Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತ ಮೂಲದ ವೈದ್ಯ ನಾಸಾದ ಗಗನಯಾನಿ

ಭಾರತ ಮೂಲದ ವೈದ್ಯ ನಾಸಾದ ಗಗನಯಾನಿ

ಅನಘ ಆರ್. ಮನೋಜ್ಅನಘ ಆರ್. ಮನೋಜ್13 Dec 2021 10:53 AM IST
share
ಭಾರತ ಮೂಲದ ವೈದ್ಯ ನಾಸಾದ ಗಗನಯಾನಿ

ಗಗನಯಾನಿಗಳಾಗಿ ತರಬೇತಿ ಪಡೆಯಲಿರುವ ತನ್ನ ನೂತನ 10 ಅಭ್ಯರ್ಥಿಗಳ ಹೆಸರುಗಳನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಇತ್ತೀಚೆಗೆ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾರತ ಮೂಲದ ವೈದ್ಯ ಅನಿಲ್ ಮೆನನ್ ಹೆಸರೂ ಇದೆ. ವೈಮಾನಿಕ ಸರ್ಜನ್ ಮೆನನ್ ಎಲಾನ್ ಮಸ್ಕ್ ಒಡೆತನದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್‌ನ ‘ಡೆಮೋ-2’ ಯೋಜನೆಯಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ನೆರವು ನೀಡಿದ್ದರು. ಅವರ ಕುರಿತ ಕೆಲವು ಮಾಹಿತಿಗಳು ಇಲ್ಲಿವೆ.

ಅನಿಲ್ ಅಮೆರಿಕದ ವಾಯುಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಬಾಹ್ಯಾಕಾಶದಲ್ಲಿ ಅಮೆರಿಕವನ್ನು ಪ್ರತಿನಿಧಿಸಲು ಹಾಗೂ ಅಲ್ಲಿ ಮಾನವರ ಒಳಿತಿಗಾಗಿ ಕೆಲಸ ಮಾಡಲು 12,000ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದು, ಅವರ ಪೈಕಿ 10 ಮಂದಿಯನ್ನು ಆರಿಸಿರುವುದಾಗಿ ಪತ್ರಿಕಾ ಪ್ರಕಟನೆಯೊಂದರಲ್ಲಿ ನಾಸಾ ಘೋಷಿಸಿದೆ.

‘‘ಇಂದು ನಾವು 10 ನೂತನ ಅನ್ವೇಷಕರು, ಆರ್ಟಮಿಸ್ ತಲೆಮಾರಿನ 10 ಸದಸ್ಯರು, ನಾಸಾದ 2021 ಗಗನಯಾನಿ ಅಭ್ಯರ್ಥಿ ಸಮುದಾಯವನ್ನು ನಾವು ಸ್ವಾಗತಿಸುತ್ತೇವೆ’’ ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಇತ್ತೀಚೆಗೆ ಹೇಳಿದ್ದಾರೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅನಿಲ್ ಹೀಗೆ ಹೇಳಿದ್ದಾರೆ: ‘‘12,000 ಮಂದಿ 10 ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ನಾವು ಆಯ್ಕೆಯಾಗುತ್ತೇವೆ ಎನ್ನುವ ನಿರೀಕ್ಷೆಯನ್ನು ನಾವು ಯಾವತ್ತೂ ಇಟ್ಟುಕೊಳ್ಳುವಂತಿಲ್ಲ. ಅಲ್ಲಿ ಖಂಡಿತವಾಗಿಯೂ ತುಂಬಾ ಮಂದಿ ಅರ್ಹ ಜನರಿರುತ್ತಾರೆ. ನಾನು ಆಯ್ಕೆಯಾಗಿರುವುದು ನನಗೆ ಆಶ್ಚರ್ಯವಾಗಿದೆ. ಆಶ್ಚರ್ಯಗಳು ಒಳ್ಳೆಯದೇ’’.

ನಾನು ಕ್ಯಾಲಿಫೋರ್ನಿಯದಲ್ಲಿದ್ದೆ. ಆಗ ನನಗೆ ಕರೆ ಬಂತು. ಕರೆ ಮಾಡಿದ ವ್ಯಕ್ತಿಯು ಡ್ರ್ಯಾಗನ್ ಕ್ಯಾಪ್ಸೂಲ್ ಬಗ್ಗೆ ಮಾತನಾಡಲು ಆರಂಭಿಸಿದರು. ಯಾಕೆಂದರೆ ನಾನು ಆ ಸಮಯದಲ್ಲಿ ಸ್ಪೇಸ್‌ಎಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದೆ. ಅದೊಂದು ವಾಣಿಜ್ಯ ಉದ್ದೇಶದ ಕರೆ ಎಂದು ಆಗ ನಾನು ಭಾವಿಸಿದೆ ಹಾಗೂ ಅರ್ಧದಲ್ಲಿ ಅದು ಜೋಕ್ ಆಯಿತು. ಗನನಯಾನಿ ಕಚೇರಿಯ ಮುಖ್ಯಸ್ಥರು ಹೇಳಿದರು, ‘‘ನಾನು ತಮಾಷೆ ಮಾಡುತ್ತಿದ್ದೇನೆ, ನೀವು ಗಗನಯಾನಿಯಾಗಲು ಬಯಸುತ್ತೀರಾ?’’ ನಾನು ಹೇಳಿದೆ, ‘‘ನನ್ನನ್ನು ಸೇರಿಸಿಕೊಳ್ಳಿ’’.

ಭಾರತದ ಜೊತೆಗಿನ ತನ್ನ ಸಂಬಂಧದ ಬಗ್ಗೆ ಮಾತನಾಡಿದ ಅವರು, ಭಾರತದವನಾದ ನನಗೆ ಜಗತ್ತಿನ ದೊಡ್ಡ ಭಾಗವನ್ನು ಪ್ರತಿನಿಧಿಸಲು ಸಂತೋಷವಾಗುತ್ತದೆ. ಭಾರತದಲ್ಲಿ ಸಮಯವನ್ನು ಕಳೆದಿರುವುದು ಈ ಕೆಲಸಕ್ಕೆ ನನ್ನನ್ನು ಸಿದ್ಧಪಡಿಸಲು ನೆರವು ನೀಡಿತು. ಯಾಕೆಂದರೆ ಇದೇ ಕೌಶಲವನ್ನು ಮುಂದೆ ನಾನು ಗಗನಯಾನಿಯಾಗಿ ಬಳಸಬೇಕಾಗುತ್ತದೆ’’ ಎಂದು ಇಂಡಿಯನ್ ಎಕ್ಸ್ ಪ್ರೆಸ್‌ನೊಂದಿಗೆ ಮಾತನಾಡುತ್ತಾ ಹೇಳಿದರು.

ಅಭ್ಯರ್ಥಿಗಳು 2022 ಜನವರಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕು. ಬಳಿಕ ಅವರು ಎರಡು ವರ್ಷಗಳ ತರಬೇತಿ ಪಡೆಯುತ್ತಾರೆ.

45 ವರ್ಷದ ಮೇಧಾವಿಯ ಕುರಿತ ಹಲವು ಸ್ವಾರಸ್ಯಕರ ವಿಷಯಗಳು ಇಲ್ಲಿವೆ: ಅನಿಲ್ ಅಮೆರಿಕದ ಮಿನಿಯಪೊಲಿಸ್ ನಗರದಲ್ಲಿ ಮಲಯಾಳಿ ತಂದೆ ಮತ್ತು ಯುಕ್ರೇನ್ ತಾಯಿಗೆ ಜನಿಸಿದರು. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೇರಿದಂತೆ ಹಲವಾರು ಪದವಿಗಳು, ಪರವಾನಿಗೆಗಳು ಮತ್ತು ಪ್ರಮಾಣಪತ್ರಗಳನ್ನು ಹೊಂದಿದ್ದಾರೆ.

ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ 1995ರಲ್ಲಿ ನ್ಯೂರೋಬಯಾಲಜಿಯಲ್ಲಿ ಪದವಿ ಪಡೆದಿದ್ದಾರೆ. ಅವರು ಅಮೆರಿಕದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆದರೂ, 1999 ಮತ್ತು 2001ರ ನಡುವಿನ ಅವಧಿಯಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ರೋಟರಿ ಅಂಬಾಸಡೋರಿಯಲ್ ಫೆಲೋ ಆಗಿ ಭಾರತಕ್ಕೆ ಹೋದರು. ಭಾರತದಲ್ಲಿನ ತನ್ನ ವಾಸ್ತವ್ಯದ ಅವಧಿಯಲ್ಲಿ ಅವರು ದೇಶದ ಪೋಲಿಯೊ ನಿಗ್ರಹ ಅಭಿಯಾನದಲ್ಲೂ ಪಾಲ್ಗೊಂಡರು.

2000 ಮತ್ತು 2006ರ ನಡುವಿನ ಅವಧಿಯಲ್ಲಿ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಎಮ್‌ಎಸ್ ಪದವಿ ಮತ್ತು ಸ್ಟ್ಯಾನ್‌ಫೋರ್ಡ್ ಮೆಡಿಕಲ್ ಸ್ಕೂಲ್‌ನಿಂದ ಎಮ್‌ಡಿ ಪದವಿ ಪಡೆದರು.

ಅವರು ಏರೋಸ್ಪೇಸ್ ಮೆಡಿಸಿನ್, ಎಮರ್ಜನ್ಸಿ ಮೆಡಿಸಿನ್, ಸಾರ್ವಜನಿಕ ಆರೋಗ್ಯ ಮತ್ತು ವೈಲ್ಡರ್‌ನೆಸ್ ಮೆಡಿಸಿನ್ (ನಿಯಮಿತ ವೈದ್ಯಕೀಯ ಸೌಲಭ್ಯಗಳು ದೊರಕದ ದುರ್ಗಮ ಪ್ರದೇಶಗಳಲ್ಲಿ ಲಭ್ಯವಿರುವ ಸೀಮಿತ ಸಂಪನ್ಮೂಲಗಳನ್ನೇ ಬಳಸಿ ನೀಡುವ ಚಿಕಿತ್ಸೆ)ನಲ್ಲೂ ಪದವಿಗಳನ್ನು ಹೊಂದಿದ್ದಾರೆ. ಹೈಟಿ (2010) ಮತ್ತು ನೇಪಾಳ (2015)ದಲ್ಲಿ ಭೂಕಂಪಗಳು ಸಂಭವಿಸಿದಾಗ ಹಾಗೂ 2011ರಲ್ಲಿ ನಡೆದ ರೆನೊ ವೈಮಾನಿಕ ಪ್ರದರ್ಶನದ ವೇಳೆ ಅಪಘಾತ ಸಂಭವಿಸಿದಾಗ ಮೊದಲು ಕ್ರಮಗಳನ್ನು ತೆಗೆದುಕೊಂಡವರ ಪೈಕಿ ಅವರೂ ಒಬ್ಬರು.

ಅವರು 2014ರಿಂದ 2018ರವರೆಗೆ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ಸಂಸ್ಥೆಯ ಮೊದಲ ವೈಮಾನಿಕ ಸರ್ಜನ್ ಆಗಿದ್ದರು. ನಾಸಾದ ಸ್ಪೇಸ್‌ಎಕ್ಸ್ ಡೆಮೊ-2 ಯೋಜನೆಯಲ್ಲಿ ಸ್ಪೇಸ್‌ಎಕ್ಸ್‌ನ ಮೊದಲ ಬಾಹ್ಯಾಕಾಶ ಯಾನಿಗಳನ್ನು ಉಡಾಯಿಸಲು ನೆರವು ನೀಡಿದ್ದರು.

ಸ್ಪೇಸ್‌ಎಕ್ಸ್‌ನ ಭವಿಷ್ಯದ ಯೋಜನೆಗಳಲ್ಲಿ ಮಾನವ ವ್ಯವಸ್ಥೆಯನ್ನು ಬೆಂಬಲಿಸುವ ವೈದ್ಯಕೀಯ ಸಂಸ್ಥೆಯೊಂದನ್ನು ಸ್ಥಾಪಿಸಲು ಅವರು ಸ್ಪೇಸ್‌ಎಕ್ಸ್‌ಗೆ ನೆರವು ನೀಡಿದ್ದರು. ವಾಯುಪಡೆಯಲ್ಲಿ ಮೆನನ್ ವೈಮಾನಿಕ ಸರ್ಜನ್ ಆಗಿ 45ನೇ ಸ್ಪೇಸ್ ವಿಂಗ್ ಮತ್ತು 173ನೇ ಫೈಟರ್ ವಿಂಗ್‌ಗೆ ಪ್ರೋತ್ಸಾಹ ನೀಡಿದರು. 173ನೇ ಫೈಟರ್ ವಿಂಗ್‌ನಲ್ಲಿ ಅನಿಲ್ ಎಫ್-15 ಯುದ್ಧ ವಿಮಾನದಲ್ಲಿ 100ಕ್ಕೂ ಅಧಿಕ ಹಾರಾಟಗಳನ್ನು ನಡೆಸಿದರು. ಅವರು ವಾಯು ಸಾರಿಗೆ ತಂಡದ ಭಾಗವಾಗಿ 100ಕ್ಕೂ ಅಧಿಕ ರೋಗಿಗಳನ್ನು ಸಾಗಿಸಿದ್ದಾರೆ. ಅನಿಲ್ ಏರೋಸ್ಪೇಸ್ ಮೆಡಿಸಿನ್ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದವರಿಗೆ ಕೊಡಲಾಗುವ ತಿಯೋಡೋರ್ ಸಿ ಲೈಸ್ಟರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜೊತೆಗೆ ನಾಸಾ ಜೆಎಸ್‌ಸಿ ಪ್ರಶಸ್ತಿ ಮತ್ತು ಯುಎಸ್ ಏರ್‌ಫೋರ್ಸ್ ಸ್ಮಾರಕ ಪದಕವನ್ನೂ ಸ್ವೀಕರಿಸಿದ್ದಾರೆ.

ಅವರು 20ಕ್ಕೂ ಅಧಿಕ ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಅನಿಲ್ ಈ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಲಯಾಳಿ ಅವರಾಗುತ್ತಾರೆ.

ಕೃಪೆ: www.thebetterindia.com

share
ಅನಘ ಆರ್. ಮನೋಜ್
ಅನಘ ಆರ್. ಮನೋಜ್
Next Story
X