ವಿಟ್ಲ ಪ.ಪಂ. ಚುನಾವಣೆ: ಕರ್ತವ್ಯಕ್ಕೆ ಅಧಿಕಾರಿಗಳ ನೇಮಕ
ಮಂಗಳೂರು, ಡಿ.9: ವಿಟ್ಲ ಪಟ್ಟಣ ಪಂಚಾಯತ್‌ನ 18 ವಾರ್ಡ್‌ಗಳಿಗೆ ಡಿ.27ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ.
ವಾರ್ಡ್ 1ರಿಂದ 10 ರವರೆಗೆ ಬಂಟ್ವಾಳದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರದೀಪ್ ಡಿ ಸೋಜ ಹಾಗೂ ವಾರ್ಡ್ 11 ರಿಂದ ವಾರ್ಡ್ 18ರವರೆಗೆ ಬಂಟ್ವಾಳದ ಸಹಾಯಕ ಕೃಷು ನಿರ್ದೇಶಕ ಚೆನ್ನಕೇಶವ ಮೂರ್ತಿ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಈ ಚುನಾವಣಾಧಿಕಾರಿಗಳು ವಿಟ್ಲ ಪಟ್ಟಣ ಪಂಚಾಯತ್‌ಕಚೇರಿ ಸಭಾಂಗಣದಲ್ಲಿ ರಜಾದಿನಗಳನ್ನು ಹೊರತು ಪಡಿಸಿ ಪೂ. 11ರಿಂದ ಸಂಜೆ 3ಗಂಟೆಯವರೆಗೆ ಲಭ್ಯರುತ್ತಾರೆ ಎಂದು ವಿಟ್ಲ ಪಪಂ ಚುನಾವಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





