ಬೆಳ್ತಂಗಡಿ: ಮಲಾಡಿ ಗ್ರಾಪಂ ಪಿಡಿಒ ಎಸಿಬಿ ಬಲೆಗೆ
![ಬೆಳ್ತಂಗಡಿ: ಮಲಾಡಿ ಗ್ರಾಪಂ ಪಿಡಿಒ ಎಸಿಬಿ ಬಲೆಗೆ ಬೆಳ್ತಂಗಡಿ: ಮಲಾಡಿ ಗ್ರಾಪಂ ಪಿಡಿಒ ಎಸಿಬಿ ಬಲೆಗೆ](https://www.varthabharati.in/sites/default/files/images/articles/2021/12/13/317456-1639387093.jpeg)
ಬೆಳ್ತಂಗಡಿ, ಡಿ.13: ತಾಲೂಕಿನ ಮಲಾಡಿ ಗ್ರಾಪಂ ಪಿಡಿಓ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಮಲಾಡಿ ಗ್ರಾಮ ಪಂಚಾಯತ್ ಕಚೇರಿಯೊಳಗೆ ಪಿಡಿಓ ರವಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳು ಅವರನ್ನು ಸೆರೆ ಹಿಡಿದಿದ್ದಾರೆ.
9/11 ಮಾಡಲು 15,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ದ.ಕ.ಭ್ರಷ್ಟಾಚಾರ ನಿಗ್ರಹ ದಳ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಪಿಡಿಒ ರವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Next Story