Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೆಲಿಕಾಪ್ಟರ್ ಏರಲು ಎ.ಪಿ.ಜೆ. ಅಬ್ದುಲ್...

ಹೆಲಿಕಾಪ್ಟರ್ ಏರಲು ಎ.ಪಿ.ಜೆ. ಅಬ್ದುಲ್ ಕಲಾಮ್ ‘ಸ್ವೀಪರ್’ ಆದಾಗ...

ಕ್ಯಾಪ್ಟನ್ ನಾಸಿರ್ ಹನ್ಫೀಕ್ಯಾಪ್ಟನ್ ನಾಸಿರ್ ಹನ್ಫೀ11 Dec 2021 11:18 AM IST
share
ಹೆಲಿಕಾಪ್ಟರ್ ಏರಲು ಎ.ಪಿ.ಜೆ. ಅಬ್ದುಲ್ ಕಲಾಮ್ ‘ಸ್ವೀಪರ್’ ಆದಾಗ...

ಇದು 1998ರಲ್ಲಿ ನಡೆದ ಘಟನೆ. ನಮ್ಮ ಪಿಎಸ್‌ಎಲ್‌ವಿ ಕ್ಷಿಪಣಿ ಕಾರ್ಯಕ್ರಮವು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿತ್ತು. ಆದರೆ, ಅಮೆರಿಕದ ಬೇಹುಗಾರಿಕಾ ಉಪಗ್ರಹಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅದನ್ನು ರಹಸ್ಯವಾಗಿ ನಡೆಸಲಾಗುತ್ತಿತ್ತು. ಈ ಕಾರ್ಯಕ್ರಮದ ನಿರ್ದೇಶಕರು ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ಆಗಿದ್ದರು. ಆ ಸಮಯದಲ್ಲಿ ನಾವು ಅವರನ್ನು ಗುರುತಿಸಲಿಲ್ಲ.

ಕ್ರಯೋಜನಿಕ್ ಇಂಜಿನ್‌ಗಳನ್ನು ಚೆನ್ನೈ ಬಂದರಿಗೆ ರಹಸ್ಯವಾಗಿ ಸಾಗಿಸಲಾಗಿತ್ತು. ಅಲ್ಲಿಂದ ಭಾರೀ ಸಾಮರ್ಥ್ಯದ ಹೆಲಿಕಾಪ್ಟರ್‌ಗಳ ಮೂಲಕ ಅವುಗಳನ್ನು ಸಾಗಿಸಲಾಗಿತ್ತು. ಈ ಹೆಲಿಕಾಪ್ಟರ್ ಚೆನ್ನೈಯಿಂದಲೇ ಹಾರುವುದಾಗಿದ್ದರೆ ಉಡಾವಣಾ ಸ್ಥಳವನ್ನು ತಲುಪಲು ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತಿತ್ತು. ಆದರೆ, ಅಮೆರಿಕದ ಬೇಹುಗಾರಿಕಾ ಉಪಗ್ರಹಗಳ ಕಣ್ಣು ತಪ್ಪಿಸುವುದಕ್ಕಾಗಿ ಅಂಕುಡೊಂಕಿನ ಮಾರ್ಗವನ್ನು ರೂಪಿಸಲಾಗಿತ್ತು. ನಿಗದಿಯಲ್ಲದ ಸ್ಥಳಗಳಲ್ಲಿ ತುಂಬಾ ಸಮಯ ನಿಲುಗಡೆ ಮಾಡಲಾಗುತ್ತಿತ್ತು. ಹಾಗಾಗಿ, ಎರಡು ತಾಸುಗಳ ಪ್ರಯಾಣಕ್ಕಾಗಿ ನಾವು ಎಂಟು ಗಂಟೆಗಳ ಹಾರಾಟ ಮತ್ತು ಎಂಟು ಗಂಟೆಗಳ ನಿಲುಗಡೆ ಅವಧಿಯನ್ನು ತೆಗೆದುಕೊಳ್ಳುತ್ತಿದ್ದೆವು. ಆದರೆ, ಉಪಗ್ರಹಗಳ ಕಣ್ಗಾವಲನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಇದು ನಾವು ತೆರಬೇಕಾಗಿದ್ದ ಸಣ್ಣ ಬೆಲೆಯಾಗಿತ್ತು.

ಹೆಚ್ಚಿನ ಭಾರದಿಂದಾಗಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆಯನ್ನು ಕಡಿಮೆಗೊಳಿಸಬೇಕಾಗಿತ್ತು. ಹಾಗಾಗಿ, ಕ್ಷಿಪಣಿ ಕಾರ್ಯಕ್ರಮದ 12 ಸಹಾಯಕ ಸಿಬ್ಬಂದಿಯನ್ನು ಮಾತ್ರ ನಾವು ಒಯ್ಯಬಹುದಾಗಿತ್ತು. ಈ ಪೈಕಿ ಇಬ್ಬರು ಗುಡಿಸುವವರಾಗಿದ್ದರು. ಕ್ರಯೋಜೆನಿಕ್ ಇಂಜಿನ್‌ನಿಂದ ನಿರಂತರವಾಗಿ ಸುರಿಯುವ ಇಂಧನ ಮತ್ತು ತೈಲವನ್ನು ಒರೆಸಲು ಅವರ ಅವಶ್ಯಕತೆಯಿತ್ತು. ಎಲ್ಲ 12 ಮಂದಿಯ ಪ್ರಯಾಣಕ್ಕೆ ಸರಕಾರದ ಅತ್ಯುನ್ನತ ಮಟ್ಟದಿಂದ ಅನುಮೋದನೆ ಸಿಕ್ಕಿತು. ಅಗತ್ಯ ಬಿದ್ದರೆ ಇಬ್ಬರು ಗುಡಿಸುವವರನ್ನು ಮಾತ್ರ ಬದಲಾಯಿಸಲು ನಿರ್ದೇಶಕರಿಗೆ ಅನುಮತಿ ನೀಡಲಾಗಿತ್ತು.

ನಾವು ಹೊರಡುವ ದಿನ ನರೆತ ಉದ್ದ ಕೂದಲಿನ ವ್ಯಕ್ತಿಯೊಬ್ಬರು ನಮ್ಮ ಬಳಿ ಬಂದರು. ‘‘ನನ್ನ ವಿಮಾನ ತಪ್ಪಿದೆ. ನನಗೆ ನಿಮ್ಮಿಂದಿಗೆ ಪ್ರಯಾಣಿಸುವುದಲ್ಲದೆ ಬೇರೆ ದಾರಿ ಇಲ್ಲ. ಯಾಕೆಂದರೆ ಉಡಾವಣಾ ಸ್ಥಳದಲ್ಲಿ ನಾನು ಇರಬೇಕಾಗಿದೆ’’ ಎಂದು ಅವರು ಹೇಳಿದರು. ಆದರೆ, ನಾವು ಅವರ ಕೋರಿಕೆಯನ್ನು ನಿರಾಕರಿಸಲೇಬೇಕಾಗಿತ್ತು. ಯಾಕೆಂದರೆ ಸರಕಾರದ ಉನ್ನತ ಮಟ್ಟದಲ್ಲೇ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ವ್ಯಕ್ತಿಗಳನ್ನು ಆರಿಸಲಾಗಿತ್ತು. ನಾವು ಅದರಲ್ಲಿ ಯಾವುದೇ ಬದಲಾವಣೆಯನ್ನು ಮಾಡುವಂತಿರಲಿಲ್ಲ ಅಥವಾ ಹೆಚ್ಚುವರಿ ಪ್ರಯಾಣಿಕನನ್ನು ಒಯ್ಯುವಂತಿರಲಿಲ್ಲ.

ಇನ್ನೇನು ನಾವು ಹೊರಡುತ್ತಿದ್ದೇವೆ ಎನ್ನುವಾಗ ಆ ವ್ಯಕ್ತಿ ನಮ್ಮ ಬಳಿ ಓಡುತ್ತಾ ಬಂದರು. ‘‘ಕ್ಯಾಪ್ಟನ್, ಓರ್ವ ಗುಡಿಸುವ ವ್ಯಕ್ತಿಯ ಸ್ಥಾನದಲ್ಲಿ ನನ್ನನ್ನು ಕಳುಹಿಸಲು ಯೋಜನಾ ನಿರ್ದೇಶಕರು ಒಪ್ಪಿದ್ದಾರೆ. ಇಲ್ಲಿ ಅನುಮೋದನೆ ಪತ್ರವಿದೆ. ದಯವಿಟ್ಟು ನನ್ನನ್ನು ಒಳಗೆ ಸೇರಿಸಿಕೊಳ್ಳಿ’’ ಎಂದು ಅವರು ಹೇಳಿದರು. ಕ್ಯಾಪ್ಟನ್ ‘ಸರಿ’ ಎಂದರು. ಆ ವ್ಯಕ್ತಿ ಸಂತುಷ್ಟ ಮಗುವಿನಂತೆ ಹೆಲಿಕಾಪ್ಟರ್‌ನೊಳಗೆ ಜಿಗಿದರು.

ನಮ್ಮ ಎರಡನೇ ನಿಲುಗಡೆಯು ಸುಮಾರು 4 ಗಂಟೆಗಳ ಅವಧಿಯದ್ದಾಗಿತ್ತು. ನಾವು ಚಹಾ ಕುಡಿಯುತ್ತಿದ್ದಾಗ, ಆ ವ್ಯಕ್ತಿಯು ನೆಲವನ್ನು ಗುಡಿಸುವುದನ್ನು ನಾವು ನೋಡಿದೆವು. ಕೆಲವು ಹಿರಿಯ ವಿಜ್ಞಾನಿಗಳು ಅವರತ್ತ ಓಡುವುದನ್ನು ನಾವು ನೋಡಿದೆವು. ಅವರು ಲವಲವಿಕೆಯ ಸಂಭಾಷಣೆಯಲ್ಲಿ ತೊಡಗಿದರು. ಆದರೆ ಇದರ ನಡುವೆ ಅವರು ತನ್ನ ಕೆಲಸವನ್ನು ಮಾಡುತ್ತಲೇ ಇದ್ದರು.

ಓರ್ವ ವಿಜ್ಞಾನಿ ಬಳಿಕ ಕ್ಯಾಪ್ಟನ್ ಬಳಿ ಬಂದು, ನೆಲ ಗುಡಿಸದಂತೆ ಗುಡಿಸುವವನಿಗೆ ಆದೇಶ ನೀಡುವಂತೆ ವಿನಂತಿಸಿದರು! ‘‘ಸರ್, ಅವರು ನಮ್ಮ ಯೋಜನಾ ನಿರ್ದೇಶಕ ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್. ನೀವು ಅವರನ್ನು ಕಸ ಗುಡಿಸದಂತೆ ದಯವಿಟ್ಟು ತಡೆಯಿರಿ!’’ ಎಂದರು.

ನಮಗೆ ಗರಬಡಿದಂತಾಯಿತು. ಕ್ಯಾಪ್ಟನ್ ಕಲಾಮ್‌ರ ಬಳಿ ಹೋದರು. ಆದರೆ, ಕಲಾಮ್ ಹೇಳಿದರು: ‘‘ನಾನು ಗುಡಿಸುವವನ ಸ್ಥಾನದಲ್ಲಿ ಪ್ರಯಾಣಿಸುತ್ತಿದ್ದೇನೆ. ಹಾಗಾಗಿ, ನನ್ನ ಕೆಲಸ ಮಾಡದಂತೆ ನನ್ನನ್ನು ಯಾರೂ ತಡೆಯುವಂತಿಲ್ಲ.’’

ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂದು ಗೊತ್ತಾಗದೆ ನಾವು ಮೂಕ ಪ್ರೇಕ್ಷಕರಾಗಿ ಉಳಿದೆವು. ನಮ್ಮ ಮುಂದಿನ ನಿಲುಗಡೆಯಲ್ಲೂ ಅವರು ಅವರ ಕೆಲಸ ಮಾಡಿದರು. ಅವರ ಸರಳತೆಗೆ ನಾವು ಕ್ಲೀನ್ ಬೌಲ್ಡ್ ಆದೆವು.

ಯಂತ್ರವನ್ನು ಮತ್ತು ಪ್ರಯಾಣಿಕರನ್ನು ನಿಗದಿತ ಸ್ಥಳದಲ್ಲಿ ಇಳಿಸಿ ಬಂದೆವು.

ಹಲವು ವರ್ಷಗಳ ಬಳಿಕ, ರಾಷ್ಟ್ರಪತಿ ಭವನದಿಂದ ನನಗೊಂದು ಆಹ್ವಾನ ಬಂತು. ‘‘ಮುಗಲ್ ಉದ್ಯಾನವನದಲ್ಲಿ ನಾನು ಎಷ್ಟು ಕೆಲಸ ಮಾಡಿದ್ದೇನೆ ಎನ್ನುವುದನ್ನು ನೋಡಿ, ನಾನು ಒಳ್ಳೆಯ ಮಾಲಿಯೋ ಅಥವಾ ಒಳ್ಳೆಯ ಗುಡಿಸುವವನೋ’’ ಎನ್ನುವುದನ್ನು ನಿರ್ಧರಿಸುವಂತೆ ನನ್ನನ್ನು ವಿನಂತಿಸಲಾಗಿತ್ತು. ನಾನು ವಿದೇಶದಲ್ಲಿ ಇರುವುದರಿಂದ ಹೀಗೆ ಮಾಡಲು ನನಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿ ಅವರಿಗೆ ವಿಷಾದ ವ್ಯಕ್ತಪಡಿಸಿದೆ.

ಅವರು ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ಬಳಿಕ ನಾನು ಅವರನ್ನು ಭೇಟಿಯಾದೆ. ಅಂದಿನ ಘಟನೆಯನ್ನು ಅವರು ಆ ದಿನ ನೆನಪಿಸಿಕೊಂಡರು. ನಾನು ಭೇಟಿಯಾದ ಶ್ರೇಷ್ಠ ಭಾರತೀಯರ ಪೈಕಿ ಒಬ್ಬರಾಗಿರುವ ಅವರಿಗೆ ನನ್ನ ನಮನಗಳು.

(ಕ್ಯಾಪ್ಟನ್ ನಾಸಿರ್ ಹನ್ಫೀ ಭಾರತೀಯ ವಾಯು ಪಡೆಯ ಮಾಜಿ ಹೆಲಿಕಾಪ್ಟರ್ ಪೈಲಟ್. ಅವರು ವೀರಚಕ್ರ ಪ್ರಶಸ್ತಿ ವಿಜೇತರು)

ಕೃಪೆ: (www.eastmojo.com)

share
ಕ್ಯಾಪ್ಟನ್ ನಾಸಿರ್ ಹನ್ಫೀ
ಕ್ಯಾಪ್ಟನ್ ನಾಸಿರ್ ಹನ್ಫೀ
Next Story
X