ಅಂದರ್ ಬಾಹರ್: ಐವರ ಬಂಧನ
ಬೈಂದೂರು, ಡಿ.9: ಶಿರೂರು ಗ್ರಾಮದ ಕರಿಕಟ್ಟೆ ದುರ್ಗಾಂಬಿಕಾ ಸಭಾ ಭವನದ ಎದುರಿನ ಹಾಡಿಯಲ್ಲಿ ಡಿ.8ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ತಾಲೂಕಿನ ಮುತ್ತಳ್ಳಿ ಗ್ರಾಮದ ಮಂಜಪ್ಪ ನಾಯ್ಕ(45), ಈಶ್ವರ ನಾಯ್ಕ(42), ಬೆಳ್ಕೆ ಗ್ರಾಮದ ಸತೀಶ್ ನಾಯ್ಕ(34), ದಿನೇಶ ಹೊನ್ನಪ್ಪ ನಾಯ್ಕ (35), ಹನುಮಾನ್ ನಗರದ ಮಂಜುನಾಥ ಜಟ್ಟಪ್ಪ ನಾಯ್ಕ(54) ಬಂಧಿತ ಆರೋಪಿಗಳು. ಇನ್ನುಳಿದ ಐವರು ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದಾರೆ. ಬಂಧಿತರಿಂದ 8,200ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





