ಬೆಳ್ತಂಗಡಿ: ಗ್ಯಾಸ್ ಬದಲು ಸಿಲಿಂಡರ್ ಗೆ ನೀರು ತುಂಬಿಸಿ ವಂಚನೆ; ಆರೋಪ
ಬೆಳ್ತಂಗಡಿ: ಗ್ಯಾಸ್ ಸಿಲಿಂಡರ್ ನಲ್ಲಿ ಗ್ಯಾಸ್ ಬದಲು ನೀರು ತುಂಬಿಸಿ ಗ್ರಾಹಕನಿಗೆ ನೀಡಿದ್ದಾರೆನ್ನಲಾದ ಘಟನೆ ನಾಳಗ್ರಾಮದಲ್ಲಿ ಸಂಭವಿಸಿದೆ. ನಾಳ ಗ್ರಾಮದ ನಿವಾಸಿ ಮುಹಮ್ಮದ್ ರಫೀಕ್ ಎಂಬವರು ಗ್ಯಾಸ್ ಖರೀದಿಸಿ ಅದರಲ್ಲಿ ಬೆಂಕಿ ಹಚ್ಚಲು ನೋಡಿದರೆ ಉರಿಯದೆ ಇದ್ದು ಪರಿಶೀಲಿಸಿದಾಗ ಗ್ಯಾಸ್ ಸಿಲಿಂಡರ್ ನಲ್ಲಿ ನೀರು ತುಂಬಿಕೊಂಡಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ.
ಇಂಡೇನ್ ಕಂಪೆನಿಯ ಗ್ಯಾಸ್ ಸಿಲಿಂಡರ್ ಅನ್ನು ಅವರು ಖರೀದಿಸಿದ್ದು, ಎರಡು ದಿನ ಅದನ್ನು ಉಪಯೋಗಿಸಿದ್ದಾರೆ. ಡಿ. 12ರಂದು ಬೆಳಗ್ಗೆ ಒಲೆ ಹಚ್ಚಿದರೆ ಉರಿಯದೆ ಇದ್ದಾಗ ಗ್ಯಾಸ್ ಸಿಲಿಂಡರ್ ಅನ್ನು ಹೊರತೆಗೆದು ಪರಿಶೀಲಿಸಿದಾಗ ಸಿಲಿಂಡರ್ ನಲ್ಲಿ ಗ್ಯಾಸ್ ಬದಲು ನೀರು ತುಬಿಕೊಂಡಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ.
ರಫೀಕ್ ಅವರು ಗ್ಯಾಸ್ ಏಜೆನ್ಸಿಯವರನ್ನು ಸಂಪರ್ಕಿಸಿದಾಗ ಕೂಡಲೇ ಬೇರೆ ಸಿಲಿಂಡರ್ ನೀಡುವ ಭರವಸೆ ನೀಡಿದ್ದಾರೆ. ಆದರೆ ಇನ್ನೂ ಅದು ವಿತರಣೆಯಾಗಿಲ್ಲ ಎನ್ನಲಾಗಿದೆ.
ಇದು ಕೇವಲ ರಫೀಕ್ ಅವರಿಗೆ ಆಗಿರುವ ಅನುಭವವಲ್ಲ ಇನ್ನೂ ಕೆಲವರಿಗೆ ಇದೇ ರೀತಿಯ ಅನುಭವವಾಗಿದೆ ಎನ್ನಲಾಗಿದ್ದು, ಗ್ಯಾಸ್ ಕಂಪೆನಿಯವರು ಉದ್ದೇಶ ಪೂರ್ವಕವಾಗಿ ಇದನ್ನು ಮಾಡುತ್ತಿದ್ದಾರೆಯೇ ಎಂಬ ಅನುಮಾನವನ್ನೂ ಗ್ರಾಹಕರು ವ್ಯಕ್ತಪಡಿಸುತ್ತಿದ್ದಾರೆ.





