ವಿವಾಹ ಸಮಾರಂಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ನವ ದಂಪತಿ, ವೀಡಿಯೊ ವೈರಲ್

ಹೊಸದಿಲ್ಲಿ: ದಿಲ್ಲಿ ಸಮೀಪದ ಘಾಝಿಯಾಬಾದ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ನವ ದಂಪತಿ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.
ವರನು ಎರಡು ಗುಂಡು ಸುತ್ತು ಹಾರಿಸುತ್ತಿದ್ದಾಗ ವಧು ನಗುತ್ತಾಪೋಸ್ ನೀಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ದಿಲ್ಲಿ ಸಮೀಪದ ಘಾಝಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ಉತ್ತರ ಭಾರತದ ಕೆಲವು ಭಾಗಗಳಲ್ಲಿ ಸಂಭ್ರಮಾಚರಣೆಯ ಗುಂಡು ಹಾರಿಸುವುದು ಸರ್ವೇ ಸಾಮಾನ್ಯವಾಗಿದೆ. ಆದರೂ ಆಗಾಗ್ಗೆ ಸಾವುನೋವುಗಳು ಮತ್ತು ಪೊಲೀಸ್ ಕ್ರಮಗಳು ಸಂಭವಿಸಿವೆ.
शादी के जोश में खोया होश,दूल्हा दुल्हन पर कानूनी कार्रवाई की तैयारी,ग़ाज़ियाबाद के घंटाघर का मामला pic.twitter.com/aTeoI2xcZD
— Mukesh singh sengar मुकेश सिंह सेंगर (@mukeshmukeshs) December 14, 2021
Next Story







