ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ: 16,79,860 ರೂ. ಮೌಲ್ಯದ ಚಿನ್ನ ವಶ

ಮಂಗಳೂರು, ಡಿ.13: ಶಾರ್ಜಾದಿಂದ ಮಂಗಳೂರಿಗೆ ಸೋಮವಾರ ಬಂದಿಳಿದ ವಿಮಾನದಲ್ಲಿ ಕಾಸರಗೋಡಿನ ವ್ಯಕ್ತಿಯೊಬ್ಬ ಅಕ್ರಮವಾಗಿ ಸಾಗಿಸುತ್ತಿದ್ದ 16,79,860 ರೂ.ಮೌಲ್ಯದ 24 ಕ್ಯಾರೆಟ್ ನ 338 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆರೋಪಿ ಸ್ಟೀರಿಯೋ ಕೇಬಲ್, ಬರ್ನರ್ ಸ್ಟ್ಯಾಂಡ್, ಕ್ಯಾಂಡಲ್ ಹೋಲ್ಡರ್ ಸ್ಟ್ಯಾಂಡ್ ಗಳಲ್ಲಿಟ್ಟು ಚಿನ್ನ ಸಾಗಾಟ ಮಾಡುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story





