ಕಾಯ್ದೆಯಿಂದ ದೇಶ ವಿಭಜನೆ ಕೆಲಸ ಬೇಡ: ಮಾಜಿ ಸಚಿವ ಕೆ.ಜೆ.ಜಾರ್ಜ್

ಬೆಳಗಾವಿ ಡಿ.13: ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ ದೇಶ ವಿಭಜನೆಯ ಕೆಲಸಕ್ಕೆ ಕೈಹಾಕಬೇಡಿ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಸೋಮವಾರ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವ ಇಚ್ಛೆಯಿಂದ ಯಾರು, ಯಾವ ಧರ್ಮಕ್ಕೂ ಸೇರಬಹುದಾಗಿದೆ. ಆದರೆ, ಬಲವಂತದಿಂದ ಮತಾಂತರಕ್ಕೆ ನಮ್ಮ ತೀವ್ರ ವಿರೋಧವಿದೆ. ಜತೆಗೆ, ಸಂವಿಧಾನದಲ್ಲಿ ಬಲವಂತವಾಗಿ ಮತಾಂತರ ಮಾಡುವಂತಿಲ್ಲ ಎಂದು ಬಹಳ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಪಕ್ಷದವರಿಗೆ ಕಾಯ್ದೆ ತರದಂತೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದ ಅವರು, ಕ್ರೈಸ್ತ ಸಮುದಾಯದ ಜನಸಂಖ್ಯೆ ಮೊದಲಿಗಿಂತ ಕಡಿಮೆ ಇದೆ. ಆದರೂ ರಾಜಕೀಯದ ದುರುದ್ದೇಶದಿಂದ ಈ ಕಾಯ್ದೆ ಜಾರಿಗೆ ಸರಕಾರ ಮುಂದಾಗಿದೆ ಎಂದು ಆರೋಪಿಸಿದರು.
ಹಿಂದೂ ಧರ್ಮವಾಗಲಿ ಅಥವಾ ಬೇರೆ ಧರ್ಮವಾಗಲಿ ಶಕ್ತಿಯುಕ್ತವಾಗಿದೆ. ಅಷ್ಟೇ ಏಕೆ, ಮೊಘಲರು, ಡಚ್ಚರು, ಪೋರ್ಚುಗೀಸರು ಬಂದರೂ ಹಿಂದೂ ಧರ್ಮದ ಜನಸಂಖ್ಯೆ ಹೆಚ್ಚಿದೆ ಎಂದು ಅವರು ಜಾರ್ಜ್ ಹೇಳಿದರು.
Next Story





