ಮಕ್ಕಳಿಗೆ ಮೊಟ್ಟೆ ನೀಡುತ್ತಿರುವುದನ್ನು ವಿರೋಧಿಸುತ್ತಿರುವ ಮಠಾಧೀಶರ ನಡೆ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು,ಡಿ.10: ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ರಾಜ್ಯದ ಎಲ್ಲಾ ಶಾಲೆಗಳಿಗೆ ವಿಸ್ತರಿಸಲು ಮನವಿ ಮಾಡಿ ಹಾಗೂ ಮೊಟ್ಟೆ ನೀಡುತ್ತಿರುವುದನ್ನು ಅಕ್ಷೇಪಿಸುತ್ತಿರುವ ಮಠಾಧೀಶರ ನಡೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿ, ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯನ್ನು ಹೋಗಲಾಡಿಸಬೇಕೆಂಬ ಮಹಾತ್ವಕಾಂಷೆಯಿಂದ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟದ ಜೊತೆ ಮೊಟ್ಟೆ, ಬಾಳೆಹಣ್ಣು , ಹಾಲು ನೀಡುತ್ತಿರುವುದು ಸ್ವಾಗತಾರ್ಹ, ಆದರೆ ಕೆಲವು ಮಠಾಧೀಪತಿಗಳು ಮೊಟ್ಟೆ ನೀಡುತ್ತಿರುವುದನ್ನು ವಿರೋಧಿಸುತ್ತಿರುವುದು ತೀವ್ರ ಖಂಡನೀಯಾವಾಗಿದೆ ಎಂದು ಹೇಳಿದರು.
ಮಠಾಧೀಶರ ಈ ನಡೆ ವಿಕೃತ ಮನಸ್ಥಿತಿಯ ಮತ್ತು ಪರಮಾವಧಿ ಮತ್ತು ನಾಗರೀಕ ಸಮಾಜ ತಲೆತಗ್ಗಿಸುವಂತಹದ್ದು , ಮೋಟ್ಟೆ ನೀಡುತ್ತಿರುವುದನ್ನು ವಿರೋಧಿಸುತ್ತಿರುವುದು ಮಠಾಧಿಪತಿಗಳು ಮತ್ತು ಕೆಲವು ಜಾತಿ ಸಂಘಟನೆಗಳು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಮಾಡುವುದರ ಮೂಲಕ ಪಂಕ್ತಿಭೇಧ ಮತ್ತು ಜಾತ್ಯಾತೀತ ಮೌಲ್ಯಗಳಿಗೆ ಅಪಪ್ರಚಾರ ಮಾಡುತ್ತಿವೆ ಎಂದು ಖಂಡಿಸಿದ್ದಾರೆ.
ಈ ಮೂಲಕ ಧಾರ್ಮಿಕ ರಾಜಕಾರಣ ಮಾಡುತ್ತಿರುವ ಮಠಾಧಿಪತಿಗಳು ರಾಜಕಾರಣವನ್ನೇ ಮಾಡುವುದದರೆ, ನೀವು ತೊಟ್ಟಿರುವ ಕಾವಿಯನ್ನು ಕಳಚಿ ನಂತರ ರಾಜಕಾರಣಕ್ಕೆ ಬನ್ನಿ ಅದು ಬಿಟ್ಟು ನಿಮ್ಮ ರಾಜಕೀಯ ತೆವಲಿಗೆ ಮಕ್ಕಳ ಆಹಾರದ ವಿಷಯದಲ್ಲಿ ಆಹಾರ ಹಾಗೂ ಧಾರ್ಮಿಕ ರಾಜಕಾರಣವನ್ನು ಮಾಡಬೇಡಿ ಇದನ್ನು ಮುಂದುವರಿಸಿದರೆ ನಿಮ್ಮ ವಿರುದ್ಧ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಸರ್ಕಾರವು ಕೂಡಲೇ ರಾಜ್ಯದ ಎಲ್ಲಾ ಶಾಲೆಗಳಿಗೆ ಮೊಟ್ಟೆ ನೀಡುವುದನ್ನು ವಿಸ್ತರಿಸಲಿ ಎಂದು ಪತ್ರ ಚಳುವಳಿಯ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷರಾದ ಹೆಚ್.ಎಸ್.ಪ್ರಕಾಶ್, ಎನ್.ಆರ್.ನಾಗೇಶ್, ಯೋಗೀಶ್ ಉಪ್ಪಾರ್, ಲೋಕೋಶ್ ಕುಮಾರ್, ಮಾದಪುರ ಆರ್.ಕೆ.ರವಿ, ಮಹೇಂದ್ರ ಕಾಗಿನೆಲೆ, ಜಾಹಳ್ಳಿ ಪುಟ್ಟಸ್ವಾಮಿ, ಹಿನಕಲ್ ಪ್ರಕಾಶ್ ಹಾಗೂ ಮುಂತಾದವರು ಭಾಗವಹಿಸಿದ್ದರು.







