ಅಪ್ರಾಪ್ತೆಯ ಆತ್ಮಹತ್ಯೆಗೆ ದುಷ್ಪ್ರೇರಣೆ: ಆರೋಪಿಗೆ ಜಾಮೀನು ಮಂಜೂರು
ಪುತ್ತೂರು: ಅಪ್ರಾಪ್ತೆಯೊಬ್ಬರ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಆರೋಪ ಎದುರಿಸುತ್ತಿದ್ದ ಸುಳ್ಯ ತಾಲೂಕಿನ ದೇವಚ್ಚಳ ಗ್ರಾಮದ ಮಾವಿನಕಟ್ಟೆ ನಿವಾಸಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
ದೇವಚ್ಚಳ ಗ್ರಾಮದ ಮಾವಿನಕಟ್ಟೆ ನಿವಾಸಿ ಪ್ರವೀಣ್ ಜಾಮೀನು ಪಡೆದುಕೊಂಡಿರುವ ಆರೋಪಿ. ಅಪ್ರಾಪ್ತೆ 5-3-2020ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ದುಷ್ಪ್ರೇರಣೆ ನೀಡಿರುವ ಆರೋಪದ ಹಿನ್ನಲೆಯಲ್ಲಿ ಆಕೆಯ ಪ್ರಿಯಕರ ಎನ್ನಲಾದ ಪ್ರವೀಣ್ ಅವರ ಮೇಲೆ ಕೇಸು ದಾಖಲಾಗಿತ್ತು. ಆತನ ವಿರುದ್ದ ಸುಬ್ರಹ್ಮಣ್ಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು. ಈ ನಡುವೆ ಆರೋಪಿ ಪ್ರವೀಣ್ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
ಆರೋಪಿಯ ಪರವಾಗಿ ವಕೀಲರಾದ ಸುಳ್ಯದ ಎಂ. ವೆಂಕಪ್ಪ ಗೌಡ ಮತ್ತು ರಾಜೇಶ್ ಬಿ.ಜಿ ವಾದಿಸಿದ್ದರು.
Next Story





