Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರಜಾಪ್ರಭುತ್ವ ದೇಶದಲ್ಲಿ...

ಪ್ರಜಾಪ್ರಭುತ್ವ ದೇಶದಲ್ಲಿ ‘ಅಫ್‌ಸ್ಪಾ’ಕ್ಕೆ ಸ್ಥಳವಿಲ್ಲ

ಇಸ್ಪಿತಾ ಚಕ್ರವರ್ತಿಇಸ್ಪಿತಾ ಚಕ್ರವರ್ತಿ11 Dec 2021 12:06 AM IST
share

ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯಲ್ಲಿ ಸೇನೆ ನಡೆಸಿರುವ ನಾಗರಿಕರ ಹತ್ಯಾಕಾಂಡದ ಬಳಿಕ ದೇಶದ ಗಮನವು ಮತ್ತೊಮ್ಮೆ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯ ಮೇಲೆ ಹರಿದಿದೆ. ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಪಕ್ಷಗಳು, ನಾಗಾ ಸಶಸ್ತ್ರ ಗುಂಪುಗಳು, ನಾಗರಿಕ ಸಮಾಜದ ಸಂಘಟನೆಗಳು ಮತ್ತು ಬುಡಕಟ್ಟು ಸಂಘಟನೆಗಳು ಸೇರಿದಂತೆ ಸಮಗ್ರ ಸಮಾಜವು ಈ ಹತ್ಯಾಕಾಂಡವನ್ನು ಖಂಡಿಸಿದ್ದು, ಕಾಯ್ದೆಯನ್ನು ರದ್ದುಪಡಿಸಬೇಕು ಎನ್ನುವ ಹಳೆಯ ಬೇಡಿಕೆಯನ್ನು ಪುನರುಚ್ಚರಿಸಿದೆ. ಕಾನೂನು ಸೈನಿಕರಿಗೆ ಅಗಾಧ ಅಧಿಕಾರಗಳು ಮತ್ತು ರಕ್ಷಣೆಯನ್ನು ನೀಡದೆ ಇದ್ದಿದ್ದರೆ ಸೈನಿಕರು ನಾಗರಿಕರ ಮೇಲೆ ಇಷ್ಟೊಂದು ಸುಲಭದಲ್ಲಿ ಗುಂಡು ಹಾರಿಸಿ ಕೊಲ್ಲುವುದು ಸಾಧ್ಯವಿರಲಿಲ್ಲ ಎಂಬುದಾಗಿ ವಾದಿಸಲಾಗುತ್ತಿದೆ.

ಡಿಸೆಂಬರ್ 4ರಂದು ಸೇನಾ ಸಿಬ್ಬಂದಿಯು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಿ ಮನೆಗೆ ವಾಪಸಾಗುತ್ತಿದ್ದ ಆರು ಮಂದಿಯನ್ನು ಬಂಡುಕೋರರು ಎಂಬುದಾಗಿ ತಪ್ಪಾಗಿ ಭಾವಿಸಿ ಅವರ ಮೇಲೆ ಗುಂಡು ಹಾರಿಸಿ ಕೊಂದವು. ಬಳಿಕ ಉದ್ರಿಕ್ತ ಸ್ಥಳೀಯರು ಸೇನಾ ವಾಹನಗಳ ಮೇಲೆ ದಾಳಿ ನಡೆಸಿ ಓರ್ವ ಸೈನಿಕನನ್ನು ಕೊಂದಾಗ ಸೈನಿಕರು ಇನ್ನೊಮ್ಮೆ ಗುಂಡು ಹಾರಿಸಿದರು. ಆಗ ಇನ್ನೂ ಏಳು ನಾಗರಿಕರು ಹತರಾದರು. ಡಿಸೆಂಬರ್ 5ರಂದು ಪ್ರತಿಭಟನಾ ನಿರತ ಗುಂಪುಗಳು ಮೊನ್ ಜಿಲ್ಲಾ ಕೇಂದ್ರದಲ್ಲಿರುವ ಅಸ್ಸಾಂ ರೈಫಲ್ಸ್ ಶಿಬಿರದ ಮೇಲೆ ದಾಳಿ ನಡೆಸಿದಾಗ ಸೈನಿಕರು ಮತ್ತೊಮ್ಮೆ ಗುಂಡು ಹಾರಿಸಿದರು. ಆಗ ಕನಿಷ್ಠ ಓರ್ವ ನಾಗರಿಕ ಪ್ರಾಣ ಕಳೆದುಕೊಂಡಿದ್ದಾರೆ.

ನಾಗಾಲ್ಯಾಂಡ್‌ನಾದ್ಯಂತ ಭದ್ರತಾ ಪಡೆಗಳ ವಿರುದ್ಧದ ಹಳೆಯ ಆಕ್ರೋಶವು ಮತ್ತೊಮ್ಮೆ ಉಕ್ಕಿ ಹರಿದಿದೆ. ಮೊನ್‌ನಲ್ಲಿರುವ ಅಸ್ಸಾಂ ರೈಫಲ್ಸ್ ಶಿಬಿರವನ್ನು, ಈಗಿನ ಉದ್ವಿಗ್ನತೆ ತಣ್ಣಗಾಗುವವರೆಗಾದರೂ ತೆರವುಗೊಳಿಸಬೇಕು ಎನ್ನುವ ಬೇಡಿಕೆ ಬೆಳೆಯುತ್ತಿದೆ. ಅಸ್ಸಾಂ ರೈಫಲ್ಸ್‌ನ ವಾಹನಗಳನ್ನು ಕೆಲವು ಪ್ರದೇಶಗಳಿಂದ ಯುವಕರು ಬಲವಂತವಾಗಿ ತೆರವು ಗೊಳಿಸುತ್ತಿರುವುದನ್ನು ನಾಗಾಲ್ಯಾಂಡ್‌ನ ವೀಡಿಯೊಗಳು ತೋರಿಸುತ್ತಿವೆ.

ಕಳೆದ ವಾರಾಂತ್ಯದ ದುರಂತವು ವಾಸ್ತವವೊಂದನ್ನು ತೆರೆದಿಟ್ಟಿದೆ. ಈ ವಾಸ್ತವವನ್ನು ಶಾಂತಿ ಮಾತುಕತೆಗಳು, ಯುದ್ಧ ವಿರಾಮಗಳು, ಕೇಂದ್ರ ಸರಕಾರದ ಆರ್ಥಿಕ ಬೆಳವಣಿಗೆಯ ಭರವಸೆಗಳು ಮತ್ತು ಸಾಂಸ್ಕೃತಿಕ ಹಬ್ಬಗಳ ಆಡಂಬರಗಳ ಅಡಿಯಲ್ಲಿ ಮುಚ್ಚಿ ಹಾಕಲಾಗಿತ್ತು. ಈಶಾನ್ಯದ ರಾಜ್ಯಗಳು ಬೃಹತ್ ಸೇನಾ ನಿಯೋಜನೆಯ ಪ್ರದೇಶಗಳಾಗಿಯೇ ಮುಂದುವರಿದಿವೆ ಎನ್ನುವುದು ವಾಸ್ತವವಾಗಿದೆ. ಈ ವಲಯದ ಹೆಚ್ಚಿನ ಪ್ರಮುಖ ಪಟ್ಟಣಗಳಲ್ಲಿ ಸೇನಾ ಟ್ಯಾಂಕ್‌ಗಳು ಮತು ಕವಚಧಾರಿ ಸೇನಾ ವಾಹನಗಳು ಗಸ್ತು ತಿರುಗುತ್ತಿವೆ. ವಲಯದ ಬೆಟ್ಟಗಳು ಮತ್ತು ಕಣಿವೆಗಳಲ್ಲಿ ಸೇನೆ ಮತ್ತು ಅರೆಸೇನೆಗಳ ಶಿಬಿರಗಳು ಹರಡಿಕೊಂಡಿವೆ. ಅಲ್ಲಿನ ಹೆಚ್ಚಿನ ನಿವಾಸಿಗಳ ಮನದಲ್ಲಿ ಸೇನೆ ನಡೆಸಿದ ಹಿಂಸಾಚಾರ, ದಬ್ಬಾಳಿಕೆ, ಅಪಹರಣ, ಚಿತ್ರಹಿಂಸೆ ಮತ್ತು ಗುಂಡಿನ ದಾಳಿಗಳ ನೆನಪುಗಳೇ ತುಂಬಿವೆ.

ಕೊನೆಯಿಲ್ಲದ ಮುತ್ತಿಗೆ
ನಾಗಾ ರಾಷ್ಟ್ರೀಯವಾದಿ ಗುಂಪುಗಳು ಜನಾಂಗೀಯ ಆಧಾರಿತ ಸಾರ್ವಭೌಮ ದೇಶವೊಂದನ್ನು ಸ್ಥಾಪಿಸುವುದಕ್ಕಾಗಿ ಭಾರತ ಸರಕಾರದ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಾಗ 1958ರಲ್ಲಿ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯನ್ನು ಜಾರಿಗೆ ತರಲಾಯಿತು. ಆರಂಭದಲ್ಲಿ ಕಾಯ್ದೆಯನ್ನು ಅಸ್ಸಾಂ ಮತ್ತು ಮಣಿಪುರದಲ್ಲಿ ನಾಗಾ ಜನಾಂಗೀಯರು ವಾಸಿಸುತ್ತಿರುವ ಪ್ರದೇಶಗಳಿಗೆ ಅನ್ವಯಿಸಲಾಯಿತು. ಬಳಿಕ, ಜನಾಂಗೀಯ ಆಧಾರದಲ್ಲಿ ದೇಶಗಳನ್ನು ಸ್ಥಾಪಿಸುವ ಉದ್ದೇಶದ ಹಲವಾರು ಸಶಸ್ತ್ರ ಸಂಘರ್ಷಗಳು ಹುಟ್ಟಿಕೊಂಡ ಬಳಿಕ ಅದನ್ನು ಈಶಾನ್ಯದ ಹೆಚ್ಚಿನ ಭಾಗಗಳಿಗೆ ವಿಸ್ತರಿಸಲಾಯಿತು. ಈಶಾನ್ಯದಲ್ಲಿ ಪರೀಕ್ಷಿಸಿದ ಬಳಿಕ, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ನೂತನ ಮಾದರಿಯನ್ನು 1990ರಲ್ಲಿ ಕಾಶ್ಮೀರದ ಮೇಲೂ ಹೇರಲಾಯಿತು.

‘ಸಂಘರ್ಷಪೀಡಿತ ಪ್ರದೇಶಗಳು’ ಎಂಬುದಾಗಿ ಘೋಷಿಸಲು ಹಾಗೂ ಇಂತಹ ಸ್ಥಳಗಳಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಈ ಕಾಯ್ದೆಯು ಸರಕಾರಕ್ಕೆ ಅವಕಾಶ ನಿಡುತ್ತದೆ. ‘ಸಂಘರ್ಷಪೀಡಿತ ಪ್ರದೇಶ’ ಅಧಿಸೂಚನೆಯನ್ನು ಪ್ರತಿ ಆರು ತಿಂಗಳಿಗಳಿಗೊಮ್ಮೆ ಮರುಪರಿಶೀಲಿಸಲಾಗುತ್ತದೆ. ತ್ರಿಪುರಾ ಮತ್ತು ಮೇಘಾಲಯಗಳನ್ನೂ ಈ ಕಾಯ್ದೆಯ ವ್ಯಾಪ್ತಿಗೆ ತರಲಾಗಿತ್ತಾದರೂ, ಕೆಲವು ವರ್ಷಗಳ ಬಳಿಕ ಅಲ್ಲಿಂದ ಸಂಘರ್ಷಪೀಡಿತ ಪ್ರದೇಶ ಅಧಿಸೂಚನೆಯನ್ನು ವಾಪಸ್ ಪಡೆಯಲಾಯಿತು. ಬಂಡುಕೋರ ಗುಂಪುಗಳು ಸರಕಾರದೊಂದಿಗೆ ಯುದ್ಧ ವಿರಾಮಗಳಿಗೆ ಸಹಿ ಹಾಕುತ್ತಿದ್ದರೂ, ಶಾಂತಿ ಮಾತುಕತೆಗಳನ್ನು ನಡೆಸುತ್ತಿದ್ದರೂ ಮತ್ತು ಬಂಡುಕೋರರ ಹಿಂಸಾಚಾರ ಕಡಿಮೆಯಾಗಿದ್ದರೂ ನಾಗಾಲ್ಯಾಂಡ್, ಅಸ್ಸಾಂ, ಮಣಿಪುರದ ಹೆಚ್ಚಿನ ಭಾಗಗಳು ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಈ ಅಧಿಸೂಚನೆಯನ್ನು ನಿಯಮಿತವಾಗಿ ನವೀಕರಿಸಿಕೊಂಡು ಬರಲಾಗುತ್ತಿದೆ.

ಇದರ ಪರಿಣಾಮವಾಗಿ ಈ ವಲಯದ ಹೆಚ್ಚಿನ ಭಾಗವು ದಶಕಗಳಿಂದ ಅಘೋಷಿತ ತುರ್ತುಪರಿಸ್ಥಿತಿಯಲ್ಲಿದೆ ಹಾಗೂ ಭದ್ರತೆಯ ಹೆಸರಿನಲ್ಲಿ ಮೂಲ ಹಕ್ಕುಗಳನ್ನು ಅಮಾನತಿನಲ್ಲಿರಿಸಲಾಗಿದೆ. ಸಶಸ್ತ್ರ ಪಡೆಗಳು ವಾರಂಟ್‌ಇಲ್ಲದೆಯೇ ಯಾವುದೇ ಸ್ಥಳಗಳಲ್ಲಿ ಶೋಧ ನಡೆಸಬಹುದಾಗಿದೆ ಹಾಗೂ ಜನರನ್ನು ಬಂಧಿಸಬಹುದಾಗಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕ ಶಾಂತಿಯನ್ನು ಕಾಪಾಡುವುದಕ್ಕಾಗಿ ಅಗತ್ಯ ಬಿದ್ದರೆ ಗುಂಡು ಹಾರಿಸಬಹುದಾಗಿದೆ.

ಇದೆಲ್ಲವನ್ನೂ ಸಶಸ್ತ್ರ ಪಡೆಗಳು ಯಾವುದೇ ರೀತಿಯ ಶಿಕ್ಷೆಗೆ ಒಳಗಾಗುವ ಭಯವಿಲ್ಲದೆಯೇ ಮಾಡಬಹುದಾಗಿದೆ. ಯಾಕೆಂದರೆ ಈ ಕಾನೂನು ಅವರಿಗೆ ಈ ಅಧಿಕಾರಗಳನ್ನು ನೀಡುತ್ತದೆ. ಅಪರಾಧ ನಡೆಸಿದ ಸೈನಿಕರನ್ನು ಶಿಕ್ಷಿಸಲು ಕೇಂದ್ರ ಸರಕಾರ ಅನುಮತಿ ನೀಡದ ಹೊರತು ಅವರ ವಿರುದ್ಧ ನಾಗರಿಕ ಮೊಕದ್ದಮೆ ಹೂಡುವಂತಿಲ್ಲ. ದೌರ್ಜನ್ಯದ ಹೆಚ್ಚಿನ ಪ್ರಕರಣಗಳನ್ನು ಸೇನಾ ನ್ಯಾಯಾಲಯಗಳಿಗೆ ಒಪ್ಪಿಸಲಾಗುತ್ತದೆ ಹಾಗೂ ಮರೆತು ಬಿಡಲಾಗುತ್ತದೆ. ಆ ನ್ಯಾಯಾಲಯಗಳ ಪ್ರಕ್ರಿಯೆಗಳು ಮತ್ತು ನಿರ್ಧಾರಗಳು ಸಾರ್ವಜನಿಕರಿಗೆ ತಿಳಿಯುವುದಿಲ್ಲ. ಸಂಘರ್ಷಪೀಡಿತ ಪ್ರದೇಶಗಳಲ್ಲಿ ಪ್ರಭುತ್ವ ನಡೆಸಿದ ದೌರ್ಜನ್ಯಗಳಲ್ಲಿ ಈವರೆಗೆ ಯಾರಿಗೂ ಶಿಕ್ಷೆಯಾಗಿರುವ ಉದಾಹರಣೆಯಿಲ್ಲ.

ಮೊನ್ ಹತ್ಯಾಕಾಂಡ ಯಾವ ದಾರಿಯಲ್ಲಿ ಸಾಗುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ನಾಗಾಲ್ಯಾಂಡ್ ಪೊಲೀಸರು ಪ್ರಥಮ ಮಾಹಿತಿ ವರದಿಯೊಂದನ್ನು ದಾಖಲಿಸಿದ್ದಾರೆ; ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಹಾಗೂ ಅದು 30 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂಬುದಾಗಿ ಕೇಂದ್ರ ಸರಕಾರ ಘೋಷಿಸಿದೆ; ತನ್ನದೇ ವಿಚಾರಣೆಯನ್ನು ನಡೆಸುವುದಾಗಿ ಸೇನೆಯೂ ಪ್ರಕಟಿಸಿದೆ.

ಆದರೆ, ಇಂತಹ ವಿಷಯಗಳಲ್ಲಿ ಹಿಂದಿನ ದಾಖಲೆಗಳು ಆಶಾದಾಯಕವಾಗಿಲ್ಲ. ಪ್ರಥಮ ಮಾಹಿತಿ ವರದಿಗಳು, ಮ್ಯಾಜಿಸ್ಟ್ರೇಟ್ ತನಿಖೆಗಳು ಮತ್ತು ಪೊಲೀಸ್ ತನಿಖೆಗಳ ಹೊರತಾಗಿಯೂ, ಇಂತಹ ಪ್ರಕರಣಗಳ ತನಿಖೆ ನಡೆಸುವುದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು ತನ್ನ ವಿಶೇಷಾಧಿಕಾರವಾಗಿದೆ ಎಂದು ಹೇಳಿಕೊಂಡು ಬಂದ ಸೇನೆಯು ಇಂತಹ ಪ್ರಕರಣಗಳನ್ನು ಪ್ರಧಾನ ವಾಹಿನಿಯ ನ್ಯಾಯ ವ್ಯವಸ್ಥೆಯಿಂದ ಎತ್ತಿಕೊಂಡು ಹೋಗಿದೆ.

ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಜನರು ವಿರೋಧಿಸಲು ಮಾನವಹಕ್ಕುಗಳ ಉಲ್ಲಂಘನೆಗೆ ಅದು ನೀಡುವ ಮುಕ್ತ ಅವಕಾಶವೇ ಕಾರಣವಾಗಿದೆ.
1995ರ ಕೊಹಿಮಾ ಹತ್ಯಾಕಾಂಡ, 2000ದ ಮಾಲೊಮ್ ಹತ್ಯಾಕಾಂಡ ಮತ್ತು 2004ರ ತಂಗ್ಜಾಮ್ ಮನೋರಮಾ ದೇವಿಯ ಅತ್ಯಾಚಾರ-ಕೊಲೆಯು ಈಶಾನ್ಯದಲ್ಲಿ ನಾಗರಿಕರ ವಿರುದ್ಧ ಪ್ರಭುತ್ವ ನಡೆಸಿರುವ ದೌರ್ಜನ್ಯಗಳಾಗಿವೆ. ಈಗ ಅವುಗಳ ಸಾಲಿಗೆ ಮೊನ್ ಹತ್ಯಾಕಾಂಡವೂ ಸೇರ್ಪಡೆಯಾಗಿದೆ. ಈ ಘಟನೆಗಳ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ನಾಗರಿಕ ಸಮಾಜದ ಗುಂಪುಗಳು ವರ್ಷಗಳಿಂದ ಸರಕಾರವನ್ನು ಒತ್ತಾಯಿಸುತ್ತಾ ಬಂದಿವೆ. ಆದರೆ, ಯಾವುದೇ ಆಶಾದಾಯಕ ಬೆಳವಣಿಗೆಗಳು ಈ ನಿಟ್ಟಿನಲ್ಲಿ ಸಂಭವಿಸಿಲ್ಲ.

ಬ್ರಿಟಿಷರ ಕಾಲದ ಕಾನೂನು
ವಸಾಹತುಶಾಹಿ ಯುಗದ ಕಾನೂನಿನ ಇನ್ನೊಂದು ರೂಪವಾಗಿರುವ ಈ ಕಾನೂನಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾನವಿಲ್ಲ. ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಅಧ್ಯಾದೇಶವನ್ನು ಮೊದಲು ಜಾರಿಗೆ ತಂದದ್ದು ಬ್ರಿಟಿಷ್‌ಆಡಳಿತ 1942ರಲ್ಲಿ. ಎರಡನೇ ಮಹಾಯುದ್ಧದ ಅವಧಿಯಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ‘ನಾಗರಿಕ ಸರಕಾರ’ಕ್ಕೆ ನೆರವಾಗಲು ಸಶಸ್ತ್ರ ಪಡೆಗಳ ವಿಶೇಷಾಧಿಕಾರವನ್ನು ತರಲಾಗಿತ್ತು.
ಅಧಿಕಾರವನ್ನು ಉಳಿಸಿಕೊಳ್ಳಲು ದೃಢ ನಿರ್ಧಾರ ಮಾಡಿದ್ದ ವಸಾಹತು ಸರಕಾರವು ಭಾರತೀಯರನ್ನು ನಾಗರಿಕರಂತೆ ಕಾಣುವ ಬದಲು ತನ್ನ ಅಧೀನರು ಎಂಬಂತೆ ಕಂಡಿತ್ತು. ಆದರೆ, ಇದೇ ಅಧ್ಯಾದೇಶವನ್ನು ಸ್ವತಂತ್ರ ಭಾರತವು ಸುಸಜ್ಜಿತ ಕಾನೂನು ಆಗಿ ಜಾರಿಗೊಳಿಸಿದ್ದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ವೈಫಲ್ಯವಲ್ಲದೆ ಮತ್ತೇನೂ ಅಲ್ಲ.
ಅಸ್ಸಾಂ ರೈಫಲ್ಸ್ ಸೇರಿದಂತೆ ಈಶಾನ್ಯ ವಲಯದಲ್ಲಿರುವ ಹೆಚ್ಚಿನ ಸರಕಾರಿ ಸಂಸ್ಥೆಗಳು ವಸಾಹತುಕಾಲದ ಪಳಯುಳಿಕೆಗಳಾಗಿವೆ. ಅಸ್ಸಾಂ ಮತ್ತು ಮಣಿಪುರದ ಕಣಿವೆಗಳಲ್ಲಿ ಬ್ರಿಟಿಷರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ 19ನೇ ಶತಮಾನದಲ್ಲಿ ಅರೆಸೈನಿಕ ಪಡೆಯನ್ನು ರಚಿಸಲಾಯಿತು. ಈ ಎರಡೂ ಪ್ರದೇಶಗಳನ್ನು ಬ್ರಿಟಿಷರು ನೇರವಾಗಿ ಆಳುತ್ತಿದ್ದರು. ಅವುಗಳನ್ನು ನಾಗಾ ಮತ್ತು ಕುಕಿ ಸೇರಿದಂತೆ ವಿವಿಧ ಬುಡಕಟ್ಟು ಜನಾಂಗೀಯರ ನೆಲೆಬೀಡಾಗಿರುವ ಬೆಟ್ಟಗಳಿಂದ ಪ್ರತ್ಯೇಕಿಸಲಾಗಿತ್ತು. ನಾಗಾಗಳು ಮತ್ತು ಕುಕಿಗಳು ನೆಲೆಸಿರುವ ಪರ್ವತ ಪ್ರದೇಶಗಳು ಬ್ರಿಟಿಷ್ ಚಕ್ರಾಧಿಪತ್ಯದಡಿಯಲ್ಲಿ ‘ಆಡಳಿತವಿಲ್ಲದ ಪ್ರದೇಶ’ಗಳಾಗಿದ್ದವು ಹಾಗೂ ವಸಾಹತು ಭೂಭಾಗಕ್ಕೆ ಹೊಂದಿಕೊಂಡ ‘ಅನ್ವೇಷಣೆಯಾಗದ’ ಹಾಗೂ ಸ್ವ-ಅಡಳಿತದ ಪ್ರದೇಶಗಳಾಗಿದ್ದವು.
ಈ ಬುಡಕಟ್ಟು ಪಂಗಡಗಳು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳ ಮೇಲೆ ಪದೇ ಪದೇ ದಾಳಿಗಳನ್ನು ನಡೆಸುತ್ತಿದ್ದವು.

‘‘ಈ ದಾಳಿಗಳನ್ನು ನಿಲ್ಲಿಸುವ ಅತ್ಯಂತ ಪ್ರಭಾವಿ ವಿಧಾನವೆಂದರೆ ಈ ಬುಡಕಟ್ಟು ಪ್ರದೇಶಗಳ ಮೇಲೆ ಪ್ರತೀಕಾರದ ದಾಳಿಗಳನ್ನು ನಡೆಸುವುದು’’ ಎಂಬುದಾಗಿ ‘ಅಸ್ಸಾಂ ರೈಫಲ್ಸ್‌ನ ಇತಿಹಾಸ’ಕ್ಕೆ ಬರೆದ ಮುನ್ನುಡಿಯಲ್ಲಿ ಬ್ಯಾಮ್‌ಫೈಲ್ಡ್ ಫುಲ್ಲರ್ ಬರೆದಿದ್ದಾರೆ. ಇಂತಹ ಪ್ರತೀಕಾರದ ದಾಳಿಗಳನ್ನು ನಡೆಸುವುದಕ್ಕಾಗಿ ಆರಂಭಿಸಲಾದ ಸೇನಾ ಪೊಲೀಸ್, 1917ರಿಂದ ಅಸ್ಸಾಂ ರೈಫಲ್ಸ್ ಎಂಬುದಾಗಿ ಕರೆಯಲ್ಪಟ್ಟಿತು.
ಸ್ವತಂತ್ರ ಭಾರತ ಸರಕಾರವೂ ಇದೇ ಮಾದರಿಯನ್ನು ಅಂಗೀಕರಿಸಿತು. ಈಶಾನ್ಯದ ರಾಜ್ಯಗಳನ್ನು ದೂರದ ಆಕ್ರೋಶಿತ ಗಡಿ ಎಂಬುದಾಗಿ ಪರಿಗಣಿಸಿತು. ಈಶಾನ್ಯದ ವಿವಿಧ ಸಮುದಾಯಗಳ ರಾಜಕೀಯ ಬೇಡಿಕೆಗಳು ಮೂಲತಃ ಭದ್ರತಾ ಸಮಸ್ಯೆಯಾಗಿವೆ ಎಂಬುದಾಗಿ ಭಾರತ ಸರಕಾರ ಪರಿಗಣಿಸಿತು.

ಕೃಪೆ: scroll.in

share
ಇಸ್ಪಿತಾ ಚಕ್ರವರ್ತಿ
ಇಸ್ಪಿತಾ ಚಕ್ರವರ್ತಿ
Next Story
X