ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಮಂಜೇಶ್ವರದಲ್ಲಿ ಸ್ವರ್ಣ ಪದಕ ಪ್ರದಾನ, ಗೌರವಾಭಿನಂದನೆ

ಮಂಜೇಶ್ವರ, ಡಿ.11: ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಸಂಸ್ಕಾರ ಸಾಹಿತಿ ಮಂಜೇಶ್ವರ ಅಸೆಂಬ್ಲಿ ಸಮಿತಿ ವತಿಯಿಂದ ಗೌರವಾಭಿನಂದನೆ ಹಾಗೂ ಯೂನಿವರ್ಸಲ್ ಸ್ವರ್ಣ ಪದಕ ಪ್ರದಾನ ಕಾರ್ಯಕ್ರಮ ಹೊಸಂಗಡಿ ವ್ಯಾಪಾರ ಭವನದಲ್ಲಿ ಜರುಗಿತು.
ಹಾಜಬ್ಬರನ್ನು ಸಂಸ್ಕಾರ ಸಾಹಿತಿ ರಾಜ್ಯಾಧ್ಯಕ್ಷರೂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಆರ್ಯಾಡನ್ ಶೌಕತ್ ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಅವರು, ಹರೇಕಳ ಹಾಜಬ್ಬರ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ಓರ್ವ ಸಂತ. ಶಿಕ್ಷಣವನ್ನು ಪಡೆಯದೇ ಹಾಜಬ್ಬರ ಅವರು ಇಡೀ ಗ್ರಾಮದಲ್ಲಿಯೇ ಶಿಕ್ಷಣ ಕ್ರಾಂತಿಯನ್ನು ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಇಂತಹ ವ್ಯಕ್ತಿಗಳಿಗೆ ಪದ್ಮಶ್ರೀ ಲಭಿಸಿರುವುದು ಸಾರ್ಥಕ ವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕಾರ ಸಾಹಿತಿ ಅಸೆಂಬ್ಲಿ ಸಮಿತಿಯ ಅಧ್ಯಕ್ಷ ಸಂಕಬೈಲು ಸತೀಶ ಅಡಪ್ಪ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಿಸಿಸಿ ಮಾಜಿ ಅಧ್ಯಕ್ಷ ಹಕೀಂ ಕುನ್ನಿಲ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಧನ್ಯಾ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ., ಲಕ್ಷ್ಮಣ ಪ್ರಭು, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ., ಕುಂಬಳೆ ಸಂಸ್ಕಾರ ಸಾಹಿತಿ ಜಿಲ್ಲಾ ನೇತಾರರಾದ ರಾಘವನ್ ಕುಳಂಗರೆ, ದಿನೇಶ್, ರಾಘವನ್ ಮಾಸ್ತರ್, ಯುನಿವರ್ಸಲ್ ಸಮೂಹ ಸಂಸ್ಥೆಯ ವಾಹಿದ್, ಸಮದ್, ಬಿ.ಎಂ.ಮನ್ಸೂರ್, ಸಂಘಟಕರಾದ ಕಲೀಲ್ ಬಜಾಲ್, ಅಝೀಝ್ ಕಲ್ಲೂರು, ಶರೀಫ್ ಅರಿಬೈಲ್, ವಿನೋದ್ ಪಾವೂರು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪದೋನ್ನತಿಗೊಂಡ ಆರ್ಯಾಡನ್ ಶೌಕತ್ ಅವರನ್ನು ಸಂಸ್ಕಾರ ಸಾಹಿತಿ ಮಂಜೇಶ್ವರ ಅಸೆಂಬ್ಲಿ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಕಾರ ಸಾಹಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ ಸ್ವಾಗತಿಸಿದರು.
ಕೋಶಾಧಿಕಾರಿ ಜಗದೀಶ್ ಮೂಡಂಬೈಲು ವಂದಿಸಿದರು. ಗಾಯಕ ಉಮರ್ ಮಂಜೇಶ್ವರರವರು ಹರೇಕಳ ಹಾಜಬ್ಬ ಕುರಿತ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.






.jpeg)
.jpeg)
.jpeg)
.jpeg)

