ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಕಾಪು, ಡಿ.9: ಏಣಗುಡ್ಡೆ ಗ್ರಾಮ ಅಚ್ಚಡ ಎಂಬಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೋಸ್ ಫಿನ್ ಲೋಬೋ(75) ಎಂಬವರು ಒಬ್ಬರೇ ವಾಸವಾಗಿರುವ ಮನೆಗೆ ಸೆ.8ರಿಂದ ಅ.25ರ ಮಧ್ಯಾವಧಿ ಯಲ್ಲಿ ನುಗ್ಗಿದ ದುಷ್ಕರ್ಮಿಗಳು, ಕಪಾಟಿನಲ್ಲಿ ಇಟ್ಟಿದ್ದ ರೋಪ್ ಚೈನ್, ಹವಳದ ಚೈನ್, ಸಾಧಾರಣ ಚೈನ್, ಒಂದು ಜೊತೆ ಬಳೆ, 4 ಉಂಗುರ, 3 ಜೊತೆ ಕಿವಿಯ ಓಲೆಯನ್ನು ಕಳವು ಮಾಡಿದ್ದಾರೆ. ಒಟ್ಟು ಕಳವಾದ 103 ಗ್ರಾಂ ತೂಕದ ಚಿನ್ನಾಭರಣಗಳ ಮೌಲ್ಯ 4,12,000 ರೂ. ಎಂದು ಅಂದಾಜಿಸಲಾಗಿದೆ. ಲೋಬೊ ಹೊರಗಡೆ ಇರುವ ತನ್ನ ಮಕ್ಕಳಿಗೆ ವಿಷಯ ತಿಳಿಸಿ ಮನೆಯಲ್ಲಿ ಹುಡುಕಾಡಿದ ಹಿನ್ನೆಲೆಯಲ್ಲಿ ದೂರು ನೀಡಲು ವಿಳಂಬವಾಗಿದೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story