ಕೋಟೆಕಾರ್ ಪ.ಪಂ. ಚುನಾವಣೆ: ಕಾಂಗ್ರೆಸ್ ನಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಉಳ್ಳಾಲ,ಡಿ.13: ಕೋಟೆಕಾರು ಪಟ್ಟಣ ಪಂಚಾಯತ್ ಗೆ ಡಿ.27 ರಂದು ನಡೆಯಲಿರುವ ಚುನಾವಣೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದ್ದಾರೆ.
ತೊಕ್ಕೊಟ್ಟುವಿನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟೆಕಾರ್ ಪಟ್ಟಣ ಪಂಚಾಯತ್ ನ ಒಟ್ಟು 17 ವಾರ್ಡ್ ಗಳಿಗೂ ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ ಎಂದರು.
ವಾರ್ಡ್ 1 ಅಡ್ಕ- ದಿಲೀಪ್, ವಾರ್ಡ್ 2 ಕನೀರುತೊಟ-ಸವಿತಾ, ವಾರ್ಡ್ 3 ಮಾಡೂರು-ನವೀನ್ ಕುಮಾರ್, ವಾರ್ಡ್ 4 ಬಲ್ಯ-ಪೂವಮ್ಮ, ವಾರ್ಡ್ 5 ಬಗಂಬಿಲ - ನವೀನ್, ವಾರ್ಡ್ 6 ವೈದ್ಯನಾಥ ನಗರ-ಜೆಸಿಂತಾ ಮೆಂಡೋನ್ಸ, ವಾರ್ಡ್ 7 ಸುಳ್ಳಂಜೀರು-ರೇಣುಕಾ ಎಸ್. ಶೆಟ್ಟಿ, ವಾರ್ಡ್ 8 ತಾರಿಪಡ್ಪು -ಇಸಾಕ್, ವಾರ್ಡ್ 9 ಶಾರದಾ ನಗರ -ಸಫೀನಾ, ವಾರ್ಡ್ 10 ಕುಶಾಲ್ ನಗರ - ದೇವರಾಜ್, ವಾರ್ಡ್ 11 ಮಡ್ಯಾರ್-ಪ್ರಹ್ಲಾದ್, ವಾರ್ಡ್ 12 ಜಲಾಲ್ ಬಾಗ್ -ಆಯಿಷಾ ಡಿ., ವಾರ್ಡ್ 13 ಪನೀರ್ -ಸಫಿಯಾ, ವಾರ್ಡ್ 14 ಮಿತ್ರ ನಗರ -ಕಲಾವತಿ, ವಾರ್ಡ್ 15 ಕೊಂಡಾಣ -ರವಿರಾಜ್, ವಾರ್ಡ್ 16 ಅಜ್ಜಿನಡ್ಕ - ಅಹ್ಮದ್ ಅಜ್ಜಿನಡ್ಕ, ವಾರ್ಡ್ 17 ಕೊಮರಂಗಲ ಕ್ಷೇತ್ರದಿಂದ ಝುಬೈದಾ ಅಭ್ಯರ್ಥಿಯಾಗಿದ್ದಾರೆ. ನಾಮಪತ್ರ ಸಲ್ಲಿಕೆ ಈಗಾಗಲೇ ಆರಂಭಗೊಂಡಿದೆ. ಶಾಸಕ ಯುಟಿ ಖಾದರ್ ಚುನಾವಣೆ ಉಸ್ತುವಾರಿ ವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಲ್ವಿನ್ ಡಿಸೋಜ, ದಿಲೀಪ್ ಕುಮಾರ್, ಮೋನು ಮಲಾರ್, ದಿನೇಶ್ ರೈ, ಬಾಝಿಲ್ ಡಿಸೋಜ, ಚಂದ್ರಿಕಾ ರೈ,ಕಲಾವತಿ, ಡೆನ್ನಿಸ್ ಡಿಸೋಜ, ದಿನೇಶ್ ಕುಂಪಲ, ನಾಗೇಶ್, ಮೊಯ್ದಿನ್ ಕುಂಞಿ ಉಪಸ್ಥಿತರಿದ್ದರು.





