ಮಂಗಳೂರು: ಡಿ.10ರಂದು ಇನ್‍ಲ್ಯಾಂಡ್ 'ಎಪಿರಾನ್' ಉದ್ಘಾಟನೆ

ಮಂಗಳೂರು: ಕರ್ನಾಟಕದ ಮುಂಚೂಣಿಯ ನಿರ್ಮಾಣ ಸಂಸ್ಥೆ ಇನ್‍ಲ್ಯಾಂಡ್ ನಗರದ ಕೇಂದ್ರ ಭಾಗವಾದ ಕದ್ರಿ ಕಂಬಳ ಬಳಿಯ ಪಿಂಟೋಸ್ ಲೇನ್‍ನಲ್ಲಿ ನಿರ್ಮಿಸಿರುವ ಸುಸಜ್ಜಿತ ವಸತಿ ಸಮುಚ್ಚಯ 'ಇನ್‍ಲ್ಯಾಂಡ್ ಎಪಿರಾನ್' ಡಿ.10ರಂದು ಉದ್ಘಾಟನೆಗೊಳ್ಳಲಿದೆ.
ಶಾಸಕ ವೇದವ್ಯಾಸ ಕಾಮತ್, ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಕ್ರೆಡೈ ಅಧ್ಯಕ್ಷ ಪುಷ್ಪರಾಜ ಜೈನ್ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಪಾರ್ಟ್‍ಮೆಂಟ್ ನಗರದ ಕೇಂದ್ರ ಭಾಗದಲ್ಲಿರುವುದರಿಂದ ಪ್ರಮುಖ ಸ್ಥಳಗಳಾದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಬಿಜೈ ಚರ್ಚ್, ಸೈಂಟ್ ಅಲೋಶಿಯಸ್ ಕಾಲೇಜ್, ಸಿಟಿ ಸೆಂಟರ್ ಮಾಲ್, ಹಂಪನಕಟ್ಟೆ, ಎಂ.ಜಿ.ರಸ್ತೆ ಮೊದಲಾದ ಸ್ಥಳಗಳನ್ನು ಕೆಲವೇ ನಿಮಿಷಗಳಲ್ಲಿ ತಲುಪಬಹುದಾಗಿದೆ.
ವಸತಿ ಸಮುಚ್ಚಯ ಏಳು ಅಂತಸ್ತುಗಳಲ್ಲಿ ವಾಸ್ತು ಪ್ರಕಾರ ನಿರ್ಮಾಣಗೊಂಡಿದೆ. 3 ಬಿಎಚ್‍ಕೆ (1640 ಚ.ಅಡಿ), 2.5 ಬಿಎಚ್‍ಕೆ (1490 ಚ.ಅಡಿ) ಮತ್ತು 2 ಬಿಎಚ್‍ಕೆ (1335 ಚ.ಅಡಿ) ಮನೆಗಳು ಲಭ್ಯ ಇವೆ. ಐಷಾರಾಮಿ ಪ್ರವೇಶ ಲಾಬಿ, ಸ್ಟೀಮ್ ರೂಂ, ವಿಡಿಯೋ ಡೋರ್ ಫೋನ್, ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, 24 ಗಂಟೆ ನಿರಂತರ ವಿದ್ಯುತ್ ಪೂರೈಕೆ, ಸಿಸಿಟಿವಿ ಭದ್ರತೆ, ಜಿಮ್ನೇಶಿಯಂ, ಮಕ್ಕಳಿಗೆ ಆಟವಾಡಲು ಸ್ಥಳಾವಕಾಶ ಕಲ್ಪಿಸಲಾಗಿದೆ.
ಪರಿಸರ ಸ್ನೇಹಿ ವ್ಯವಸ್ಥೆಗೆ ಆದ್ಯತೆ: ಇನ್‍ಲ್ಯಾಂಡ್ ಎಪಿರಾನ್ ಒಂದು ಐಷಾರಾಮಿ ಮನೆಗಳನ್ನು ಹೊಂದಿರುವ ಪ್ರತಿಷ್ಠಿತ ಯೋಜನೆ. ನಗರದ ಹೃದಯ ಭಾಗದಲ್ಲಿ ನಿರ್ಮಿಸಲಾಗಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಲಿದೆ. ಇಲ್ಲಿ ಪರಿಸರ ಸ್ನೇಹಿ ವ್ಯವಸ್ಥೆಗಳಿಗೆ ಒತ್ತು ನೀಡಲಾಗಿದೆ. ಮಳೆ ನೀರು ಇಂಗುವಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಲಾರ್ ವಾಟರ್ ಹೀಟರ್ ಮತ್ತು ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಲಾಗಿದೆ ಎಂದು ಇನ್‍ಲ್ಯಾಂಡ್ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹಮ್ಮದ್ ತಿಳಿಸಿದ್ದಾರೆ.
ಇನ್‍ಲ್ಯಾಂಡ್ ನಿರ್ಮಾಣ ಕ್ಷೇತ್ರದಲ್ಲಿ ಹಲವಾರು ವಿನೂತನ ಪರಿಕಲ್ಪನೆಗಳನ್ನು ಮಂಗಳೂರಿಗೆ ಪರಿಚಯಿಸಿದೆ. ಅತಿ ಎತ್ತರದ ವಸತಿ ಸಮುಚ್ಚಯ, ಸಮುದ್ರ ವೀಕ್ಷಣೆಗೆ ಅವಕಾಶವಾಗುವ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿದೆ. ಜನತೆ ಇನ್‍ಲ್ಯಾಂಡ್‍ನ ಗುಣಮಟ್ಟದಲ್ಲಿ ವಿಶ್ವಾಸ ಇಟ್ಟಿದ್ದಾರೆ. ಅಂತಹ ಗುಣಮಟ್ಟದ ಮನೆಗಳನ್ನು ಅವರಿಗೆ ನೀಡುವುದು ನಮಗೆ ಹೆಮ್ಮೆ. ಇನ್‍ಲ್ಯಾಂಡ್ ಎಪಿರಾನ್ ಯೋಜನೆಯಲ್ಲಿ ಅತ್ಯಾಧುನಿಕ ನಿರ್ಮಾಣ ತಂತ್ರಜ್ಞಾನ ಬಳಸಲಾಗಿದೆ ಎಂದವರು ತಿಳಿಸಿದ್ದಾರೆ.
ವಿಳಾಸ: ಇನ್‍ಲ್ಯಾಂಡ್ ಇನ್‍ಪ್ರಾಸ್ಟ್ರಕ್ಚರ್ ಡೆವಲಪರ್ಸ್ ಪ್ರೈ.ಲಿ. ಮೂರನೇ ಮಹಡಿ, ಇನ್‍ಲ್ಯಾಂಡ್ ಒರ್ನೇಟ್, ನವಭಾರತ್ ಸರ್ಕಲ್, ಮಂಗಳೂರು. ದೂರವಾಣಿ : 9972089099, 9972014055, 9880138015
ವೆಬ್ ಸೈಟ್ : www.inlandbuilders.net , ಇಮೇಲ್ : mktg.mlr@inlandbuilders.net







