ಮಂಗಳೂರು: ‘ಅಸಮ್ಮತಿಯ ಹಕ್ಕು ರಕ್ಷಣೆಗಾಗಿ’ ಜನಜಾಗೃತಿ

ಮಂಗಳೂರು, ಡಿ.11: ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಇಂದು ನಗರದ ಮಿನಿ ವಿಧಾನಸೌಧದ ಎದುರು 'ಅಸಮ್ಮತಿಯ ಹಕ್ಕು ರಕ್ಷಣೆಗಾಗಿ ಎದ್ದು ನಿಂತಿದೆ' ಮಂಗಳೂರು ಎಂಬ ಘೋಷ ವಾಕ್ಯದೊಂದಿಗೆ ಜನಜಾಗೃತಿಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಸರ್ಫರಾಝ್, ನ್ಯಾಷನಲ್ ವುಮೆನ್ಸ್ ಫ್ರಂಟ್ ಮಮ್ತಾಝ್, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಸಿಂ ಜವಾದ್, ಸಾಮಾಜಿಕ ಕಾರ್ಯಕರ್ತೆ ಹರಿಣಿ, ವಕೀಲರಾದ ಫಾ. ವಿನೋದ್, ಹೋರಾಟಗಾರ್ತಿ ವಿದ್ಯಾ ದಿನಕರ್, ಜಮಾಅತೆ ಇಸ್ಲಾಮಿ ಹಿಂದ್‌ನ ಸಾಜಿದಾ ಮುಮಿನ್, ವಿದ್ಯಾರ್ಥಿ ನಾಯಕ ಕೆವಿನ್ ಮೊದಲಾದವರು ಮಾತನಾಡಿದರು.
Next Story





