Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೊಟ್ಟೆ ಮತ್ತು ಮಠ: ಇದೆಂತಹ ರಾಜಕೀಯ?

ಮೊಟ್ಟೆ ಮತ್ತು ಮಠ: ಇದೆಂತಹ ರಾಜಕೀಯ?

ಹಳ್ಳಿ ವೆಂಕಟೇಶ್ಹಳ್ಳಿ ವೆಂಕಟೇಶ್14 Dec 2021 2:44 PM IST
share
ಮೊಟ್ಟೆ ಮತ್ತು ಮಠ: ಇದೆಂತಹ ರಾಜಕೀಯ?

ಮೊಟ್ಟೆಯನ್ನು ಮುಂದಿಟ್ಟುಕೊಂಡು ಅಸಮಾನತೆ ಬೀಜಬಿತ್ತುವ ತಂತ್ರಗಾರಿಕೆಯನ್ನು ಮಠಗಳು ನಿಲ್ಲಿಸಲಿ. ಜನರ ತೆರಿಗೆಯ ಹಣದಲ್ಲಿ ನಡೆಯುವ ಮಠಗಳಿಗೆ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ನಡೆಸುವ ಔದಾರ್ಯ ಬರಲಿ. ಜನಸೇವೆ ಮತ್ತು ಧರ್ಮರಕ್ಷಣೆಯ ಹೆಸರಲ್ಲಿ ಹಣಕ್ಕಾಗಿಯೇ ಸ್ವಾಮಿಗಳು ಕಟ್ಟಿಕೊಂಡಿರುವ ಮಠಗಳು ಈಗ ರಾಜಕೀಯ ನಡೆಯುವ ಶಾಸನ ಭವನಗಳಾಗುತ್ತಿವೆ. ಇದು ಬದಲಾಗಬೇಕು. ಮೊಟ್ಟೆಯ ಮೇಲಿನ ರಾಜಕೀಯ ನಿಲ್ಲಬೇಕು.

ಆಹಾರ ಎಲ್ಲರ ಹಕ್ಕು ಅದನ್ನು ಕಸಿದುಕೊಳ್ಳುವವರ ಸ್ವಾರ್ಥ ರಾಜಕೀಯಕ್ಕೆ ಧಿಕ್ಕಾರ. ಈಗ ಮಕ್ಕಳ ಮೊಟ್ಟೆಯ ಮೇಲೆ ಖಾವಿ ಬಣ್ಣಗಳು ಬಣಗುಡುತ್ತಿವೆ. ಸಮಾನತೆಯ ಧನಿಯೊಳಗೆ ಅಸಮಾನತೆ ಇಣುಕುತ್ತಿದೆ.

ಮನುಷ್ಯ ಆದಿಯಲ್ಲಿ ಅರಣ್ಯಜೀವಿ, ಅವನು ಬದುಕಲು ಹಲವಾರು ಆಹಾರಗಳನ್ನು ಶೋಧಿಸಿ ತಿಂದು ಅವುಗಳ ರುಚಿಯನ್ನು ಮತ್ತು ಅದರೊಳಗಿನ ಪೌಷ್ಟಿಕಾಂಶಗಳನ್ನು ಕಂಡುಕೊಂಡು ಮುಂದಿನ ತಲೆಮಾರುಗಳಿಗೆ ತಲುಪಿಸುತ್ತಾ ಬಂದಿದ್ದಾನೆ. ಗೆಡ್ಡೆ ಗೆಣಸು, ಸೊಪ್ಪುಸೆದೆ, ಹಣ್ಣು ಹಂಪಲು, ಹಸಿ ಮಾಂಸ, ಹೀಗೆ ಆರಂಭವಾದ ಅವನ ಆಹಾರ ಶೋಧನೆ ಇಂದಿಗೂ ನಿಂತಿಲ್ಲ. ಬಗೆಬಗೆಯ ರುಚಿಯ ಹುಡುಕಾಟದಲ್ಲಿ ಶಕ್ತಿಯುತ ಆಹಾರಗಳನ್ನು ಮರೆಯದೆ ತಿನ್ನುತ್ತಾನೆ. ಅದರಲ್ಲಿ ಮೊಟ್ಟೆಯೂ ಅವನ ಅತ್ಯುತ್ತಮ ಆಹಾರ. ಆಹಾರ ಪದ್ಧತಿಗೆ ಮನುಷ್ಯನಷ್ಟೇ ಪ್ರಾಚೀನ ಇತಿಹಾಸವಿದೆ. ಅದನ್ನು ದೇವರು ಧರ್ಮದ ಹೆಸರಲ್ಲಿ ತಿರುಚುವ ವ್ಯಕ್ತಿಗಳಿಗೆ ಅದೊಂದು ಸೋಗಲಾಡಿತನದ ರಾಜಕೀಯವೇ ಹೊರತು ಬೇರೇನು ಅಲ್ಲ!

ಭಾರತೀಯ ಸಂವಿಧಾನದಲ್ಲಿ ಯಾವ ವ್ಯಕ್ತಿಯ ಆಹಾರ ಪದ್ಧತಿಗಳನ್ನೂ ಹತ್ತಿಕ್ಕುವಂತಿಲ್ಲ ಎಂದು ಹೇಳಿದ್ದರೂ, ಆಹಾರದ ಮೇಲೆ ಭಕ್ತಿ ಮತ್ತು ಬ್ರಾಹ್ಮಣ್ಯದ ಹೆಸರಲ್ಲಿ ನಿರಂತರವಾದ ದಬ್ಬಾಳಿಕೆ ನಡೆಯುತ್ತಲೇ ಇದೆ. ಗೋವಿನ ಹೆಸರಲ್ಲೇ ಅಮಾಯಕರ ಮೇಲೆ ನಿರಂತರ ದಾಳಿಗಳಾಗಿವೆ. ಈಗ ಕರ್ನಾಟಕದಲ್ಲಿ ಮಠಗಳು ಶಾಲೆಯ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿ ರಾಜಕೀಯವನ್ನು ನಡೆಸುತ್ತಿವೆ. ಧರ್ಮವನ್ನು ಬೆರೆಸಿಕೊಂಡು ಸರಕಾರಿ ಶಾಲೆಯ ಮಕ್ಕಳ ಆಹಾರವನ್ನು ಕಿತ್ತುಕೊಳ್ಳುವ ಹುನ್ನಾರವನ್ನು ನಡೆಸುತ್ತಿವೆ.

ಸರಕಾರಿ ಶಾಲೆಗಳೆಂದರೆ ಮೂಗುಮುರಿಯುವ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸಾವಿರಾರು ರೂಪಾಯಿ ತೆತ್ತು ಸೇರಿಸಿ ಓದಿಸುತ್ತಾರೆ. ಬಡವರಿಗೆ ಈ ಆರ್ಥಿಕ ಚೈತನ್ಯ ಇಲ್ಲ. ತಮ್ಮ ಮಕ್ಕಳ ವಿದ್ಯಾಭ್ಯಾಸವಾದರೆ ಸಾಕು ಎಂದು ಸರಕಾರಿ ಶಾಲೆಗಳನ್ನು ನಂಬಿ ಹೋಗುತ್ತಾರೆ. ಸರಕಾರಗಳು ಈ ಮಕ್ಕಳ ವಿದ್ಯಾಭ್ಯಾಸವನ್ನು ಸದೃಢಗೊಳಿಸುವ ನಿಟ್ಟಿನ ಪ್ರಯತ್ನವಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆ, ಹಾಲು, ಹಣ್ಣು ನೀಡುತ್ತಾ ಬಂದಿದೆ. ಕರ್ನಾಟಕದ ಬಹುಪಾಲು ಸರಕಾರಿ ಶಾಲೆಯ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವುದನ್ನು ಗಮನಿಸಿ ಸರಕಾರ ಮಕ್ಕಳಿಗೆ ದಿನಕ್ಕೆ ಒಂದು ಮೊಟ್ಟೆ ಕೊಡುವ ನಿಯಮವನ್ನು ಪಾಲಿಸಲು ಮುಂದಾಗುತ್ತಿದ್ದಂತೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮೊಟ್ಟೆಯ ಯೋಜನೆಯನ್ನು ವಿರೋಧಿಸಲು ಪ್ರಾರಂಭಿಸಿವೆ.

ಶಾಲೆಯಲ್ಲಿ ಮೊಟ್ಟೆ ನೀಡುವ ಯೋಜನೆಯನ್ನು ವಿರೋಧಿಸುತ್ತಿರುವ ಯಾವುದೇ ಪೋಷಕನಾಗಿರಲಿ ಅಥವಾ ಮೇಲ್ವರ್ಗದ ಮನುಷ್ಯನಾಗಿರಲಿ, ಇಲ್ಲ ರಾಜಕೀಯ ನಾಯಕನಾಗಿರಲಿ ಇವರ ಮಕ್ಕಳು ಓದುತ್ತಿರುವುದು ಸರಕಾರಿ ಶಾಲೆಗಳಲ್ಲಿ ಅಲ್ಲ ಎಂಬುದನ್ನು ನಾವು ಮನಗಾಣಬೇಕು. ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲೋ ಅಥವಾ ವಿದೇಶಿ ಶಾಲೆಗಳಲ್ಲೋ ಓದಿಸುತ್ತಿರುವ ಇವರಿಗೆ ಬಡಮಕ್ಕಳ ಆಹಾರವನ್ನು ಕಿತ್ತುಕೊಳ್ಳುವ ನೈತಿಕತೆ ಇದೆಯೇ?. ಸರಕಾರಿ ಶಾಲೆ ಸದಾ ಸಮಾನತೆಯ ಕಡೆ ಮುಖಮಾಡಬೇಕೆಂಬುದು ಬಹುಜನರ ಆಶಯ. ಅಲ್ಲಿಗೂ ಜಾತಿ ಧರ್ಮದ ಹೊಲಸು ತಂದು ಸುರಿಯುವ ಪ್ರಯತ್ನಮಾಡಲಾಗುತ್ತಿದೆ.

ಈಗಲೂ ಮೊಟ್ಟೆ ವಿರೋಧಿಸುವ ಎಷ್ಟೋ ಜನ ಕದ್ದುಮುಚ್ಚಿ ಮೊಟ್ಟೆಯಿಂದ ತಯಾರಾದ ಉತ್ಪನ್ನಗಳನ್ನು ತಿನ್ನುತ್ತಿದ್ದಾರೆ. ಬಹುಪಾಲು ಬೇಕರಿ ತಿಂಡಿತಿನಿಸುಗಳಿಗೆ ಮೊಟ್ಟೆಯನ್ನು ಬಳಸುತ್ತಾರೆ. ಅದನ್ನು ತಿನ್ನುವ ಇವರಿಗೆ ಮೊಟ್ಟೆ ಮಾಂಸಾಹಾರಿ ಎಂಬುದು ನೆನಪಾಗುವುದಿಲ್ಲ. ಶಾಲಾ ಮಕ್ಕಳಿಗೆ ನೀಡಿದರೆ ಅದು ಹೇಗೆ ಧರ್ಮದ ಸೋಗು ಹಾಕಿಕೊಳ್ಳುತ್ತದೆ ವಿರೋಧಿಗಳೇ ವಿವರಿಸಬೇಕು. ತಮಗನಿಸಿದ್ದನ್ನು ನಾವು ತಿನ್ನಬೇಕು. ಅದನ್ನು ವಿರೋಧಿಸುವುದು, ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆಹಾರದ ಹಕ್ಕಿನ ಮೇಲೆ ದಬ್ಬಾಳಿಕೆ ನಡೆಸುವುದು ಮೂರ್ಖತನದ ಪರಮಾವಧಿ.

 ಖಾಸಗಿ ಶಾಲೆಗಳ ದಾಳಿಯಿಂದ ಸರಕಾರಿ ಶಾಲೆಗಳು ಬೀಗಮುದ್ರೆಗೆ ಒಳಗಾಗುತ್ತಿವೆ. ಉದ್ಯೋಗಗಳು ಮರೀಚಿಕೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಆಹಾರದ ಹಕ್ಕಿನ ಮೇಲೆ ತಮ್ಮ ಕೆಂಗಣ್ಣುಗಳನ್ನು ಬೀರಿರುವ ಮಠಗಳಿಗೆ ಸರಕಾರಿ ಶಾಲೆಯನ್ನು ಸಂಪೂರ್ಣ ಮುಚ್ಚಿಸಿ, ತಮ್ಮ ಒಡೆತನದ ಖಾಸಗಿ ಶಾಲೆಗಳನ್ನು ಹೆಚ್ಚು ಮಾಡಿಕೊಳ್ಳುವ ಯೋಜನೆಯು ಮೆದುಳಲ್ಲಿ ಓಡುತ್ತಿರಬಹುದು ಕರ್ನಾಟಕದ ಕೆಲವು ಮಠಗಳನ್ನು ಹೊರತುಪಡಿಸಿದರೆ ಉಳಿದ ಮಠಗಳು ಸೇವಾ ಮನೋಭಾವದಿಂದ ಹೊರಬಂದು ಹಣದ ಬೆನ್ನು ಬಿದ್ದಿವೆ. ಧರ್ಮ ಮತ್ತು ಜಾತಿಯ ಹೆಸರಲ್ಲಿ ರಾಜಕೀಯ ಪಕ್ಷಗಳ ಬೆನ್ನುಚಪ್ಪರಿಸುತ್ತಾ ತಮ್ಮ ಸ್ವಾರ್ಥಸಾಧನೆಗೆ ಮುಂದಾಗಿವೆ. ಇದು ಬುದ್ಧಿವಂತ ಜನರಿಗೆ ಅರ್ಥವಾದರೂ ಅದರ ವಿರುದ್ಧ ಧ್ವನಿ ಎತ್ತುವ ಧೈರ್ಯ ತೋರುತ್ತಿಲ್ಲ. ಆದರೆ ಈಗ ಧ್ವನಿ ಎತ್ತದಿದ್ದರೆ ನಿಮ್ಮ ತಟ್ಟೆಯ ಆಹಾರಕ್ಕೂ ನಾಳೆ ಕಲ್ಲು ಬೀಳಬಹುದು ಎಚ್ಚರಿಕೆ!

ಸರಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ ಯೋಜನೆ ಜಾರಿಗೆ ಬಂದಾಗ ಗೈರುಹಾಜರಾಗುತ್ತಿದ್ದ ಮಕ್ಕಳು ಮರಳಿ ಶಾಲೆಗೆ ಬಂದರು. ಹಸಿವಿನ ಕಾರಣಕ್ಕಾಗಿ ಎಷ್ಟೋ ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸ ಮಾಡಲು ಹೋಗುತ್ತಿದ್ದ ಕಾಲವೂ ಇತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಇಂತಹ ಘಟನೆಗಳು ನಡೆಯುತ್ತಿವೆ. ಸರಕಾರ ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕರೆತರಲು ಅನೇಕ ಯೋಜನೆಗಳನ್ನು ತಂದರೂ, ಯಶಸ್ಸಿನ ಮೆಟ್ಟಿಲು ಏರಲಾಗುತ್ತಿಲ್ಲ. ಯಾವುದೋ ಕಾಣದ ಕೈಗಳ ಹಿಡಿತದಲ್ಲಿ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಸರಕಾರ ತಲುಪಿಸುವ ಪುಸ್ತಕಗಳು ಪಟ್ಟಣದ ಯಾವುದೋ ಪುಸ್ತಕಮಳಿಗೆಯಲ್ಲಿ ಗುಟ್ಟಾಗಿ ಮಾರಾಟವಾಗುತ್ತವೆ. ಸಮವಸ್ತ್ರಗಳು ಒಂದು ವರ್ಷ ಬಾಳಿಕೆ ಬರುವುದರಲ್ಲೇ ತಮ್ಮ ಆಯಷ್ಯ ಕಳೆದುಕೊಳ್ಳುತ್ತವೆ. ಬಿಸಿಯೂಟ ಯೋಜನೆಗೆ ಬರುವ ಹಣ ಮತ್ತು ಆಹಾರ ಧಾನ್ಯದಲ್ಲೂ ಕನ್ನ ಹಾಕುವವರು ಇರುವಾಗ ಮಕ್ಕಳ ಜೀವನವನ್ನು ಹಸನುಗೊಳಿಸುವವರು ಯಾರು? ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಂಡು ಸುಮ್ಮನಾಗಬೇಕಿದೆ.

  ಬಡವರ ಆಹಾರ ಪದ್ಧತಿ ಮತ್ತು ಸರಕಾರಿ ಶಾಲೆಯ ಮಕ್ಕಳ ಆಹಾರ ವಿಷಯ ಬಂದಾಗೆಲ್ಲ ಈ ಮಠಗಳು ದೇವರು ಮತ್ತು ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸಲು ಪ್ರಾರಂಭಿಸುತ್ತಾರೆ. ಸರಕಾರಿ ಶಾಲೆಯ ಮಕ್ಕಳು ‘‘ನಾವೇ ನಿಮ್ಮ ಮಠಕ್ಕೆ ಬಂದು ಸಾಮೂಹಿಕವಾಗಿ ಮೊಟ್ಟೆ ತಿಂದು ಬರುತ್ತೇವೆ. ನಮಗೆ ನೀಡುವ ಮೊಟ್ಟೆಯನ್ನು ನೀವ್ಯಾಕೆ ವಿರೋಧಿಸುತ್ತೀರಿ’’ ಎಂಬ ಬಹಿರಂಗ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದರಲ್ಲಿ ರಾಜಕಾರಣ ಮಾಡಲು ಹೋದರೆ ಅವರ ಪೋಷಕರೇ ಬೀದಿಗಿಳಿದು ಪ್ರತಿಭಟಿಸುವ ಸಂದರ್ಭ ಬಂದರೂ ಬರಬಹುದು.

ಮಠಗಳಿಗೆ ಕೇವಲ ಸಸ್ಯಾಹಾರಿಗಳು ಮಾತ್ರ ದೇಣಿಗೆ ನೀಡುವುದಿಲ್ಲ ಮಾಂಸಾಹಾರಿಗಳೂ ನೀಡುತ್ತಾರೆ. ಅವರು ನೀಡುವ ಕಾಣಿಕೆಗಳನ್ನು ಮಠಗಳ ಮಂದಿ ತಿರಸ್ಕರಿಸುತ್ತಾರೆಯೇ?. ಹಾಗಾದರೆ ಅವರ ಆಹಾರ ಪದ್ಧತಿಗಳ ಮೇಲೆ ವಕ್ರದೃಷ್ಟಿಯೇಕೆ?. ಅವರ ಆಹಾರ ಪದ್ಧತಿಗಳನ್ನು ಈ ನೆಲದ ಶೂದ್ರರು ಎಂದೂ ಪ್ರಶ್ನಿಸಿಲ್ಲ. ಆದರೆ ಶೂದ್ರರ ಮೂಲ ಆಹಾರ ಪದ್ಧತಿಯನ್ನೇ ಮಠಗಳ ಮಂದಿ ಹತ್ತಿಕ್ಕುವುದು ಸರಿಯೇ?

ತಿನ್ನುವ ಆಹಾರಕ್ಕೆ ಪ್ರತಿಭಟನೆ ಮತ್ತು ಕಾನೂನುಗಳು ರೂಪುಗೊಳ್ಳುತ್ತಿರುವುದು ನಮ್ಮ ಭಾರತದಲ್ಲೇ ಇರಬೇಕು. ಪ್ರಪಂಚದ ಯಾವ ಮೂಲೆಯಲ್ಲೂ ಮನುಷ್ಯನ ಆಹಾರದ ಮೇಲೆ ಕಾನೂನು ರೂಪುಗೊಂಡಿದ್ದು ಕಡಿಮೆ. ಭಾರತದಲ್ಲಿ ಮೂಲನಿವಾಸಿಗಳಿಗಿರುವ ಹಕ್ಕನ್ನು ಕಸಿದುಕೊಳ್ಳುತ್ತಲೇ ಬಂದಿರುವ ಅನಿವಾಸಿ ಮೇಲ್ವರ್ಗದವರು, ದೇವರು ಧರ್ಮವನ್ನು ಗುತ್ತಿಗೆ ಹಿಡಿದುಕೊಂಡಿರುವ ಮಠಗಳು ಆಹಾರದ ಮೇಲೂ ಗುತ್ತಿಗೆ ಸ್ಥಾಪಿಸಲು ಒಳಸಂಚು ನಡೆಸುತ್ತಿವೆ. ಈ ಸಂಚಿಗೆ ಗೋಮಾಂಸ ಸೇರಿಯಾಯಿತು. ಈಗ ಶಾಲಾ ಮಕ್ಕಳ ಮೊಟ್ಟೆಯ ಸರದಿ. ಮುಂದೆ ಕುರಿ, ಕೋಳಿ, ಮೇಕೆ, ಮೀನುಗಳ ಮೇಲೂ ದೇವರ ಹೆಸರು ಬಂದು ಅವುಗಳ ನಿಷೇಧಕ್ಕೂ ಪ್ರತಿಭಟನೆಗಳು ನಡೆಯಬಹುದು.

ಸಮಾನತೆಯ ಪ್ರಶ್ನೆಯನ್ನು ಇಟ್ಟುಕೊಂಡು ಮೊಟ್ಟೆಯನ್ನು ವಿರೋಧಿಸುವ ಮಠಗಳು ಎಷ್ಟು ಜನ ದಲಿತರಿಗೆ, ಶೂದ್ರರಿಗೆ ತಮ್ಮ ಮಠಗಳಲ್ಲಿ ಉದ್ಯೋಗ ನೀಡಿವೆ? ತಮ್ಮ ಮಠಗಳ ಮಠಾಧಿಪತಿ ಮಾಡಲು ಪಣ ತೊಟ್ಟಿದ್ದಾರೆ ಅಥವಾ ಎಷ್ಟು ದೇವಸ್ಥಾನಗಳಿಗೆ ಅರ್ಚಕರಾಗಿ ನೇಮಿಸಿದ್ದಾರೆ?. ಶೂದ್ರರು ಬಂದರೆ ನಮ್ಮ ದೇವಸ್ಥಾನಗಳು ಅಪವಿತ್ರವಾದವು ಎಂದು ದಂಡವಿಧಿಸುವ ಅನಿಷ್ಠ ಪದ್ಧತಿ ಈಗಲೂ ಜಾರಿಯಲ್ಲಿದೆ. ಇಂತಹದ್ದನ್ನು ಯಾಕೆ ಮಠಾಧಿಪತಿಗಳು ಪ್ರತಿಭಟಿಸುವುದಿಲ್ಲ?

ಸಸ್ಯಾಹಾರಿಗಳು ತಿನ್ನುವ ಬಹುಪಾಲು ಆಹಾರಗಳನ್ನು ಬೆಳೆಯುವವರು ಮಾಂಸಾಹಾರಿಗಳು. ಅವರು ಬಿತ್ತಿದ ಬೀಜದಿಂದಲೇ ಸಸ್ಯಾಹಾರಿಗಳ ಆಹಾರಗಳು ತಯಾರಾಗುವುದು. ಅವರು ಬೆಳೆದ ಆಹಾರವನ್ನು ತಿನ್ನುವುದಿಲ್ಲವೆಂದು ಇಂದಿನಿಂದಲೇ ಶಪಥ ಮಾಡಿಬಿಡಿ. ನಾವು ಮಾಂಸಾಹಾರಕ್ಕೆ ತಿಲಾಂಜಲಿ ಹಾಡುತ್ತೇವೆ. ಆದರೆ ಇದು ನಿಮಗೆ ಸಾಧ್ಯವಿಲ್ಲ ಎಂಬುದು ಜಗತ್ತಿಗೆ ಗೊತ್ತು.

ಆಹಾರ ಮಾನವನ ದೇಹಕ್ಕೆ ಅನಿವಾರ್ಯವಾಗಿ ಬೇಕಾದ ಇಂಧನ. ಇದು ಗಾಳಿ, ನೀರಿನಷ್ಟೇ ಮುಖ್ಯವಾದುದು. ಅದನ್ನು ಅವನು ದೇವರ ಪ್ರಸಾದವೆಂದೇ ಸ್ವೀಕರಿಸುತ್ತಾನೆ. ಅದು ಮಾಂಸಾಹಾರವಾಗಿರಲಿ, ಸಸ್ಯಾಹಾರವಾಗಿರಲಿ ಎರಡರ ಮೇಲೂ ಅವನಿಗೆ ಪ್ರೀತಿ ಇದೆ. ಅವನಿಗೆ ಇಷ್ಟ ಬಂದಾಗ ಇಷ್ಟವಾದುದನ್ನು ತಿನ್ನುತ್ತಾನೆ. ಹಾಗಂತ ನೀನು ಇದನ್ನೇ ತಿನ್ನಬೇಕೆಂದು ಹೇಳುವ ಹಕ್ಕು ಯಾರಿಗೂ ಇಲ್ಲ. ತಿನ್ನುವುದನ್ನು ಕಿತ್ತುಕೊಳ್ಳುವುದು ನ್ಯಾಯವಲ್ಲ. ಮೊಟ್ಟೆ ಹಲವು ವಿಟಮಿನ್‌ಗಳ ಆಗರ. ಅದನ್ನು ಮಕ್ಕಳು ತಿಂದರೆ ಭಾರತದ ಭವಿಷ್ಯದ ಪ್ರಜೆಗಳು ಜ್ಞಾನಿಗಳು ಆಗುತ್ತಾರೆ. ಸದೃಢರಾಗಿಯೂ ಬೆಳೆಯುತ್ತಾರೆ. ಮೊಟ್ಟೆಯನ್ನು ಮುಂದಿಟ್ಟುಕೊಂಡು ಅಸಮಾನತೆ ಬೀಜಬಿತ್ತುವ ತಂತ್ರಗಾರಿಕೆಯನ್ನು ಮಠಗಳು ನಿಲ್ಲಿಸಲಿ. ಜನರ ತೆರಿಗೆಯ ಹಣದಲ್ಲಿ ನಡೆಯುವ ಮಠಗಳಿಗೆ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ನಡೆಸುವ ಔದಾರ್ಯ ಬರಲಿ. ಜನಸೇವೆ ಮತ್ತು ಧರ್ಮರಕ್ಷಣೆಯ ಹೆಸರಲ್ಲಿ ಹಣಕ್ಕಾಗಿಯೇ ಸ್ವಾಮಿಗಳು ಕಟ್ಟಿಕೊಂಡಿರುವ ಮಠಗಳು ಈಗ ರಾಜಕೀಯ ನಡೆಯುವ ಶಾಸನ ಭವನಗಳಾಗುತ್ತಿವೆ. ಇದು ಬದಲಾಗಬೇಕು. ಮೊಟ್ಟೆಯ ಮೇಲಿನ ರಾಜಕೀಯ ನಿಲ್ಲಬೇಕು.

share
ಹಳ್ಳಿ ವೆಂಕಟೇಶ್
ಹಳ್ಳಿ ವೆಂಕಟೇಶ್
Next Story
X