ಭಾರತದ ಕೋವಿಡ್ ಲಸಿಕೆಯ ಪ್ರಮಾಣ ಪತ್ರಕ್ಕೆ 108 ರಾಷ್ಟ್ರಗಳು ಅಂಗೀಕಾರ: ಕೇಂದ್ರ

ಹೊಸದಿಲ್ಲಿ: ಪ್ರಯಾಣದ ಉದ್ದೇಶಕ್ಕೆ ಭಾರತದ ಕೋವಿಡ್ ಲಸಿಕೆಯ ಪ್ರಮಾಣಪತ್ರವನ್ನು ಒಟ್ಟು 108 ದೇಶಗಳು ಅಂಗೀಕರಿಸುತ್ತವೆ ಎಂದು ಕೇಂದ್ರ ಆರೋಗ್ಯ ಖಾತೆಯ ಸಹಾಯಕ ಸಚಿವ ಭಾರತಿ ಪ್ರವೀಣ್ ಪವಾರ್ ಅವರು ಶುಕ್ರವಾರ ಲೋಕಸಭೆಗೆ ತಿಳಿಸಿದರು.
ಈ ಬಗ್ಗೆ ಡಿಸೆಂಬರ್ 6ರ ವರೆಗೆ ಲಭ್ಯವಿರುವ ದತ್ತಾಂಶವನ್ನು ಅವರು ಹಂಚಿಕೊಂಡಿದ್ದಾರೆ.
ಗುಣಮಟ್ಟ, ಸುರಕ್ಷೆ, ಪರಿಣಾಮಕಾರಿತ್ವ ಹಾಗೂ ಕಾರ್ಯಕ್ಷಮತೆ ಕುರಿತು ಲಭ್ಯವಿರುವ ದತ್ತಾಂಶದ ಆಧಾರದಲ್ಲಿ ನಿರ್ದಿಷ್ಟ ಲಸಿಕೆಯ ಬಳಕೆಯ ಸ್ವೀಕಾರಾರ್ಹತೆಯನ್ನು ನಿರ್ಧರಿಸುವಲ್ಲಿ ಆಶಕ್ತಿ ಹೊಂದಿದ ವಿಶ್ವಸಂಸ್ಥೆಯ ಖರೀದಿ ಸಂಸ್ಥೆಗಳು, ಸದಸ್ಯ ರಾಷ್ಟ್ರಗಳು ಹಾಗೂ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ’(ಇಯುಎಲ್) ನೆರವು ನೀಡುತ್ತದೆ ಎಂದು ಪವಾರ್ ಅವರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯದ ತುರ್ತಿನ ತೊಂದರೆಗಳಗಾದ ಜನರಿಗೆ ಈ ಉತ್ಪನ್ನ ತ್ವರಿತವಾಗಿ ಲಭ್ಯವಾಗುವ ಉದ್ದೇಶವನ್ನು ಇದು ಹೊಂದಿದೆ. ಅಲ್ಲದೆ, ಇದು ಕೋವಿಡ್ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಹಾಗೂ ನೀಡಲು ತನ್ನ ಸ್ವಂತ ನಿಯಂತ್ರಣಕ್ಕೆ ಅನುಮೋದನೆಯನ್ನು ತ್ವರಿತಗೊಳಿಸಲು ಇದು ಅನುವು ಮಾಡಿಕೊಡುತ್ತದೆ ಎಂದು ಪವಾರ್ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ’ಯಲ್ಲಿ ಉಲ್ಲೇಖಿಸಲಾದ ಇಂತಹ ಲಸಿಕೆಗಳನ್ನು ತೆಗೆದುಕೊಂಡ ವ್ಯಕ್ತಿಗಳನ್ನು ಹಲವು ರಾಷ್ಟ್ರಗಳ ಅಧಿಕಾರಿಗಳು ರಕ್ಷಿಸುತ್ತಾರೆ ಹಾಗೂ ಅಂತಾರಾಷ್ಟ್ರೀಯವಾಗಿ ಪ್ರಯಾಣಿಸಲು ಹಲವು ರಾಷ್ಟ್ರಗಳು ಅವಕಾಶ ನೀಡುತ್ತದೆ ಎಂದು ಪರಿಗಣಿಸಲಾಗಿದೆ.
‘‘ಆದರೆ, ಪ್ರಯಾಣ ನಡೆಸಲು ಎಲ್ಲ ದೇಶಗಳಿಗೆ ಕೋವಿಡ್ ಲಸಿಕೆಯ ಅಗತ್ಯ ಇಲ್ಲ. ಪ್ರಸ್ತುತ ಭಾರತಕ್ಕೆ ಆಗಮಿಸಲು ಕೋವಿಡ್ ಲಸಿಕೆಯ ತೆಗೆದುಕೊಳ್ಳುವ ಅಗತ್ಯತೆ ಇಲ್ಲ. ಪ್ರಯಾಣಕ್ಕೆ ಕೋವಿಡ್ ಲಸಿಕೆ ತೆಗೆದುಕೊಳ್ಳುವ ಅಗತ್ಯ ಇರುವ 108 ದೇಶಗಳು ಭಾರತದ ಲಸಿಕೆಯ ಪ್ರಮಾಣ ಪತ್ರವನ್ನು ಪ್ರಯಾಣದ ಉದ್ದೇಶಕ್ಕೆ ಅಂಗೀಕರಿಸುತ್ತವೆ’’ ಎಂದು ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.