ಕಾರ್ಕಳ ನಗರ ಪೊಲೀಸ್ ಠಾಣೆಗೆ ಬ್ಯಾರಿಕೆಡ್ ಹಸ್ತಾಂತರ

ಕಾರ್ಕಳ: ಯೂಥ್ ಫಾರ್ ಸೇವಾ ವತಿಯಿಂದ ಕಾರ್ಲ ಸೂಪರ್ ಮಾರ್ಕೆಟ್ ಇವರ ಸಹಕಾರದಿಂದ ಭವಾನಿ ಮಿಲ್ ಸರ್ಕಲ್ ಬಳಿ 2 ಬ್ಯಾರಿಕೆಡ್ ಅನ್ನು ಕಾರ್ಕಳ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ದಾನಿಗಳಾದ ಉದ್ಯಮಿ ದೀಕ್ಷಿತ್ ಜೈನ್, ಅಭಿನಂದನ್ ಜೈನ್ ಹಾಗೂ ಯೂಥ್ ಫಾರ್ ಸೇವಾ ತಂಡದ ರಮಿತಾ ಶೈಲೇಂದ್ರ, ಗಣೇಶ್ ಸಾಲಿಯನ್ ಮತ್ತು ಕಾರ್ಕಳ ನಗರ ಠಾಣಾ ತನಿಖಾ ಪಿಎಸ್ಐ ಆಗಿರುವ ದಾಮೋದರ್, ಪ್ರೊಬೇಷನರಿ ಪಿಎಸ್ಸೈ ಪ್ರತಾಪ್, ಠಾಣಾ ಸಿಬ್ಬಂದಿಗಳಾಗಿರುವ ಎಎಸ್ಸೈ ರಾಜೇಶ್, ದಿನಕರ್, ಹೆಡ್ ಕಾನ್ಸ್ಟೇಬಲ್ ಆನಂದ್,ಪುರಸಭಾ ಸದಸ್ಯೆ ಮೀನಾಕ್ಷಿ ಗಂಗಾಧರ್, ರಾಮಪ್ಪ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಹರೀಶ್ ಶೆಟ್ಟಿ, ಪ್ರಾಧ್ಯಾಪಕರಾಗಿರುವ ಸುಧಾಕರ್ ಅವರು ಉಪಸ್ಥಿತರಿದ್ದರು.
Next Story





