ಮೈಸೂರು: ಮತ ವಿಂಗಡನೆ ಪೂರ್ಣ, ಎಣಿಕೆ ಕಾರ್ಯ ಆರಂಭ
ವಿಧಾನ ಪರಿಷತ್ ಚುನಾವಣೆ

ಮೈಸೂರು, ಡಿ.14: ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನಪ ರಿಷತ್ ನ ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನದ ಮತ ಎಣಿಕೆಗೆ ಸಿದ್ದತೆ ಕಾರ್ಯ ನಡೆಯತ್ತಿದ್ದು,ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳು ಸ್ಟ್ರಾಂಗ್ ರೂಮ್ ತೆರದು ಮತಪತ್ರಗಳ ವಿಂಗಡನೆಯಲ್ಲಿ ತೊಡಗಿದ್ದಾರೆ.
ನಗರದ ಪಡುವಾರಹಳ್ಳಿಯಲ್ಲಿರುವ ಮಹರಾಣಿ ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಉಪಸ್ಥಿತಿಯಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಯಿತು. ಈ ವೇಳೆ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋನಮ್ ಕೂಡ ಉಪಸ್ಥಿತರಿದ್ದರು.
ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಉಪಸ್ಥಿತರಿದ್ದು, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಏಜೆಂಟರುಗಳು ಉಪಸ್ಥಿತರಿದ್ದರು.
ಬೂತ್ ಬಾಕ್ಸ್ ಗಳನ್ನು ತೆರವುಗೊಳಿಸಿ 25 ಮತಗಳಾಗಿ ವಿಂಗಡಿಸಿ ಒಟ್ಟು 271 ಬಂಡಲ್ ಗಳನ್ನು ಮಾಡಲಾಗುತ್ತಿದೆ. ತದನಂತರ 14 ಟೇಬಲ್ ಗಳಲ್ಲಿ ಎಣಿಕೆ ಕಾರ್ಯ ಆರಂಭವಾಗಲಿದೆ. ಚುನಾವಣಾ ವೀಕ್ಷಕ ಅಜಯ್ ನಾಗಭೂಷಣ್ ಸ್ಥಳದಲ್ಲಿದ್ದು ಎಲ್ಲಾ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ದ್ವಿಸದಸ್ಯ ಸ್ಥಾನವಾಗಿರುವುದರಿಂದ ಪ್ರಾಶಸ್ತ್ಯದ ಮತಗಳನ್ನು ಆಯ್ಕೆ ಮಾಡಿಕೊಳ್ಳಬೇಕಿರುವುದರಿಂದ ಎಲ್ಲ ಮತಗಳನ್ನು ಪ್ರತ್ಯೇಕ ಗೊಳಿಸಿ ನಂತರ ಸುಮಾರು 11:30ರ ಸುಮಾರಿಗೆ ಮತಗಳ ಎಣಿಕೆ ಕಾರ್ಯ ನಡೆಯಬಹುದು ಎಂದು ಹೇಳಲಾಗುತ್ತಿದೆ.
ಸ್ಥಳೀಯಸಂಸ್ಥೆಗಳಿಂದ ವಿಧಾನಪರಿಷತ ಗೆ ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನಕ್ಕೆ ಡಿ.10ರಂದು ಮತದಾನ ನಡೆದಿತ್ತು. ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು 393 ಮತಕೇಂದ್ರಗಳಲ್ಲಿ ಮತದಾನ ನಡೆದಿತ್ತು. ಎರಡೂ ಜಿಲ್ಲೆಗಳಲ್ಲಿ ಒಟ್ಟು 6787 ಮತದಾರರಿದ್ದು, 6769 ಮತದಾನ ನಡೆದು ಶೇ.99.73 ರಷ್ಟು ಮತದಾನವಾಗಿತ್ತು.








