ಡಿ.11-12: ಮೋತಿಮಹಲ್‌ನಲ್ಲಿ ಉತ್ಕೃಷ್ಟ ವಿನ್ಯಾಸದ ಪ್ರದರ್ಶನ-ಮಾರಾಟ ಮೇಳ

ಮಂಗಳೂರು, ಡಿ,9: ದೇಶದ 15 ರಾಜ್ಯಗಳ 40 ಪ್ರಮುಖ ನಗರಗಳಲ್ಲಿ 2008ರಿಂದ ಈವರೆಗೆ ಸುಮಾರು 300ಕ್ಕೂ ಹೆಚ್ಚು ಪ್ರದರ್ಶನ ಮತ್ತು ಮಾರಾಟ ಮೇಳೆ ಏರ್ಪಡಿಸಿ ಪ್ರಸಿದ್ಧಿ ಹೊಂದಿರುವ ಫ್ಯಾಶನಿಸ್ಟಾ ಕಂಪನಿಯ ಸಹ ಸಂಸ್ಥೆಯಾದ Fashionavya ಇದೀಗ ನಗರದ ಮೋತಿ ಮಹಲ್‌ನ ಕನ್ವೆನ್‌ಷನ್ ಹಾಲ್‌ನಲ್ಲಿ ಡಿ.11 ಮತ್ತು 12ರಂದು ಪೂ,11ರಿಂದ ರಾತ್ರಿ 8ರವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ.
ವಿವಿಧ ವಿನ್ಯಾಸಗಳ ಫ್ಯಾಷನ್ ಪ್ರಿಯರ ಆಯ್ಕೆಯ ವಸ್ತುಗಳು ಇಲ್ಲಿ ಲಭ್ಯವಿದೆ. ಅಲ್ಲದೆ ಅತ್ಯಾಕರ್ಷಕ ಆಭರಣಗಳು, ಬ್ಯೂಟಿ ಪ್ರೊಡಕ್ಟ್‌ಗಳು, ಕಾಸ್ಮೊಟಿಕ್ಸ್, ಪರ್‌ಫ್ಯೂಮ್ಸ್, ಹೋಮ್ ಡೆಕೋರ್ಸ್, ಗಿಫ್ಟ್ ಐಟಮ್ ಇತ್ಯಾದಿ ನೂರಾರು ಬಗೆಯ ಉತ್ಪನ್ನಗಳು ಪ್ರದರ್ಶನಕ್ಕಿವೆ.
'ಫ್ಯಾಶನವ್ಯಾ' ಸಂಸ್ಥೆಯು ದಿ ಚಾಲೆಂಜರ್ ಗೋಲ್ಡ್ ಅವರ್ಡ್ 2020ನ್ನು (ಎಕ್ಸಿಬಿಶನ್ಸ್ ಅವಾರ್ಡ್) ಪಡೆದು ಈಗಾಗಲೆ ಪ್ರಸಿದ್ಧಿ ಪಡೆದಿದೆ. ಫ್ಯಾಶನ್ ಮತ್ತು ಲೈಫ್‌ಸ್ಟೈಲ್ ಬ್ರಾಂಡೆಂಡ್ ಉತ್ಪನ್ನಗಳನ್ನು ಒಳಗೊಂಡಿರುವ ಈ ಎಕ್ಸಿಬಿಷನ್‌ನಲ್ಲಿ ಮುಂಬೈ, ದೆಹಲಿ, ಕೋಲ್ಕತ್ತಾ, ಜೈಪುರ, ಪುಣೆ, ಚಂಡೀಗಢ, ಆಗ್ರೋ, ಅಹ್ಮದಾಬಾದ್, ಬೆಂಗಳೂರು, ಗೋವಾ, ಸೂರತ್, ಹೈದರಾಬಾದ್, ಮಾಚಲ, ಕೊಯಂಬತ್ತೂರು, ಇಂದೋರ್ ಸಹಿತ ಹಲವು ನಗರಗಳ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ಪ್ರದರ್ಶನಕ್ಕೆ ಗ್ರಾಹಕರಿಗೆ ಪ್ರವೇಶ ಉಚಿತವಾಗಿದ್ದು, ಕೋವಿಡ್ ನಿಯಮಾನುಸಾರ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.







