Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರಿನ ಈ ಸರಕಾರಿ ಶಾಲೆಯ ಗೋಡೆಗಳೂ ಕಥೆ...

ಮಂಗಳೂರಿನ ಈ ಸರಕಾರಿ ಶಾಲೆಯ ಗೋಡೆಗಳೂ ಕಥೆ ಹೇಳುತ್ತವೆ!

ಕಲಾವಿದರ ಕುಂಚದಲ್ಲಿ ಅರಳಿದ ಕಥಾ ಚಿತ್ತಾರ!

ವಾರ್ತಾಭಾರತಿವಾರ್ತಾಭಾರತಿ13 Dec 2021 3:05 PM IST
share
ಮಂಗಳೂರಿನ ಈ ಸರಕಾರಿ ಶಾಲೆಯ ಗೋಡೆಗಳೂ ಕಥೆ ಹೇಳುತ್ತವೆ!

ಮಂಗಳೂರು, ಡಿ. 13: ಈ ಸರಕಾರಿ ಶಾಲೆಯ ಪ್ರತಿ ಗೋಡೆಯಲ್ಲೂ ಒಂದೊಂದು ಕಥೆಯಿದೆ. ಕಥೆಗಳ ಹಿಂದೆ ಬಣ್ಣದ ಲೋಕವಿದೆ. ಕಲಾವಿದರ ಕುಂಚದ ಕೈಚಳಕವಿದೆ. ಇದು ನಗರದ ಬೋಳೂರು ಸಮೀಪದ ಬೊಕ್ಕಪಟ್ಣ ದ.ಕ. ಜಿಲ್ಲಾ ಪಂಚಾಯತ್ ಶಾಲೆಯ ವಿಶೇಷತೆ.

ಶಾಲೆಯ ಗೋಡೆಗಳಲ್ಲಿ ಕಥಾ ಚಿತ್ತಾರದ ಮೂಲಕ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ಪ್ರಯತ್ನ ನಡೆದಿದೆ. ಮಕ್ಕಳ ಮನಸ್ಸನ್ನು ಚಿತ್ರ ಹಾಗೂ ಕಥೆಗಳು ಬಹುಬೇಗ ಆಕರ್ಷಿಸುತ್ತದೆ. ಹಾಗಾಗಿಯೇ ಕೊರೋನ ಕಾರಣದಿಂದ ಸುಮಾರು ಎರಡು ವರ್ಷಗಳ ಕಾಲ ಶಾಲೆಗಳಲ್ಲಿ ಭೌತಿಕ ತರಗತಿಯ ವಾತಾವರಣದಿಂದ ದೂರವಾಗಿದ್ದ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ಸಲುವಾಗಿ ಬೊಕ್ಕಪಟ್ಣ ಶಾಲೆಯಲ್ಲಿ ಈ ಪ್ರಯತ್ನ ಮಾಡಲಾಗಿದೆ.

ದ.ಕ.ಜಿಲ್ಲೆಯ 17 ಮಂದಿ ಚಿತ್ರಕಲಾ ಶಿಕ್ಷಕರು ತಮ್ಮ ಕಲಾ ಚಿತ್ತಾರದ ಮೂಲಕ ಶಾಲೆಯ ಗೋಡೆಗಳಲ್ಲಿ ಕಥಾ ಹಂದರವನ್ನು ಸೃಷ್ಟಿಸಿದ್ದಾರೆ. ವಿಭಿನ್ನ ಕಥೆಗಳನ್ನು ಹೇಳುವ ಈ ಚಿತ್ತಾರಗಳು ಒಂದಕ್ಕೊಂದು ಭಿನ್ನವಾಗಿದ್ದು, ಕಲಾ ಶಿಕ್ಷಕರ ಜತೆಗೆ ಮಕ್ಕಳು ಕೂಡಾ ವರ್ಲಿ ಚಿತ್ರಗಳ ಮೂಲಕ ತಮ್ಮ ಕಲಾ ಆಸಕ್ತಿಯನ್ನು ಗೋಡೆಗಳಲ್ಲಿ ಪ್ರದರ್ಶಿಸಿದ್ದಾರೆ. ಇದಲ್ಲದೆ ಆವರಣ ಗೋಡೆಯಲ್ಲಿ ನಮ್ಮ ಶಾಲೆ (Our school) ಎಂಬ ಹೆಮ್ಮೆ , ಜಲಪಾತ, ಯೋಗದ ಮಹತ್ವ, ಪ್ರಾಣಿಗಳು, ಪರಿಸರ ಸಮತೋಲನ, ಪುಸ್ತಕ ಮರ, ನಿತ್ಯ ಹರಿಧ್ವರ್ಣ ಕಾಡಿನಲ್ಲಿ ನೀರ ಝರಿ, ಆಝಾದಿ ಕ ಮಹೋತ್ಸವ, ಸ್ವಚ್ಛತೆಯ ಜಾಗೃತಿ, ಪ್ರಕೃತಿಯೊಡನೆ ಸಂಭಾಷಣೆ, ಶಾಲೆಯೊಂದಿಗೆ ಸೆಲ್ಫಿ ಮೊದಲಾದ ಬಣ್ಣ ಬಣ್ಣದ ಚಿತ್ರಗಳು ಇಲ್ಲಿ ಮಕ್ಕಳನ್ನು ಮಾತ್ರವಲ್ಲದೆ ನೋಡುಗರನ್ನೂ ಆಕರ್ಷಿಸುತ್ತವೆ.

ಚಿತ್ರ ಕಲಾವಿದರು, ಮಕ್ಕಳ ಜತೆಗೆ ಶಾಲೆಯ ಹಳೇ ವಿದ್ಯಾರ್ಥಿ ಸಂಘ, ದಾನಿಗಳು, ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾ ಶಿಕ್ಷಕ ವೃಂದ ಕೂಡಾ ಈ ಕಲಾ ಲೋಕ ಅನಾವರಣಕ್ಕೆ ಸಹಕಾರ ನೀಡಿದೆ.ಶಾಲಾ ಆವರಣ ಗೋಡೆಯಲ್ಲಿ ರೈಲು ಬಂಡಿಯ ಚಿತ್ರ ಬಿಡಿಸಲಾಗಿದ್ದು, ನೋಡುವಾಗ ನೈಜ ರೈಲೊಂದೇ ಕಣ್ಣೆದುರಿಗೆ ಕಂಡ ಅನುಭವ. ಇದಕ್ಕೆ  ‘ಬೊಕ್ಕಪಟ್ಣ ಎಕ್ಸ್‌ಪ್ರೆಸ್’ ಎಂದೂ ಹೆಸರಿಡಲಾಗಿದೆ.

1904ರಲ್ಲಿ ಆರಂಭವಾದ ದ.ಕ ಜಿ.ಪಂ.ಹಿ.ಪ್ರಾ. ಶಾಲೆ ಬೊಕ್ಕಪಟ್ಣ-06 ಖಾಸಗಿ ಶಾಲೆಯ ಸ್ವರೂಪದಲ್ಲಿಯೇ ಗುರುತಿಸಿಕೊಂಡಿದೆ. 1ರಿಂದ 7ನೇ ತರಗತಿ ಇಲ್ಲಿದ್ದು 50 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಕರಾಗಿ ಫೆಲೊರಾ ಶುಭಾವತಿ, ಜಯಲತಾ ಬೋಳೂರು, ಸುಮತಿ ಯು. ಹಾಗೂ ಅಂಬಿಕಾ ಎಚ್.ಆರ್ ಸೇವೆ ಸಲ್ಲಿಸುತ್ತಿದ್ದಾರೆ.

ಚಿತ್ರಕಲಾ ಶಿಕ್ಷಕರಾದ ದಿನೇಶ್ ಶೆಟ್ಟಿಗಾರ್, ಸುಂದರ್, ಮಂಜುನಾಥ್, ಸುಧೀರ್, ರಾಜೇಶ್ವರಿ ಕೆ., ಶಾಲಿನಿ, ಹರ್ಷಿ ಆಚಾರ್ಯ, ಚನ್ನಕೇಶವ ಡಿ ಆರ್, ತಾರನಾಥ ಕೈರಂಗಳ, ಮುರಳೀಧರ ಆಚಾರ್ಯ, ಮುರಳಿ ಕೃಷ್ಣ ರಾವ್, ಧನಂಜಯ ಪಿ., ಉಮೇಶ್, ಬಾಲಕೃಷ್ಣ ಶೆಟ್ಟಿ, ಪ್ರಸನ್ನ ಕುಮಾರ್, ಸುಚೇತ ಮತ್ತು ಒಲಿವಿಯ ಈ ಗೋಡೆಗಳ ಕಥಾ ಚಿತ್ತಾರಕ್ಕೆ ಮಕ್ಕಳ ಜತೆ ತಮ್ಮ ಕೈಚಳಕವನ್ನು ಪ್ರದರ್ಶಿಸಿದ್ದಾರೆ.


 ಶಾಲೆಯಲ್ಲಿ ಅಕ್ಟೋಬರ್ 27ರಿಂದ 29ರವೆರಗೆ ಪ್ರಣತಿ ವರ್ಣ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಸಂದರ್ಭ ಶಾಲೆಯ ಗೋಡೆಗಳಲ್ಲಿ ಈ ಚಿತ್ತಾರಗಳನ್ನು ದ.ಕ. ಜಿಲ್ಲೆಯ 17 ಜನ ಚಿತ್ರಕಲಾ ಶಿಕ್ಷಕರು, ಚಿತ್ರ ಕಲಿತ ಮಿತ್ರರು, ಶಾಲಾ ಮಕ್ಕಳು ಸೇರಿಕೊಂಡು ಬಿಡಿಸಿ ಶಾಲೆಯನ್ನು ಸುಂದರಗೊಳಿಸಿದ್ದಾರೆ. ಶೈಕ್ಷಣಿಕ ಚಟುವಟಿಕೆಯಿಂದ ದೀರ್ಘಕಾಲ ದೂರವಿದ್ದ ಮಕ್ಕಳನ್ನು ಶಾಲಾ ವಾತಾವರಣಕ್ಕೆ ಹೊಂದಿಕೊಂಡು ಬಹಳ ಆನಂದದಿಂದ ಕಲಿಯುವ ಕಲಿಕಾ ಕ್ಷೇತ್ರವನ್ನಾಗಿ ಮಾಡಬೇಕು ಎಂಬ ಆಶಯದಿಂದ ಈ ಕಾರ್ಯ ನಡೆಸಲಾಗಿದೆ. ಶಾಲಾ ಹಳೆ ವಿದ್ಯಾರ್ಥಿ ಸಂಘ, ಶೈಕ್ಷಣಿಕ ಅಭಿಮಾನಿ ದಾನಿಗಳು ಸ್ವಚ್ಛತೆಗಾಗಿ ಶ್ರಮದಾನ ಹಾಗೂ ಬಣ್ಣಗಳ ಪರಿಕರಗಳ ನೆರವು ನೀಡಿದ್ದಾರೆ.

-ಅಂಬಿಕಾ, ಚಿತ್ರಕಲಾ ಶಿಕ್ಷಕರು ದ.ಕ. ಜಿಪಂ ಹಿ.ಪ್ರಾ. ಶಾಲೆ ಬೊಕ್ಕಪಟ್ಣ-06

share
ವಾರ್ತಾಭಾರತಿ
ವಾರ್ತಾಭಾರತಿ
Next Story
X