ಅರ್ಜಿಯಲ್ಲಿ ತಿದ್ದುಪಡಿಗೆ ಅವಕಾಶ
ಮಂಗಳೂರು, ಡಿ.9: ಜವಾಹರ್ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಯ ಅರ್ಜಿಯಲ್ಲಿ ಪೋಷಕರು ಭರ್ತಿ ಮಾಡಿರುವ ಮಾಹಿತಿಯನ್ನು ಆನ್‌ಲೈನ್ ಮೂಲಕ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಪೋಷಕರು ಡಿ.16 ಮತ್ತು 17ರಂದು ಅರ್ಜಿ ಸಲ್ಲಿಸಿರುವ ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ನಮೂದಿಸುವ ಮೂಲಕ ತಿದ್ದುಪಡಿ ಮಾಡಬಹುದಾಗಿದೆ.
ಲಿಂಗ (ಗಂಡು/ಹೆಣ್ಣು), ವರ್ಗ (ಸಾಮಾನ್ಯ, ಪ.ಜಾತಿ/ ಪ.ಪಂಗಡ/ ಇತರೆ ಹಿಂದುಳಿದ ವರ್ಗ), ವಲಯ (ಗ್ರಾಮೀಣ/ನಗರ), ಮಾಧ್ಯಮ (ಕನ್ನಡ/ಇಂಗ್ಲಿಷ್), ವಿಕಲಚೇತನತೆಯ ಬಗ್ಗೆ ದೃಢಪಡಿಸಿಕೊಳ್ಳಬಹುದಾಗಿದೆ. ಮಾಹಿತಿಗೆ ಪ್ರಾಂಶುಪಾಲರು, ಜವಾಹರ್ ನವೋದಯ ವಿದ್ಯಾಲಯ, ಮುಡಿಪು, ಅಂಚೆ ಕುರ್ನಾಡ್-574158 ದೂ.ಸಂ: 08255-261300ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





