ಗೇರು ಬೀಜ ಕಳವು ಪ್ರಕರಣ : ಆರೋಪಿ ಸೆರೆ
ಮಂಗಳೂರು, ಡಿ.9: ಪಣಂಬೂರಿನ ನವಮಂಗಳೂರು ಬಂದರಿನಲ್ಲಿ ದಾಸ್ತಾನಿರಿಸಿದ್ದ ಗೇರು ಬೀಜ ಗೋಣಿಯೊಂದನ್ನು ಕಳವುಗೈದಿದ್ದಾನೆ ಎನ್ನಲಾದ ಆರೋಪಿ ಶಿವಮೊಗ್ಗ ಜಿಲ್ಲೆಯ ಶಿವು (30) ಎಂಬಾತನನ್ನು ಪಣಂಬೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂದರಿನೊಳಗಿರುವ ಶಿಪ್ಪಿಂಗ್ ಸಂಸ್ಥೆಯಲ್ಲಿ ಗೇರು ಬೀಜದ ಗೋಣಿಗಳನ್ನು ದಾಸ್ತಾನಿರಿಸಲಾಗಿತ್ತು. ಇದರಿಂದ 23 ಸಾವಿರ ರೂ. ಮೌಲ್ಯದ ಒಂದು ಗೋಣಿ ಚೀಲವನ್ನು ಶಿವು ಕಳವುಗೈದು ತನ್ನ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಎಂದು ದೂರಲಾಗಿದೆ.
ಇದನ್ನು ಭದ್ರತಾ ಸಿಬ್ಬಂದಿ ಪತ್ತೆಹಚ್ಚಿ ಆರೋಪಿಯನ್ನು ಪಣಂಬೂರು ಪೊಲೀಸರ ವಶಕ್ಕೆ ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಅತನನ್ನು ಬಂಧಿಸಿ ಕಾನೂನು ಕ್ರಮ ಜರಗಿಸಿದ್ದಾರೆ.
Next Story





