ಯತಿ ನರಸಿಂಹಾನಂದನ ಮುಸ್ಲಿಂ ವಿರೋಧಿ ಮಾತುಗಳ ಬಗ್ಗೆ ನೆದರ್ಲ್ಯಾಂಡ್ ನಲ್ಲಿ ಗಮನಸೆಳೆದ ಲಂಡನ್ ಸ್ಟೋರಿ ಕಾರ್ಯಕರ್ತರು
ಹೇಗ್ ಪೀಸ್ ಪ್ಯಾಲೇಸ್ ಗೋಡೆಯಲ್ಲಿ ವೀಡಿಯೊ ಪ್ರದರ್ಶನ

Photo: Videograb/thewire.in
ಹೊಸದಿಲ್ಲಿ: ನೆದರ್ಲ್ಯಾಂಡ್ಸ್ ನಲ್ಲಿರುವ ಭಾರತೀಯ ಮೂಲದವರ ಸಂಸ್ಥೆ ದಿ ಲಂಡನ್ ಸ್ಟೋರಿ ಇದರ ಕಾರ್ಯಕರ್ತರು ಡಿಸೆಂಬರ್ 10ರಂದು ಹೇಗ್ ನಗರದ ಪೀಸ್ ಪ್ಯಾಲೇಸ್ ಗೋಡೆಯಲ್ಲಿ ಜುನಾ ಅಖಾರದ ಮಹಾಮಂಡಲೇಶ್ವರ್ ಆಗಿ ಇತ್ತೀಚೆಗೆ ನೇಮಕಗೊಂಡಿರುವ ವಿವಾದಾತ್ಮಕ ಧಾರ್ಮಿಕ ನಾಯಕ ಯತಿ ನರಸಿಂಹಾನಂದ ಸರಸ್ವತಿಗೆ ಸಂಬಂಧಿಸಿದಂತಹ ಕೆಲ ವೀಡಿಯೋಗಳನ್ನು ತೋರಿಸಿ ಈ ಮೂಲಕ ಭಾರತದಲ್ಲಿ ಬಲಪಂಥೀಯ ಹಿಂದು ನಾಯಕರು ನೀಡುತ್ತಿರುವ ದ್ವೇಷದ ಭಾಷಣಗಳ ಕುರಿತು ಜಗತ್ತಿನ ಗಮನ ಸೆಳೆಯುವ ಯತ್ನ ನಡೆಸಿದ್ದಾರೆ.
ಒಂದು ವೀಡಿಯೋದಲ್ಲಿ ನರಸಿಂಹಾನಂದ ಸರಸ್ವತಿಯು ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ನೀಡುವ ಭಾಷಣವಿದೆ. ನರಸಿಂಹಾನಂದ ಫೇಸ್ಬುಕ್ನಲ್ಲಿ ಅಕ್ಟೋಬರ್ 2019ರಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದು ಅದರಲ್ಲಿ ಆತ ತನಗೆ ಎಲ್ಲಾ ಮುಸ್ಲಿಮರನ್ನೂ ನಾಶಪಡಿಸಿ ಇಸ್ಲಾಂ ಅನ್ನು ಜಗತ್ತಿನಿಂದ ನಿರ್ನಾಮಗೊಳಿಸಬೇಕೆಂದಿದೆ ಎಂದು ಹೇಳುವುದು ಕೇಳಿಸುತ್ತದೆ.
ಪೀಸ್ ಪ್ಯಾಲೇಸ್ ಹೇಗ್ನ ಗೋಡೆಯಲ್ಲಿ ಬಿಂಬಿಸಲಾದ ವೀಡಿಯೋದಲ್ಲಿ ನರಸಿಂಹಾನಂದ್ನ ಶಿಷ್ಯರಲ್ಲೊಬ್ಬಾತ ಅಪ್ರಾಪ್ತ ಬಾಲಕನಿಗೆ ಥಳಿಸುತ್ತಿರುವ ವೀಡಿಯೋವೊಂದೂ ಇದೆ. ಗಾಝಿಯಾಬಾದ್ನ ಶಿವಶಕ್ತಿ ಧಾಮ್ ದಾಸ್ನ ದೇವಳಕ್ಕೆ ಪ್ರವೇಶಿಸಿದ್ದಾನೆಂಬ ಕಾರಣಕ್ಕೆ 14 ವರ್ಷದ ಮುಸ್ಲಿಂ ಬಾಲಕನಿಗೆ ಥಳಿಸಿದ ಘಟನೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನಡೆದಿತ್ತು.
ನಂತರ ಆ ದೇವಳದ ಮುಖ್ಯ ಅರ್ಚಕನಾಗಿರುವ ನರಸಿಂಹಾನಂದ ಹೇಳಿಕೆ ನೀಡಿ ಆ ಬಾಲಕ `ಜಿಹಾದಿ' ಹಾಗೂ ವಿಗ್ರಹಗಳಿಗೆ ಹಾನಿಯೆಸಗಲು ಹಾಗೂ ಹಿಂದು ಮಹಿಳೆಯರಿಗೆ ಕಿರುಕುಳ ನೀಡಲು ಆತ ದೇವಳ ಪ್ರವೇಶಿಸಿದ್ದನೆಂದು ಹೇಳಿಕೊಂಡಿದ್ದ. ಬಾಲಕನಿಗೆ ಥಳಿಸಿದ್ದ ಆರೋಪ ಎದುರಿಸಿದ್ದ ಶೃಂಗಿ ನಂದನ್ ಯಾದವ್ ಎಂಬಾತನನ್ನು ನರಸಿಂಗಾನಂದ್ ಹಲವು ಸಂದರ್ಶನಗಳಲ್ಲಿ ಶ್ಲಾಘಿಸಿದ್ದ.
Since few years #YatiNarsinghAnand has been spewing hate against Indian Muslims. We demand from @narendramodi and @AmitShah that he be arrested.#ArrestYati@cyrilsam @svaradarajan @kavita_krishnan @UNOSAPG @MaryLawlorhrds @alviinaalametsa @Mariearenaps @TheQuint @the_hindu pic.twitter.com/F9eRdUdgoG
— Foundation London Story (@FoundationTLS) December 11, 2021