : ಉದ್ದಿಮೆ ಪರವಾನಿಗೆ ನವೀಕರಿಸುವಂತೆ ಪುರಸಭೆ ಸೂಚನೆ
ಬ್ಯಾನರ್, ಜಾಹೀರಾತು ಫಲಕ ಅಳವಡಿಕೆಗೆ ಅನುಮತಿ ಕಡ್ಡಾಯ
ಕಾರ್ಕಳ : ಪುರಸಭಾ ವ್ಯಾಪ್ತಿಯ ಉದ್ದಿಮೆದಾರರು 2021-22 ನೇ ಸಾಲಿನ ಪರವಾನಿಗೆ ನವೀಕರಿಸುವಂತೆ ಪುರಸಭೆ ಸೂಚಿಸಿದೆ. ಎಲ್ಲ ಉದ್ದಿಮೆದಾರರು ಪರವಾನಿಗೆ ನವೀಕರಿಸಬೇಕು, ಪರವಾನಿಗೆ ಇಲ್ಲದೇ ವ್ಯಾಪಾರ ನಡೆಸುವುದು ಕಂಡುಬಂದಲ್ಲಿ ದಂಡ ವಿಧಿಸಿ, ಪುರಸಭಾ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು. ಅಲ್ಲದೇ ಉದ್ದಿಮೆದಾರರು ಮತ್ತು ನೌಕರರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದಿರಬೇಕು. ನಳ್ಳಿ ನೀರು, ಆಸ್ತಿ ತೆರಿಗೆ ಶುಲ್ಕ ಪಾವತಿಸತಬೇಕು. ಶಾಶ್ವತ ಜಾಹೀರಾತು ಫಲಕಗಳ ನವೀಕರಣ, ಪುರಸಭಾ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸಲು ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಪುರಸಭಾ ಮುಖ್ಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





