Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೆಕಾಲೆ ಮತ್ತೆ ಕಟಕಟೆಯಲ್ಲಿ

ಮೆಕಾಲೆ ಮತ್ತೆ ಕಟಕಟೆಯಲ್ಲಿ

ಡಾ. ಬಿ. ಭಾಸ್ಕರ ರಾವ್ಡಾ. ಬಿ. ಭಾಸ್ಕರ ರಾವ್11 Dec 2021 12:03 AM IST
share
ಮೆಕಾಲೆ ಮತ್ತೆ ಕಟಕಟೆಯಲ್ಲಿ

ಪಾಶ್ಚಾತ್ಯ ಸಂಸ್ಕೃತಿ ಮೂಲವಾದ ನಮ್ಮ ಶಿಕ್ಷಣ ಕ್ರಮ ಬದಲಾಗಬೇಕು. ಅದನ್ನು ನಾವು ಆದಷ್ಟು ಬೇಗ ಬದಲಾಯಿಸಿ ನಮ್ಮ ಭಾರತೀಯ ಶಿಕ್ಷಣ ಕ್ರಮವನ್ನು ಜಾರಿಗೆ ತರಬೇಕು ಎಂದು ವಾದಿಸುವವರ ಕಣ್ಣು ಇರುವುದು ಮುಖ್ಯವಾಗಿ ಶಾಲಾ ಕಾಲೇಜು ಹಂತದ ಇತಿಹಾಸ ಪಠ್ಯಗಳ ಮೇಲೆಯೇ ಹೊರತು ವಿಜ್ಞಾನ, ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಪಠ್ಯಗಳ ಮೇಲಲ್ಲ. ನಮ್ಮ ಪ್ರಭುತ್ವದ ಚುನಾವಣಾ ಪ್ರಣಾಳಿಕೆಯ ಭರವಸೆಗಳಿಗೆ ಪೂರಕವಾಗುವಂತೆ ಪಠ್ಯಪುಸ್ತಕಗಳ ಪುನರ್‌ರಚನೆಯಾಗಬೇಕು, ಇತಿಹಾಸದ (ನಾವು ಹೇಳುವಂತಹ) ತಪ್ಪುಗಳನ್ನು ಸರಿಪಡಿಸಿ ಇತಿಹಾಸವನ್ನು ‘ಸರಿಪಡಿಸಿ’ ತಿದ್ದಿ ಬರೆಯಬೇಕು ಎಂಬ ಬೇಡಿಕೆ ಈಡೇರಿದರೆ ಇಂತಹ ವಾದಿಗಳ ಪಾಲಿಗೆ ನಮ್ಮ ಇಡೀ ಶಿಕ್ಷಣ ಕ್ರಮ ಸರಿಯಾದಂತಾಗುತ್ತದೆ.



 ಭಾರತದ ಶಿಕ್ಷಣ ಪದ್ಧತಿ ಪ್ರಭುತ್ವಕ್ಕೆ ಒಂದು ಪ್ರಯೋಗಶಾಲೆಯಾದರೆ ಹಲವು ರೀತಿಯ ಇಸಂ ಅಥವಾ ಸಿದ್ಧಾಂತಶರಣರಾಗಿರುವ ತಥಾಕಥಿತ ಶಿಕ್ಷಣತಜ್ಞರಿಗೆ ಎಷ್ಟು ಬೇಕಾದರೂ ಕಲ್ಲುಗಳನ್ನು ಎಸೆಯಬಹುದಾದ ಗಾಜಿನಮನೆಯಾಗಿದೆ. ಇಂದಿನ ಶಿಕ್ಷಣ ಕ್ರಮದ ಎಲ್ಲಾ ದೋಷಗಳಿಗೂ ಇಂಗ್ಲಿಷ್ ಹಾಗೂ ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿದ್ದ ಶಿಕ್ಷಣಕ್ರಮವನ್ನು ನಾವು ಇಂದಿಗೂ ಮುಂದುವರಿಸುತ್ತಿರುವುದೇ ಕಾರಣವೆಂದು ಸಾರಾಸಗಟಾಗಿ ಹೇಳಲಾಗುತ್ತಿದೆ. ಭಾರತದಲ್ಲಿ ಇಂಗ್ಲಿಷ್ ಭಾಷೆಯ ಮೂಲಕ ಆಧುನಿಕ ಶಿಕ್ಷಣ ವ್ಯವಸ್ಥೆ ಅಸ್ತಿತ್ವಕ್ಕೆ ಬರಲು ಮೂಲಕಾರಣನಾದ ಥಾಮಸ್ ಬಾಬಿಂಗ್ಟನ್ ಮೆಕಾಲೆಯನ್ನೇ ಮತ್ತೆ ಮತ್ತೆ ಕಟಕಟೆಗೆ ತಂದು ನಿಲ್ಲಿಸಲಾಗುತ್ತಿದೆ.

   1835ರ ಇಂಗ್ಲಿಷ್ ಶಿಕ್ಷಣ ಕಾಯ್ದೆಗೆ ಸಂಬಂಧಿಸಿ ಮೆಕಾಲೆ ಸಿದ್ಧಪಡಿಸಿದ ‘ಮಿನಿಟ್ ಆನ್ ಇಂಡಿಯನ್ ಎಜುಕೇಷನ್’ನಲ್ಲಿ ಆತ ‘‘ರಕ್ತ ಹಾಗೂ ಮೈಬಣ್ಣದಲ್ಲಿ ಭಾರತೀಯರಾಗಿರುವ, ಆದರೆ ಅಭಿರುಚಿ, ಅಭಿಪ್ರಾಯಗಳು, ನೀತಿಗಳು ಹಾಗೂ ಬುದ್ಧಿಮತ್ತೆಯಲ್ಲಿ ಇಂಗ್ಲಿಷರಾಗಿರುವ ವ್ಯಕ್ತಿಗಳ ಒಂದು ವರ್ಗವನ್ನು ಬ್ರಿಟಿಷ್ ಪ್ರಭುತ್ವ ಉತ್ಪಾದಿಸುವ ಅಗತ್ಯವಿದೆ’’ ಎಂದು ವಾದಿಸಿದ. ಈ ವರ್ಗ ಮುಖ್ಯವಾಗಿ, ಬ್ರಿಟಿಷರು ನಡೆಸುತ್ತಿದ್ದ ಆಡಳಿತದಲ್ಲಿ ಅವರಿಗೆ ವಿಧೇಯರಾಗಿ ಕೆಲಸ ಮಾಡುವ ಶ್ರೇಣೀಕೃತ ಸರಕಾರಿ ನೌಕರರ ವರ್ಗವಾಗಬೇಕೆನ್ನುವುದೇ ಮೆಕಾಲೆಯ ಇಂಗಿತವಾಗಿತ್ತು. ಭಾರತದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅಜ್ಞಾನಿಯಾಗಿದ್ದ ಆತ ‘‘ಯುರೋಪಿಯನ್ ಗ್ರಂಥಾಲಯದ ಕೇವಲ ಒಂದು ಕಪಾಟು ಭಾರತ ಮತ್ತು ಅರೇಬಿಯಾದ ಸಂಪೂರ್ಣ ದೇಶಿ ಸಾಹಿತ್ಯಕ್ಕೆ ಸಮಾನ’’ ಎಂಬ ಅರ್ಥದ, ಸಾಮ್ರಾಜ್ಯಶಾಹಿ ಧೋರಣೆಗೆ ಸಹಜವಾದ, ಉದ್ಧಟತನದ ಮಾತನ್ನು ಬರೆದಿದ್ದ.

ಅದೇನಿದ್ದರೂ ಆತನ ಶಿಫಾರಸಿಗನುಗುಣವಾಗಿ ಇಂಗ್ಲಿಷ್ ಭಾಷೆಯ ಮೂಲಕ ನೀಡಲಾಗುವ ಬ್ರಿಟಿಷ್ ಶಿಕ್ಷಣ ಕ್ರಮ ಈ ದೇಶದಲ್ಲಿ ಅನುಷ್ಠಾನಗೊಂಡಿತು. ಈ ಕ್ರಮದ ಹಲವು ದೋಷಗಳೇನೇ ಇದ್ದರೂ, ಈ ಶಿಕ್ಷಣ ಕ್ರಮದಿಂದಾಗಿ ಭಾರತ, ಭಾರತೀಯರು ವಿಶ್ವಾತ್ಮಕವಾದ ಶಿಕ್ಷಣ ಪಡೆಯುವುದು ಸಾಧ್ಯವಾಯಿತು. ಇಂಗ್ಲಿಷ್ ಎಂಬ ಶಂಖದ ಮೂಲಕ ಬಂದ ಈ ತೀರ್ಥದಿಂದಾಗಿಯೇ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂದೆ ನಿಂತು ನಾಯಕರಾಗಿ ಹೋರಾಡಿದ ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ದಾದಾಭಾಯಿ ನವರೋಜಿ, ಭಗತ್ ಸಿಂಗ್, ಮಹಾತ್ಮಾ ಗಾಂಧಿ, ಜವಾಹರ ಲಾಲ್ ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ. ಬಾಬು ರಾಜೇಂದ್ರ ಪ್ರಸಾದ್, ಡಾ. ರಾಧಾಕೃಷ್ಣನ್, ಡಾ. ಝಾಕಿರ್ ಹುಸೈನ್ ಮತ್ತು ಸ್ವಾತಂತ್ರ್ಯೋತ್ತರದಲ್ಲಿ ಡಾ. ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿಯಂತಹ ಧೀಮಂತರು ಸಾಧ್ಯವಾದರು ಎನ್ನುವುದು ಅಲ್ಲಗಳೆಯಲಾಗದ ಮಾತು. ಇಂಗ್ಲಿಷ್ ಅಲ್ಲವಾಗಿದ್ದಲ್ಲಿ ತಾನು ಹಾರವರ ಮನೆಯಲ್ಲಿ ಸೆಗಣಿ ಬಾಚುತ್ತಾ ಬದುಕು ಸವೆಸಬೇಕಾಗಿತ್ತಿತ್ತು ಎಂದ ರಾಷ್ಟ್ರಕವಿ ಕುವೆಂಪುರವರ ಮಾತು ಕೂಡ ಇಲ್ಲಿ ಸ್ಮರಣಾರ್ಹ. ಇಂಗ್ಲಿಷ್ ಭಾಷೆ ಮತ್ತು ಆ ಭಾಷೆಯ ಮೂಲಕವಾಗಿ ದೊರೆತ ಶಿಕ್ಷಣ ಈ ದೇಶದ ಕೋಟಿಗಟ್ಟಲೆ ಮಧ್ಯಮವರ್ಗ, ಕೆಳಮಧ್ಯಮವರ್ಗ ಹಾಗೂ ಕೆಳವರ್ಗದ ಜನರಿಗೆ ಅಜ್ಞಾನ ಮತ್ತು ದಾರಿದ್ರದಿಂದ ಬಿಡುಗಡೆ ನೀಡಿತೆಂಬುದು ಮುಚ್ಚಿಡಲಾಗದ ಸಾರ್ವಕಾಲಿಕ ಸತ್ಯ.

ಆದರೆ ಈಗ ಮೆಕಾಲೆಯ ವಿರುದ್ಧ ನಡೆಸುವ ದಾಳಿಯ ಭರದಲ್ಲಿ, ಈ ದೇಶದ ಎಲ್ಲ ಹಳೆಯ ಸರಕುಗಳನ್ನು ಬಂಗಾರವಾಗಿಸುವ ಭರಾಟೆಯಲ್ಲಿ ವಿಚಿತ್ರ ರೀತಿಯ ವಾದಸರಣಿಗಳು ಕೇಳಿಬರುತ್ತಿವೆ. ಈ ವಾದಗಳ ತಿರುಳು, ‘ಪ್ರಬಂಧ ಧ್ವನಿ’ ಹೀಗಿರುತ್ತದೆ: ಬ್ರಿಟಿಷರು ಭಾರತಕ್ಕೆ ಬಂದು ಅವರ ಶಿಕ್ಷಣ ಕ್ರಮವನ್ನು ಇಲ್ಲಿ ಯಾಕಾಗಿಯಾದರೂ ಅನುಷ್ಠಾನಗೊಳಿಸಿದರು? ಅವರು ನೀಡಿದ ಶಿಕ್ಷಣ ಪಡೆದಿದ್ದರಿಂದಾಗಿ ಅವರು ಈ ದೇಶಕ್ಕೆ ಸ್ವಾತಂತ್ರ್ಯ ನೀಡಿದ್ದರಿಂದಾಗಿಯೇ ಅಲ್ಲವೇ ಇವತ್ತು ಇಲ್ಲಿ ಕೆಲ ತರಲೆಗಳು ಅಭಿವ್ಯಕ್ತಿ ಸ್ವಾತಂತ್ರ್ಯ, ಭಿನ್ನಮತ, ಮಾನವಹಕ್ಕು ಅಂತೆಲ್ಲ ಬೊಬ್ಬೆ ಹೊಡೆಯುವುದು. ಬ್ರಿಟಿಷರ ಇಂಗ್ಲಿಷ್ ಮೂಲಕವಾದ ಶಿಕ್ಷಣ ವ್ಯವಸ್ಥೆಯೇ ಈ ಪುಣ್ಯಭೂಮಿಗೆ ಬರದೆ, ಇಲ್ಲಿ ಪ್ರಾಚೀನ ಕಾಲದಿಂದಲೂ ಇದ್ದಂತಹ ಗುರುಕುಲ, ನಳಂದ, ತಕ್ಷಶಿಲಾದಂತಹ ವ್ಯವಸ್ಥೆಗಳೇ ಇರುತ್ತಿದ್ದರೆ ಎಷ್ಟು ಒಳ್ಳೆಯದಿತ್ತು?! ಆಗ ಈ ಮಕ್ಕಳು ನಾವು ಹೇಳಿದಂತೆ ಕೇಳಿ ‘ಯುವರ್ಸ್ ಒಬೀಡಿಯಂಟ್ಲಿ’ ಆಗಿ ಸುಮ್ಮನೆ ಬಿದ್ದುಕೊಂಡಿರುತ್ತಿದ್ದವಲ್ಲ?! ಮೆಕಾಲೆ ಬಂದು ಈ ದೇಶ ಹಾಳಾಯಿತು. ಇಲ್ಲವಾಗಿದ್ದಲ್ಲಿ ನಮ್ಮ ಮಕ್ಕಳು ‘‘ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ’’ (ತಾಯಿ, ತಂದೆ, ಗುರುಗಳು ದೇವರಿಗೆ ಸಮಾನ) ಎಂದುಕೊಂಡು ನಮ್ಮನ್ನೆಲ್ಲ ಎಷ್ಟು ಚೆಂದದಲ್ಲಿ ನೋಡಿಕೊಳ್ಳುತ್ತಿದ್ದವು!. ಮೆಕಾಲೆ ಮನೆ ಹಾಳಾಗಿ ಹೋಗ!.

ಆದರೆ ಹೀಗೆಲ್ಲ ವಾದಿಸುವ ಐಟಿಬಿಟಿ ಮ್ಯಾನೇಜ್‌ಮೆಂಟ್ ತಜ್ಞರು, ಅನಿವಾಸಿ ಐಟಿ ಕೋಟ್ಯಧಿಪತಿ ಚಿಂತಕರು, ಬಹಳ ಮಂದಿ, ತಮ್ಮ ಪೂಜ್ಯ ಮಾತಾ ಪಿತೃಗಳನ್ನು ವೃದ್ಧಾಶ್ರಮಗಳಲ್ಲಿ ಸುಖವಾಗಿ ಇಡುತ್ತಿರುವುದರಿಂದಲೇ (ಒಂದು ಅಂದಾಜಿನಂತೆ) ಇವತ್ತು ಬೆಂಗಳೂರು ನಗರವೊಂದರಲ್ಲೇ ಮೂರು ಸಾವಿರಕ್ಕೂ ಹೆಚ್ಚು ಇಂಗ್ಲಿಷ್‌ನಲ್ಲಿ ತುಂಬ ಗೌರವಾನ್ವಿತವಾಗಿ ಕೇಳಿಸುವ ‘ಓಲ್ಡ್ ಏಜ್ ಹೋಮ್’ಗಳಿವೆ. ಕರಾವಳಿ ಕರ್ನಾಟಕದ ಸಾಂಸ್ಕೃತಿಕ ರಂಗದ ಬಹಳ ಮುಖ್ಯರಾಗಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಒಮ್ಮೆ ಹೇಳಿದ್ದು ನೆನಪಾಗುತ್ತಿದೆ: ಇತ್ತೀಚೆಗೆ ಯುವಕನೊಬ್ಬ ಸಿಕ್ಕಿದ್ದ. ಅವ ಹೇಳಿದ ‘‘ನಾನೀಗ ತುಂಬಾ ಹ್ಯಾಪಿಯಾಗಿದ್ದೇನೆ.’’ ‘‘ಯಾಕೆ?’’ ‘‘ನನ್ನ ಅಪ್ಪ ಅಮ್ಮನನ್ನು ಇಡಲಿಕ್ಕೆ ಒಂದು ಒಳ್ಳೆಯ ಓಲ್ಡ್ ಏಜ್ ಹೋಮ್ ಸಿಕ್ಕಿದೆ.’’!

ಅಪ್ಪಅಮ್ಮಂದಿರನ್ನು ಇಡಲು ಉತ್ತಮ ವೃದ್ಧಾಶ್ರಮ ಸಿಕ್ಕಿದೆಯೆಂದು ಯುವಜನಾಂಗ ಸಂತೋಷ ಪಡುವ ಸ್ಥಿತಿ ಬಂದಿರುವುದಕ್ಕೂ ಪಾಪಿ ಮೆಕಾಲೆಯೇ ಕಾರಣ ಎನ್ನುವ ಹಂತಕ್ಕೆ ನಮ್ಮ ಪಾಶ್ಚಾತ್ಯ ಸಂಸ್ಕೃತಿ ನಿಂದಕ ಪುಣ್ಯಾತ್ಮರು ಬಂದಿದ್ದಾರೆ.
ಪಾಶ್ಚಾತ್ಯ ಸಂಸ್ಕೃತಿ ಮೂಲವಾದ ನಮ್ಮ ಶಿಕ್ಷಣ ಕ್ರಮ ಬದಲಾಗಬೇಕು. ಅದನ್ನು ನಾವು ಆದಷ್ಟು ಬೇಗ ಬದಲಾಯಿಸಿ ನಮ್ಮ ಭಾರತೀಯ ಶಿಕ್ಷಣ ಕ್ರಮವನ್ನು ಜಾರಿಗೆ ತರಬೇಕು ಎಂದು ವಾದಿಸುವವರ ಕಣ್ಣು ಇರುವುದು ಮುಖ್ಯವಾಗಿ ಶಾಲಾ ಕಾಲೇಜು ಹಂತದ ಇತಿಹಾಸ ಪಠ್ಯಗಳ ಮೇಲೆಯೇ ಹೊರತು ವಿಜ್ಞಾನ, ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಪಠ್ಯಗಳ ಮೇಲಲ್ಲ. ನಮ್ಮ ಪ್ರಭುತ್ವದ ಚುನಾವಣಾ ಪ್ರಣಾಳಿಕೆಯ ಭರವಸೆಗಳಿಗೆ ಪೂರಕವಾಗುವಂತೆ ಪಠ್ಯಪುಸ್ತಕಗಳ ಪುನರ್‌ರಚನೆಯಾಗಬೇಕು, ಇತಿಹಾಸದ (ನಾವು ಹೇಳುವಂತಹ) ತಪ್ಪುಗಳನ್ನು ಸರಿಪಡಿಸಿ ಇತಿಹಾಸವನ್ನು ‘ಸರಿಪಡಿಸಿ’ ತಿದ್ದಿ ಬರೆಯಬೇಕು ಎಂಬ ಬೇಡಿಕೆ ಈಡೇರಿದರೆ ಇಂತಹ ವಾದಿಗಳ ಪಾಲಿಗೆ ನಮ್ಮ ಇಡೀ ಶಿಕ್ಷಣ ಕ್ರಮ ಸರಿಯಾದಂತಾಗುತ್ತದೆ.

ಆದರೆ ಇತಿಹಾಸ ಎಲ್ಲ ಕಾಲದಲ್ಲೂ ಆಳುವವರ ಮರ್ಜಿಗೆ, ಹಿತಾಸಕ್ತಿಗಳಿಗೆ ಪೂರಕವಾಗುವಂತೆಯೇ ಬರೆಯಲ್ಪಟ್ಟಿರುತ್ತದೆ ಎನ್ನುವುದು ಎಲ್ಲರೂ ನೆನಪಿನಲ್ಲಿಡಬೇಕಾದ ವಿಷಯ. ಪಾಕಿಸ್ತಾನದ ಹಿಂದಿನ ಇತಿಹಾಸ ಪಠ್ಯ ಮತ್ತು ಭಾರತದ ಸ್ವಾತಂತ್ರ್ಯಪೂರ್ವದ ಬ್ರಿಟಿಷ್ ಸರಕಾರ ರಚಿತ ಇತಿಹಾಸ ಪಠ್ಯ ಹಾಗೂ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸ ಪಠ್ಯಗಳ ತೌಲನಿಕ ಅಧ್ಯಯನ ನಡೆಸಿದವರಿಗೆ ಇದು ಗೊತ್ತಾಗುತ್ತದೆ. ಇತಿಹಾಸದ ಎಲ್ಲ ಕಾಲದಲ್ಲೂ ಒಬ್ಬ ಮೆಕಾಲೆ ಇರುತ್ತಾನೆ. ದೇಶಕ್ಕಾಗಿ ಯುದ್ಧದಲ್ಲಿ ಹೋರಾಡಿ ಸತ್ತರೆ ವೀರಸ್ವರ್ಗ ಸಿಗುತ್ತದೆಂದು ಆಶ್ವಾಸನೆ ನೀಡುವ ಒಬ್ಬ ರಾಜ, ಒಬ್ಬ ಧರ್ಮ ಗುರು ಇರುತ್ತಾನೆ.

ಯಾಕೆಂದರೆ ಎಲ್ಲಾ ಶಿಕ್ಷಣ ವ್ಯವಸ್ಥೆಯ ಮೂಲ ಉದ್ದೇಶ ದೇಶದ ಪ್ರಜೆ ಅಂತಿಮವಾಗಿ ತನ್ನ ದೇಶ ಹಾಗೂ ತನ್ನ ಧರ್ಮಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧನಾಗುವಂತೆ ಅವನನ್ನು ಸಿದ್ಧಗೊಳಿಸುವುದೇ ಆಗಿರುತ್ತದೆ. ಆದರೆ ಭಕ್ತಿ ಭಂಡಾರಿ ಬಸವಣ್ಣ ಹೇಳುವಂತೆ ‘ಶಿವಾಲಯವ’ ಮಾಡುವ ‘ಉಳ್ಳವರು’ ಇಂತಹ ಪ್ರಾಣತ್ಯಾಗದ ಸೌಭಾಗ್ಯ ಯಾವಾಗಲೂ ‘ಇಲ್ಲದವ’ರಿಗೆ ಸಿಗುವಂತೆ ನೋಡಿಕೊಳ್ಳುತ್ತಾರೆ. ಆದ್ದರಿಂದಲೇ ಐಟಿಬಿಟಿ, ಇಂಜಿನಿಯರಿಂಗ್, ವೈದ್ಯಕೀಯ ವಿಜ್ಞಾನ ಕಾಲೇಜುಗಳ ಶಿಕ್ಷಣ ಕ್ರಮದ ಪಳೆಯುಳಿಕೆಗಳ ಪ್ರವೇಶಕ್ಕೆ ಯಾವಾಗಲೂ ನೂಕುನುಗ್ಗಲು ಇದ್ದೇ ಇರುತ್ತದೆ.

bhaskarrao599@gmail.com

share
ಡಾ. ಬಿ. ಭಾಸ್ಕರ ರಾವ್
ಡಾ. ಬಿ. ಭಾಸ್ಕರ ರಾವ್
Next Story
X