ಬಿಐಟಿಯಲ್ಲಿ 'ಎಜ್ಯು ಮ್ಯಾಜಿಕ್' ಕಾರ್ಯಕ್ರಮ
![ಬಿಐಟಿಯಲ್ಲಿ ಎಜ್ಯು ಮ್ಯಾಜಿಕ್ ಕಾರ್ಯಕ್ರಮ ಬಿಐಟಿಯಲ್ಲಿ ಎಜ್ಯು ಮ್ಯಾಜಿಕ್ ಕಾರ್ಯಕ್ರಮ](https://www.varthabharati.in/sites/default/files/images/articles/2021/12/10/317173-1639156383.jpg)
ಕೊಣಾಜೆ: ಮಂಗಳೂರಿನ ಬ್ಯಾರೀಸ್ ಇನ್ಸಿಟೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಇಂಡಕ್ಷನ್ ಪ್ರೋಗ್ರಾಮ್ -2021 ರಲ್ಲಿ ಬಿಐಟಿಯ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರೊಫೆಸರ್, ರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಮುಬೀನಾ ಪರ್ವೀನ್ ತಾಜ್ ಇವರ 'ಶೈಕ್ಷಣಿಕ ಜಾದೂ' ಕಾರ್ಯಕ್ರಮವು ನಡೆಯಿತು.
ಬಿಐಟಿಯ ಪ್ರೊ. ಡಾ.ವಿನುತಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾದೂ ಮೂಲಕ ಮನೋವಿಕಾಸ ಹಾಗೂ ವೈಜ್ಞಾನಿಕ ಅರಿವನ್ನು ಬೆಳೆಸಲು ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಈ ಮೂಲಕ ಅರಿವು ಮೂಡಿಸುವ ಪ್ರಯತ್ನದಲ್ಲಿ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಬಿಐಟಿ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Next Story