ಐದು ಕೆರೆ ತುಂಬಿಸಲು ಕ್ರಮ: ಸಚಿವ ಗೋವಿಂದ ಕಾರಜೋಳ

ಬೆಳಗಾವಿ, ಡಿ. 14: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುಮೋದಿತ ಯೋಜನಾ ವರದಿ ಅನ್ವಯ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಯಾವುದೇ ಕೆರೆಗಳನ್ನು ತುಂಬಿಸಲು ಉದ್ದೇಶಿಸಿಲ್ಲ. ಆದರೆ, ಫೀಡರ್ ಕಾಲುವೆ ಮುಖಾಂತರ ಆ ಹೋಬಳಿಯ ಐದು ಕೆರೆಗಳನ್ನು ತುಂಬಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ವೀರಭದ್ರಯ್ಯ ಎಂ.ವಿ. ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಏತ ನೀರಾವರಿ ಮೂಲಕ ದೊಡ್ಡೇರಿ ಹೋಬಳಿ ಕೆರೆಗಳನ್ನು ತುಂಬಿಸಲು ಸದಸ್ಯರು ಆಗ್ರಹಿಸುತ್ತಿದ್ದು, ಅದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಆರಂಭಕ್ಕೆ ಮಾತನಾಡಿದ ವೀರಭದ್ರಯ್ಯ, ದೊಡ್ಡೇರಿ ಹೋಬಳಿ ನನ್ನ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹೋಬಳಿ. 9 ಪಂಚಾಯ್ತಿಗಳು ಬರಲಿದ್ದು, ಒಟ್ಟು 75 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದ್ದು, ಕೆರೆ ತುಂಬಿಸಿದರೆ, ಅವರಿಗೆ ಅನುಕೂಲ ಆಗಲಿದೆ ಎಂದು ಕೋರಿದರು.
Next Story





