ತೊಕ್ಕೊಟ್ಟು : ಗಾಂಜಾ ಸಹಿತ ವಿದ್ಯಾರ್ಥಿಗಳ ಸೆರೆ
ಮಂಗಳೂರು, ಡಿ.13: ತೊಕ್ಕೊಟ್ಟು ಸಮೀಪದ ಬಗಂಬಿಲ ಎಂಬಲ್ಲಿ ಗಾಂಜಾ ಸಹಿತ ಇಬ್ಬರು ವಿದ್ಯಾರ್ಥಿಗಳನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತರನ್ನು ಕೇರಳ ತ್ರಿಶ್ಶೂರ್‌ನ ಆದರ್ಶ್ ಜ್ಯೋತಿ (22) ಮತ್ತು ಕೊಟ್ಟಾಯಂನ ಯೋಯಲ್ ಜೋಯ್ಸ್ (22) ಎಂದು ಗುರುತಿಸಲಾಗಿದೆ. ಆದರ್ಶ್ ಬಿಡಿಎಸ್ ಮತ್ತು ಯೋಯಲ್ ನರ್ಸಿಂಗ್ ವಿದ್ಯಾರ್ಥಿಗಳು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬಗಂಬಿಲ ಪರಿಸರದಲ್ಲಿ ಇವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಿದರು. ಈ ವೇಳೆ ಸುಮಾರು 220 ಗ್ರಾಂ ತೂಕದ ಗಾಂಜಾ ಇವರ ಬಳಿ ಪತ್ತೆಯಾಗಿದೆ. ತಕ್ಷಣ ಆರೋಪಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ತನಿಖೆ ಕಾನೂನು ಕ್ರಮ ಜರಗಿಸಿದ್ದಾರೆ.
Next Story