ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಉಚಿತ ಬೇಕರಿ ತರಬೇತಿ ಕೋರ್ಸ್
ಬೆಂಗಳೂರು: ಯುವಕರಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಉಚಿತ ಬೇಕರಿ ತರಬೇತಿಯನ್ನು ನೀಡಲು ಮುಂದಾಗಿದೆ.
ಬೆಂಗಳೂರಿನಲ್ಲಿ 3 ತಿಂಗಳ ಕಾಲ ಈ ಉಚಿತ ಬೇಕರಿ ತರಬೇತಿ ನಡೆಯಲಿದ್ದು,ಪ್ರತಿ ದಿನ 4 ಗಂಟೆಗಳ ಕಾಲ ತಜ್ಞರು ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಾರೆ.
ಎಸೆಸೆಲ್ಸಿ ಪಾಸ್ ಅಥವಾ ಫೇಲ್ ಆದವರು ಈ ಕೋರ್ಸ್ಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ ಮತ್ತು 18-35ರ ವಯೋಮಾನದರಾಗಿರಬೇಕು. ನೋಂದಾಣಿ ಮಾಡಲು ಡಿ.15 ಕೊನೆಯ ದಿನಾಂಕ.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಯಲದ ಬೇಕರಿ ಟ್ರೈನಿಂಗ್ ಯುನಿಟ್ ಸಹಯೋಗದೊಂದಿದೆ ನಿಗಮವು ಈ ತರಬೇತಿ ನೀಡಲು ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳು https://skillconnect.kaushalkar.com/app/bakery ಲಿಂಕ್ ಕ್ಲಿಕ್ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ 080-23513370ಗೆ ಕರೆಮಾಡಬಹುದು. bakery.uas@gmail.com ಅಥವಾ kavankumark.ksdc@gmail.com ಗೆ ಕೂಡ ಇ-ಮೇಲ್ ಮಾಡಬಹುದು.
Next Story