ರಿಕ್ಷಾ ಚಾಲಕರಿಗೆ ಹಲ್ಲೆ, ಕೊಲೆ ಬೆದರಿಕೆ: ದೂರು ದಾಖಲು
ಮಂಗಳೂರು, ಡಿ.13: ನಗರದ ಪಂಪ್‌ವೆಲ್ ಸಮೀಪದ ರಿಕ್ಷಾ ಚಾಲಕರೊಬ್ಬರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಡೊಮಿನಿಕ್ ಡಿಸೋಜ ಹಲ್ಲೆಗೊಳಗಾದ ರಿಕ್ಷಾ ಚಾಲಕ. ಡಿ.11ರಂದು ರಾತ್ರಿ 9:40ಕ್ಕೆ ಡೊಮಿನಿಕ್ ಡಿಸೋಜ ಪಂಪ್‌ವೆಲ್ ವೈನ್ಸ್ ಎಂಡ್ ಸ್ಪಿರಿಟ್ ವೈನ್ಸ್‌ಶಾಪ್‌ನ ಎದುರುಗಡೆ ರಿಕ್ಷಾ ಪಾರ್ಕ್‌ನಲ್ಲಿ ಬಾಡಿಗೆಗಾಗಿ ಕ್ಯೂನಲ್ಲಿ ಕಾಯುತ್ತಿದ್ದಾಗ ಆಟೋ ರಿಕ್ಷಾ ಚಾಲಕರಾದ ಸುನೀಲ್ ಮತ್ತು ನಾಗರಾಜ್ ಬಿ. ಎಂಬವರು ಬಿಯರ್ ಬಾಟಲಿ ಹಿಡಿದುಕೊಂಡು ಬಂದು ತಡೆದು ನಿಲ್ಲಿಸಿ, ಹಲ್ಲೆ ನಡೆಸಿದ್ದಾರೆ. ಬಳಿಕ ಇಬ್ಬರೂ ಡೊಮಿನಿಕ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ರಿಕ್ಷಾವನ್ನು ಕ್ಯೂನಲ್ಲಿ ನಿಲ್ಲಿಸುವ ಬಗ್ಗೆಗಿನ ದ್ವೇಷದಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





