ಬೆಳಗಾವಿ: ಅಧಿವೇಶನಕ್ಕೆ ಮೊದಲ ದಿನವೇ ಸುವರ್ಣಸೌಧದಲ್ಲಿ ಹಲವು ಸದಸ್ಯರ ಗೈರು!

ಬೆಳಗಾವಿ, ಡಿ.13: ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಉಭಯ ಸದನದಲ್ಲಿ ಸೋಮವಾರ ಸದಸ್ಯರ ಗೈರಾದ ದೃಶ್ಯ ಕಂಡಿತು.
ಎರಡು ವರ್ಷಗಳ ನಂತರ ನಡೆಯುತ್ತಿರುವ ಅಧಿವೇಶನಕ್ಕೆ ಮೊದಲ ದಿನವೇ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಕಲಾಪದಲ್ಲಿ ಹಲವು ಸದಸ್ಯರು ಗೈರಾದರು.
ಮೊದಲ ದಿನ ವಿಧಾನಸಭೆಯಲ್ಲಿ 80 ಶಾಸಕರು ಹಾಜರಾಗಿದ್ದರು. ಈ ಪೈಕಿ ಪ್ರತಿಪಕ್ಷದ 35 ಸದಸ್ಯರು, ಆಡಳಿತ ಪಕ್ಷದ 45 ಸದಸ್ಯರು ಪಾಲ್ಗೊಂಡಿದ್ದರು. ಪ್ರಮುಖವಾಗಿ ಪ್ರತಿಪಕ್ಷ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖರು ಹಾಜರಾಗಿರಲಿಲ್ಲ. ಅದೇ ರೀತಿ, ಕೆಲ ಸದಸ್ಯರು ಗೈರಾಗಿದ್ದರು.
ಬೆಳಗಾವಿಯಲ್ಲಿ ಅಧಿವೇಶನ ನಡೆದ ಸಂದರ್ಭದಲ್ಲಿ ಎಲ್ಲ ಸದಸ್ಯರ ಗೈರುಹಾಜರಿ ಸಾಮಾನ್ಯ. ಆದರೆ, ಈ ಬಾರಿ ಮೊದಲನೇ ದಿನವೇ ಸದಸ್ಯರ ಸಂಖ್ಯೆ ಕುಗ್ಗಿತ್ತು.
Next Story





