ಡಿಸೇಲ್ ಕಳವು ಪ್ರಕರಣ: ಐವರ ಬಂಧನ
ಬೈಂದೂರು, ಡಿ.10: ಶಿರೂರು ಸಂಕದಗುಂಡಿ ಎಂಬಲ್ಲಿ ಡಿ.10ರಂದು ಟ್ಯಾಂಕರ್‌ಗಳಿಂದ ಡಿಸೇಲ್ ಕಳವು ಮಾಡುತ್ತಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿಯ ಮಾರ್ದಾಳ ನಿವಾಸಿ ಕಿರಣ್(32), ಪುತ್ತೂರಿನ ಮುಹಮ್ಮದ್ ಮುಸ್ತಾಫ್(34), ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯ ಅಶೋಕ್(30), ರೂಪೇಶ್ ಪೂಜಾರಿ(27) ಹಾಗೂ ಶಿರೂರು ಅಳ್ವೆಗದ್ದೆಯ ಮೋಹನ ಪೂಜಾರಿ(42) ಬಂಧಿತ ಆರೋಪಿಗಳು.
ನಾಲ್ಕು ಡೀಸೆಲ್ ಸಾಗಾಟದ ಟ್ಯಾಂಕರ್‌ನಿಂದ ಡಿಸೇಲ್ ಕಳವು ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು ಪ್ರತಿ ಲಾರಿಯ ಡಿಸೇಲ್ ಟ್ಯಾಂಕಿನಿಂದ 15-20 ಲೀಟರ್ ಡಿಸೇಲ್ ಕಳವು ಮಾಡಿ ಶಿರೂರಿನ ಮೋಹನ ಪೂಜಾರಿಯವರಿಗೆ ನೀಡುತ್ತಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳಿಂದ ಒಟ್ಟು 4 ಕ್ಯಾನ್ ಗಳಲ್ಲಿನ 6500ರೂ. ಮೌಲ್ಯದ ಸುಮಾರು 73 ಲೀಟರ್ ಡಿಸೇಲ್ನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.