ಅಮೆಮಾರ್: ಡಿ.13ರಂದು ನೌಶಾದ್ ಬಾಖವಿಯವರಿಂದ ಏಕದಿನ ಪ್ರವಚನ
ಫರಂಗಿಪೇಟೆ, ಡಿ.10: ನವೀಕೃತ ಅಮೆಮಾರ್ ಬದ್ರಿಯಾ ಜುಮಾ ಮಸೀದಿಯ ಉದ್ಘಾಟನೆ ಸಮಾರಂಭದ ಸಮಾರೋಪದ ಪ್ರಯುಕ್ತ ಡಿ.13ರಂದು ಅಮೆಮಾರ್ ತಂಡೇಲ್ ಗ್ರೌಂಡ್ ನಲ್ಲಿ ಎ.ಎಂ.ನೌಶಾದ್ ಬಾಖವಿಯವರಿಂದ ಏಕದಿನ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಖತೀಬ್ ಅಬ್ದುಲ್ಲತೀಫ್ ಹನೀಫಿ ಕಾರ್ಯಕ್ರಮ ಉದ್ಘಾಟಿಸುವರು. ಅಥಾವುಲ್ಲ ತಂಙಳ್ ಉದ್ಯಾವರ ದುಆಗೈಯುವರು. ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ. ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ ನಾಯಕರುಗಳು ಭಾಗವಹಿಸುವರು ಎಂದು ಮಸೀದಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





