Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಸ್ಯಾಹಾರದ ಹೆಸರಲ್ಲಿ ‘ಧಾರ್ಮಿಕ...

ಸಸ್ಯಾಹಾರದ ಹೆಸರಲ್ಲಿ ‘ಧಾರ್ಮಿಕ ಅಸಹಿಷ್ಣುತೆ’

ವಾರ್ತಾಭಾರತಿವಾರ್ತಾಭಾರತಿ11 Dec 2021 12:05 AM IST
share
ಸಸ್ಯಾಹಾರದ ಹೆಸರಲ್ಲಿ ‘ಧಾರ್ಮಿಕ ಅಸಹಿಷ್ಣುತೆ’

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ನಾವೇನು ತಿನ್ನ ಬೇಕು ಎನ್ನುವುದನ್ನು ನೀವು ಹೇಗೆ ನಿರ್ಧರಿಸುತ್ತೀರಿ?’’ ಈ ಪ್ರಶ್ನೆಯನ್ನು ಕೇಳಿರುವುದು ಗುಜರಾತ್ ಹೈಕೋರ್ಟ್. ಅಹ್ಮದಾಬಾದ್ ಕಾರ್ಪೊರೇಶನ್‌ನ ಮುಂದೆ ಹೈಕೋರ್ಟ್‌ನ ನ್ಯಾಯಾಧೀಶರು ಈ ಪ್ರಶ್ನೆಯನ್ನು ಇಟ್ಟಿದ್ದಾರೆ. ಇತ್ತೀಚೆಗಷ್ಟೇ ಅಹ್ಮದಾಬಾದ್ ಕಾರ್ಪೊರೇಶನ್‌ನ ಕೆಲವು ಸದಸ್ಯರು ‘ಬೀದಿಯಲ್ಲಿ ಮಾಂಸಾಹಾರ ಮಾರಾಟ’ ಮಾಡುವುದರ ಕುರಿತಂತೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಪೊರೇಶನ್ ಏಕಾಏಕಿ ಬಡ ಬೀದಿ ವ್ಯಾಪಾರಿಗಳ ಮಾಂಸಾಹಾರದ ಅಂಗಡಿಗಳನ್ನು ಧ್ವಂಸಗೊಳಿಸಿತ್ತು. ಹಲವು ತಳ್ಳುಗಾಡಿಗಳನ್ನು ಏಕಾಏಕಿ ವಶಪಡಿಸಿಕೊಂಡಿತ್ತು. ಇದರ ವಿರುದ್ಧ ಬೀದಿ ವ್ಯಾಪಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಅಹ್ಮದಾಬಾದ್ ನಗರ ಪಾಲಿಕೆಗೆ ಛೀಮಾರಿ ಹಾಕಿತ್ತು. ಮಾತ್ರವಲ್ಲ ‘‘ನಿಮಗೆ ಮಾಂಸಾಹಾರ ಇಷ್ಟವಿಲ್ಲವೇ? ಅದು ನಿಮ್ಮ ಸಮಸ್ಯೆ. ನಾನು ಮನೆಯ ಹೊರಗೆ ಏನನ್ನು ತಿನ್ನಬೇಕು ಎನ್ನುವುದನ್ನು ತೀರ್ಮಾನಿಸುವ ಅಧಿಕಾರವನ್ನು ನಿಮಗೆ ಕೊಟ್ಟವರಾರು? ಇಂದು ಮಾಂಸ ತಿನ್ನಬೇಡಿ ಎನ್ನುತ್ತೀರಿ. ನಾಳೆ ಮಧುಮೇಹಕ್ಕೆ ಜ್ಯೂಸ್ ಒಳ್ಳೆಯದಲ್ಲ ಎಂದು ಕಬ್ಬಿನ ಹಾಲಿನ ಮಾರಾಟ ನಿಷೇಧಿಸಬೇಕು ಎಂದು ಒತ್ತಾಯ ಮಾಡಬಹುದು. ನನ್ನ ಆಹಾರವನ್ನು ನೀವು ಹೇಗೆ ತೀರ್ಮಾನಿಸುತ್ತೀರಿ?’’ ಎಂದು ಪ್ರಶ್ನಿಸಿತ್ತು. ಮಾತ್ರವಲ್ಲ, ವಶಪಡಿಸಿಕೊಂಡ ಎಲ್ಲ ತಳ್ಳುಗಾಡಿಗಳನ್ನು ಮರಳಿಸಬೇಕು ಎಂದು ಆದೇಶಿಸಿತ್ತು. ಅಹ್ಮದಾಬಾದ್‌ನ ಹೈಕೋರ್ಟ್ ಎತ್ತಿದ ಪ್ರಶ್ನೆ, ಇಡೀ ದೇಶಕ್ಕೆ ಅನ್ವಯವಾಗುವಂತಹದು.

ರಸ್ತೆಯಲ್ಲಿ ಮಾಂಸಾಹಾರ ಮಾರಿದರೆ ಧಾರ್ಮಿಕ ಭಾವನೆಗಳಿಗೆ ಅಡ್ಡಿಯಾಗುತ್ತದೆ ಎನ್ನುವ ಅಸಹನೆಯೇ, ಕರ್ನಾಟಕದಲ್ಲಿ ಬಡ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವಾಗುತ್ತದೆ ಎಂಬ ರೀತಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ. ಮಹಾನಗರ ಪಾಲಿಕೆಗೆ ಗುಜರಾತ್ ಹೈಕೋರ್ಟ್ ನೀಡಿದ ಕಟುವಾದ ಉತ್ತರವನ್ನೇ, ಕರ್ನಾಟಕದಲ್ಲಿರುವ ಮೊಟ್ಟೆ ವಿರೋಧಿಗಳಿಗೂ ನೀಡಬೇಕಾಗಿದೆ. ‘ನೀವು ಮಾಂಸಾಹಾರ ಸೇವಿಸುವ ಮೂಲಕ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದೀರಿ’ ಎನ್ನುವ ಅಸಹನೆ ಇಂದು ದೇಶಾದ್ಯಂತ ವಿಸ್ತರಿಸುತ್ತಿದೆ. ಅದೂ ಶೇ. 90ರಷ್ಟು ಮಂದಿ ಮಾಂಸಾಹಾರ ಸೇವಿಸುವ ದೇಶದಲ್ಲಿ. ಈ ದೇಶದ ಚುಕ್ಕಾಣಿ, ಶೇ. 10ರಷ್ಟಿರುವ ಸಸ್ಯಾಹಾರಿಗಳ ಕೈಗೆ ಸಿಕ್ಕಿದೆ ಎನ್ನುವುದನ್ನು ಇದು ಹೇಳುತ್ತಿದೆ. ಆದುದರಿಂದಲೇ ಸಸ್ಯಾಹಾರಿಗಳು ಉಳಿದವರ ಆಹಾರಗಳನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ‘ಈ ದೇಶದ ಬಹುಸಂಖ್ಯಾತರ ಭಾವನೆಗಳನ್ನು ನಾವು ಒಪ್ಪಿಕೊಳ್ಳಲು ಸಿದ್ಧರಿಲ್ಲ, ಅವರ ಆಹಾರ ಪದ್ಧತಿಗಳನ್ನು ಗೌರವಿಸುವುದಿಲ್ಲ’ ಎನ್ನುವುದನ್ನು ಈ ಸಸ್ಯಾಹಾರಿ ಧಾರ್ಮಿಕ ಅಸಹಿಷ್ಣುಗಳು ಬಹಿರಂಗವಾಗಿ ಸಾರುತ್ತಿದ್ದಾರೆ ಮತ್ತು ತಮ್ಮ ಉದ್ದೇಶವನ್ನು ಅವರು ಬಹುಸಂಖ್ಯಾತ ಮಾಂಸಾಹಾರಿಗಳ ಮೂಲಕವೇ ಸಾಧಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ದೇಶದಲ್ಲಿ ಮಾಂಸಾಹಾರ ಎನ್ನುವುದು ಒಂದು ಆಹಾರ ಪದ್ಧತಿ ಮಾತ್ರವಲ್ಲ, ಅದು ಕೋಟ್ಯಂತರ ವ್ಯವಹಾರಗಳನ್ನು ನಡೆಸುವ ಒಂದು ಉದ್ಯಮ ಕೂಡ ಆಗಿದೆ. ಈ ಮಾಂಸಾಹಾರವನ್ನು ಹತ್ತು ಹಲವು ಬೃಹತ್ ಉದ್ಯಮಗಳು ಅವಲಂಬಿಸಿಕೊಂಡಿವೆ.

ಈ ದೇಶದ ಹೈನೋದ್ಯಮವನ್ನು, ಚರ್ಮೋದ್ಯಮವನ್ನು ಪೊರೆಯುವಲ್ಲಿ ಮಾಂಸಾಹಾರಿಗಳ ಪಾಲು ಬಹುದೊಡ್ಡದಿದೆ. ಇಂತಹ ಸಂದರ್ಭದಲ್ಲಿ, ಬೀದಿ ವ್ಯಾಪಾರಿಗಳು ‘ಮಾಂಸಾಹಾರ ಪದಾರ್ಥಗಳನ್ನು ಮಾರಬಾರದು’ ಎನ್ನುವವರು ಪರೋಕ್ಷವಾಗಿ ಈ ದೇಶದ ಅರ್ಥವ್ಯವಸ್ಥೆಗೆ ಕೊಡಲಿ ಏಟು ಹಾಕುತ್ತಿದ್ದಾರೆ. ಈಗಾಗಲೇ ಲಾಕ್‌ಡೌನ್‌ನಿಂದಾಗಿ ಬೀದಿ ವ್ಯಾಪಾರಿಗಳು ಸರ್ವನಾಶವಾಗಿದ್ದಾರೆ. ಇನ್ನೇನು ಮತ್ತೆ ಹೊಸದಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ, ‘ಧಾರ್ಮಿಕ ಭಾವನೆ’ಗಳ ಹೆಸರಲ್ಲಿ ವ್ಯಾಪಾರಿಗಳ ಬದುಕನ್ನು ನರಕವಾಗಿಸಿದವರ ಎದೆಯೊಳಗೆ ಹನಿಯಷ್ಟಾದರೂ ಮಾನವೀಯತೆ ಇದೆ ಎಂದು ಊಹಿಸುವುದು ಕಷ್ಟ. ಈ ದೇಶದಲ್ಲಿ ಬೀಫ್ ಮತ್ತು ಇತರ ಮಾಂಸಗಳ ಮಾರಾಟ ನಮ್ಮ ವಿದೇಶ ವಿನಿಮಯದಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಪರದೇಶಕ್ಕೆ ಮಾಂಸಗಳನ್ನು ರಫ್ತು ಮಾಡುವುದು ಈ ‘ಧಾರ್ಮಿಕ ಅಸಹಿಷ್ಣು’ಗಳ ಭಾವನೆಗಳಿಗೆ ಯಾವತ್ತೂ ಧಕ್ಕೆ ತಂದಿಲ್ಲ. ಯಾರೋ ಬಡವರು ಮಾಂಸಾಹಾರಗಳನ್ನು ಮಾರುತ್ತಿದ್ದರೆ ಮತ್ತು ಮಾಂಸಾಹಾರದ ಮೂಲಕ ಪೌಷ್ಟಿಕ ಆಹಾರವನ್ನು ಸೇವಿಸುತ್ತಿದ್ದರೆ ಇವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುತ್ತದೆ. ಹಸಿದ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವುದರಿಂದ ಒಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದಾದರೆ ನಾವು ಪ್ರಶ್ನಿಸಬೇಕಾದದ್ದು ಅವರ ಧಾರ್ಮಿಕ ಅಸಹಿಷ್ಣುತೆಯನ್ನೇ ಹೊರತು, ಮಕ್ಕಳಿಗೆ ನೀಡುವ ಮೊಟ್ಟೆಯನ್ನಲ್ಲ. ಅಹ್ಮದಾಬಾದ್‌ನಲ್ಲಿ ಏನು ನಡೆಯುತ್ತಿದೆಯೋ ಅದರ ಇನ್ನೊಂದು ರೂಪ ಕರ್ನಾಟಕ ರಾಜ್ಯದಲ್ಲಿ ಪ್ರದರ್ಶನವಾಗುತ್ತಿದೆ. ಅವರಿಗೂ ಇವರಿಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಕೊರೋನ ಮತ್ತು ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಬಡತನ , ಅಪೌಷ್ಟಿಕತೆ ಹೆಚ್ಚುತ್ತಿರುವ ದಿನಗಳಲ್ಲಿ ಬಡ ಮಕ್ಕಳಿಗೆ ಮೊಟ್ಟೆ ಕೊಡುವ ಸರಕಾರದ ನಿರ್ಧಾರವನ್ನು ಪ್ರಶಂಸಿಸುವ ಧರ್ಮವೇ ಹೆಚ್ಚು ಮಾನವೀಯವಾದ ಧರ್ಮ.

ಈಗಾಗಲೇ ಮೊಟ್ಟೆಯಿಂದಾಗಿ ಶಾಲೆಗಳಲ್ಲಿ ಹಾಜರಾತಿಯ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಮಾಧ್ಯಮಗಳ ವರದಿಗಳಿಂದ ಬಹಿರಂಗವಾಗಿದೆ. ಅಂದರೆ ಮಕ್ಕಳು ಮೊಟ್ಟೆಯನ್ನು ಬಯಸುತ್ತಾರೆ. ಅಷ್ಟೇ ಅಲ್ಲ, ಸ್ವಸ್ಥ ಸಮಾಜ ಮೊಟ್ಟೆಯನ್ನು ಬಯಸುತ್ತಿದೆ. ಮೊಟ್ಟೆಯಲ್ಲಿ ಸಿಗುವ ಪೌಷ್ಟಿಕತೆ ಅದೆಷ್ಟು ಬಾಳೆಹಣ್ಣು ಕೊಟ್ಟರೂ ಸಿಗದು ಎನ್ನುವುದು ವೈದ್ಯರ ಮಾತು. ಎಲ್ಲಕ್ಕಿಂತ ಮುಖ್ಯವಾಗಿ, ಮೊಟ್ಟೆ ತಿನ್ನದವರಿಗೆ ಬಾಳೆ ಹಣ್ಣು ನೀಡುವ ವ್ಯವಸ್ಥೆಯೂ ಇದೆ. ಹೀಗಿರುವಾಗಲೂ ಮೊಟ್ಟೆಯನ್ನು ಪ್ರಶ್ನಿಸುತ್ತಾರೆ ಎಂದರೆ, ಅವರಿಗೆ ಬಡವರ ಮಕ್ಕಳು ಪೌಷ್ಟಿಕತೆಯ ಆಹಾರ ಪಡೆಯುವುದೇ ಇಷ್ಟವಿಲ್ಲ. ಇಂತಹ ಮನಸ್ಥಿತಿಯ ಜನರ ಧಾರ್ಮಿಕ ಭಾವನೆಗಳು ಸಮಾಜಕ್ಕೆ ಹೆಚ್ಚು ಹಾನಿಕರವಾಗಿದೆ. ಆದುದರಿಂದ, ನಾವು ಇಂತಹ ಧಾರ್ಮಿಕತೆಯ ಹೆಸರಿನಲ್ಲಿ ಆಹಾರ ಅಸಹಿಷ್ಣುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಾಗಿದೆ. ‘ಹಸಿದ ಮಕ್ಕಳ ಆಹಾರ ಕಸಿಯುವ ಧರ್ಮ’ ಯಾವುದೇ ಆಗಿರಲಿ, ಅವುಗಳನ್ನು ವಿರೋಧಿಸಬೇಕು. ಧಾರ್ಮಿಕ ಮುಖಂಡರು ತಮ್ಮನ್ನು ತಾವು ತಿದ್ದಿಕೊಳ್ಳದೇ ಹೋದರೆ, ತಾವು ಅನುಸರಿಸುತ್ತಿರುವ ಧರ್ಮದ ಮೇಲೆ ಅದು ಕೆಟ್ಟ ಪರಿಣಾಮವನ್ನು ಬೀರಬಹುದು. ಆ ಧರ್ಮದ ಕುರಿತಂತೆ ಜನರು ತಪ್ಪು ತಿಳುವಳಿಕೆಯನ್ನು ಹೊಂದುವ ಸಾಧ್ಯತೆಗಳಿವೆ.

ಆದುದರಿಂದ, ಗುಜರಾತ್ ಹೈಕೋರ್ಟ್ ನೀಡಿದ ತೀರ್ಪು, ಅಹ್ಮದಾಬಾದ್‌ನ ಮಹಾನಗರಪಾಲಿಕೆಗಷ್ಟೇ ಸೀಮಿತವಾಗಬೇಕಾಗಿಲ್ಲ. ಮೊಟ್ಟೆ ನೀಡುವ ಕುರಿತಂತೆ ಅಸಹನೆ ವ್ಯಕ್ತಪಡಿಸುತ್ತಿರುವ ಕರ್ನಾಟಕದ ಕೆಲವು ಧಾರ್ಮಿಕ ಅಸಹಿಷ್ಣುಗಳಿಗೂ ಇದು ಅನ್ವಯವಾಗುತ್ತದೆ. ‘ನಿಮಗೆ ಬೇಡ ಎಂದರೆ ಅದು ನಿಮ್ಮ ಸಮಸ್ಯೆ. ನೀವು ತಿನ್ನಬೇಡಿ. ನಮಗೇಕೆ ನಿಮ್ಮ ನಿಯಮವನ್ನು ಹೇರುತ್ತೀರಿ’ ಎನ್ನುವ ಹೈಕೋರ್ಟ್ ನ್ಯಾಯಾಧೀಶರ ಪ್ರಶ್ನೆ ಸಕಲ ಕನ್ನಡಿಗರ ಪ್ರಶ್ನೆಯೂ ಹೌದು. ಇತರರ ಆಚಾರ ವಿಚಾರಗಳನ್ನು ಗೌರವಿಸುತ್ತಾ, ನಮ್ಮ ಧರ್ಮವನ್ನು ಅನುಸರಿಸುವುದು ಭಾರತದ ಬಹುತ್ವಕ್ಕೆ ಶೋಭೆ ತರುತ್ತದೆ. ತನ್ನ ಧರ್ಮ ನಿಷೇಧಿಸದ್ದನ್ನು ಇತರರೂ ಸ್ವೀಕರಿಸಬಾರದು ಎನ್ನುವುದು ಸಂಕುಚಿತ ಮನಸ್ಥಿತಿ ಮಾತ್ರವಲ್ಲ, ಸಂವಿಧಾನ ವಿರೋಧಿ ಮನಸ್ಥಿತಿಯೂ ಕೂಡ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X