ಬುರೂಜ್ ಶಾಲಾ ನಾಯಕಿಯಾಗಿ ಅಕ್ಷಯ ಶೆಟ್ಟಿ, ಉಪನಾಯಕನಾಗಿ ಪ್ರತೀಕ್ ಆಯ್ಕೆ

ಬಿ.ಸಿ.ರೋಡ್ : ಕಲಾ ಬಾಗಿಲು ರಝಾನಗರದ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಶಾಲಾ ನಾಯಕಿಯಾಗಿ 9ನೇ ತರಗತಿಯ ಅಕ್ಷಯ ಶೆಟ್ಟಿ ಆಯ್ಕೆಯಾಗಿದ್ದಾರೆ. ಈಕೆ ಮಾವಿನಕಟ್ಟೆ ಕುತ್ಲೋಡಿ ನಿವಾಸಿ ಸುರೇಶ ಶೆಟ್ಟಿ ಮತ್ತು ಉಷಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಯೂ ಪ್ರತಿಭಾವಂತೆಯಾಗಿದ್ದಾರೆ. ಕರಾಟೆಯಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳು ಪಡೆದುಕೊಂಡಿದ್ದಾರೆ.
ಉಪನಾಯಕನಾಗಿ 9ನೇ ತರಗತಿಯ ಪ್ರತೀಕ್ ಆಯ್ಕೆಯಾಗಿದ್ದಾರೆ. ಈತ ಮಣ್ಣೂರು ಇರ್ವತ್ತೂರು ಗ್ರಾಮದ ನಿವಾಸಿ ನಾಗೇಶ್ ಮತ್ತು ವಿಜಯ ದಂಪತಿಗಳ ಪುತ್ರ. ಶಾಲೆಯಲ್ಲಿ ನಾಯಕ ಮತ್ತು ಉಪ ನಾಯಕನಿಗೆ ಆರು ಮಂದಿ ಸ್ಪರ್ಧಾಳುಗಳಿದ್ದು ಗುಪ್ತ ಮತದಾನದ ಮೂಲಕ ಆಯ್ಕೆಗೊಂಡಿದ್ದಾರೆ.
ಪ್ರತಿ ತರಗತಿವಾರು ಚುನಾವಣೆ ಪ್ರಕ್ರಿಯೆ ನಡೆಸಿ ಮತದಾನ ನಡೆಯಿತು. ಗ್ರಹ ಮಂತ್ರಿಯಾಗಿ ರಿದಾನ್ ರಹ್ಮಾನ್ ಗಾಝಿ, ಶಿಸ್ತು ಪಾಲನಾ ಮಂತ್ರಿಯಾಗಿ ತಸ್ನಿಯಾ ಮಣಿಯಾರ್, ಆರೋಗ್ಯ ಮಂತ್ರಿಯಾಗಿ ಸಾನಿಕಾ ಮತ್ತು ಸ್ವಚ್ಛತಾ ಮಂತ್ರಿಯಾಗಿ ಶೇಖ್ ಮುಹಮ್ಮದ್ ಜುನೈದ್ ನಿಯುಕ್ತಿಗೊಂಡರು.
ಚುನಾವಣಾ ಪ್ರಕ್ರಿಯೆಯು ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್, ವಿಮಲಾ, ಶಿಕ್ಷಕಿಯರಾದ ಎಲ್ಸಿ, ಚೇತನ , ಸಂಧ್ಯಾ , ಮಮತಾ , ವನಿತಾ ಶೆಟ್ಟಿ, ಶಾಲಿನಿ, ಅನ್ನಪೂರ್ಣೇಶ್ವರಿ, ನೂರ್ಜಹಾನ್, ಮಮತಾ ಶೆಟ್ಟಿ, ಮತ್ತು ಜಲಾಲುದ್ದೀನ್ ರವರ ಮೇಲುಸ್ತುವಾರಿ ಹಾಗೂ ಮಾರ್ಗದರ್ಶನದೊಂದಿಗೆ ನಡೆಯಿತು.







