ಹಾವು ಕಚ್ಚಿ ಸ್ವಾಮೀಜಿ ಮೃತ್ಯು

ಗುರುಮಲ್ಲ ಸ್ವಾಮೀಜಿ
ಚಾಮರಾಜನಗರ: ಕೃಷಿ ಚಟುವಟಿಕೆ ಮೂಲಕ ಗಮನ ಸೆಳೆದಿದ್ದ ಗುಂಡ್ಲುಪೇಟ ತಾಲೂಕಿನ ಗೋಪಾಲಪುರ ಗ್ರಾಮದ ಕಬ್ಬಿಣ ಕೋಲೇಶ್ವರ ಸ್ವಾಮೀಜಿ ಹಾವು ಕಚ್ಚಿ ಮೃತಪಟ್ಟಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಕಬ್ಬಿಣ ಕೋಲೇಶ್ವರ ಮಠದ ಕಿರಿಯ ಮಠಾಧೀಶ ಇಮ್ಮಡಿ ಗುರುಮಲ್ಲ ಸ್ವಾಮೀಜಿ(42) ಮಠದ ಜಮೀನಿನಲ್ಲಿ ಕೃಷಿ ಕಾರ್ಮಿಕರೊಂದಿಗೆ ಕಳೆ ಕೀಳುತ್ತಿದ್ದಾಗ ಶ್ರೀಗಳಿಗೆ ಹಾವು ಕಚ್ಚಿದೆ. ಚಿಕಿತ್ಸೆಗಾಗಿ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿರಾದರೂ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಮೃತಪಟ್ಟಿದ್ದಾರೆ.
ಶ್ರೀಗಳ ಅಂತ್ಯಕ್ರಿಯೆ ಗೋಪಾಲಪುರದ ಮಠದ ಬಳಿ ರವಿವಾರ ನಡೆಯಲಿದ್ದು, ಜಿಲ್ಲೆಯ ವಿವಿಧ ಮಠಗಳ ಶ್ರೀಗಳು ಬರಲಿದ್ದಾರೆ. ಕಾಯಕವೇ ಕೈಲಾಸ ಎಂಬ ಮಾತಿನ ಮಹತ್ವವ ಸಾರಿದ್ದ ಇವರು ಮುಮ್ಮಡಿ ಕೃಷ್ಣರಾಜ ಒಡೆಯರ್ ನೀಡಿದ್ದ 20 ಎಕರೆ ಮಳೆಯಶ್ರಿತ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಲಕ್ಷಾಂತರ ರೂ. ಆದಾಯ ಗಳಿಸಿ ಗಮನ ಸೆಳೆದಿದ್ದರು.
Next Story





