ಶ್ವಾಸ ನೀಡುವ ಮೂಲಕ ಗಾಯಗೊಂಡ ಕೋತಿಯನ್ನು ರಕ್ಷಿಸಿದ ತಮಿಳುನಾಡಿನ ವ್ಯಕ್ತಿ: ಫೋಟೋ ವೈರಲ್

Photo credit: abplive.com
ಗಾಯಗೊಂಡಿದ್ದ ಕೋತಿಯೊಂದನ್ನು ರಕ್ಷಿಸಲು ತಮಿಳುನಾಡಿನ ಪೆರಂಬಲೂರಿನ ವ್ಯಕ್ತಿಯೊಬ್ಬರು ಪ್ರಥಮ ಚಿಕಿತ್ಸೆ ಮತ್ತು ತುರ್ತು ಸಿಪಿಆರ್ (ಶ್ವಾಸ) ಒದಗಿಸಿದ್ದು, ಘಟನೆಗೆ ಸಂಬಂಧಿಸಿದ ಫೋಟೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
ಗಾಯಗೊಂಡು ಮರದ ಮೇಲೆ ಪ್ರಜ್ಞಾಹೀನವಾಗಿ ಬಿದ್ದಿದ್ದ ಕೋತಿಯನ್ನು ಮೊದಲು ನೋಡಿದ್ದೆ ಎಂದು ವ್ಯಕ್ತಿ ಹೇಳಿದರು. ನಾಯಿಗಳು ಕೋತಿಯನ್ನು ಬೆನ್ನಟ್ಟಿ ಕಚ್ಚಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅವರು ಪ್ರಥಮಚಿಕಿತ್ಸೆ ನೀಡಿದ ಬಳಿಕ ಕೋತಿಯನ್ನು ಆಸ್ಪತ್ರೆಗೆ ದಾಖಲಿಸಿ, ಅದಕ್ಕೆ ಲಸಿಕೆ ಹಾಗೂ ಗ್ಲೂಕೋಸ್ ನೀಡಲಾಯಿತು ಎಂದು ತಿಳಿದು ಬಂದಿದೆ.
Next Story