ಜ.ನಾ.ತೇಜಶ್ರೀ ಅವರಿಗೆ ಪುತಿನ ಪುರಸ್ಕಾರ

ಬೆಂಗಳೂರು, ಡಿ.14: ಡಾ.ಪು.ತಿ. ನರಸಿಂಹಾಚಾರ್ ಟ್ರಸ್ಟ್ ಕೊಡಮಾಡುವ 2020-21ನೇ ಸಾಲಿನ ಪ್ರತಿಷ್ಠಿತ ಪು.ತಿ.ನ ಕಾವ್ಯ–ನಾಟಕ ಪುರಸ್ಕಾರಕ್ಕೆ ಲೇಖಕಿ, ಕವಿ ಜ.ನಾ.ತೇಜಶ್ರೀ ಅವರ ಯಕ್ಷಿಣಿ ಕನ್ನಡಿ ಕೃತಿ ಆಯ್ಕೆಯಾಗಿದೆ.
ಈ ಪುರಸ್ಕಾರವು 25 ಸಾವಿರ ರೂ. ನಗದು ಮತ್ತು ಫಲಕವನ್ನು ಒಳಗೊಂಡಿದೆ. ಡಿ.26ರಂದು ಬೆಳಗ್ಗೆ 10.30ಕ್ಕೆ ವರ್ಚುವಲ್ ಮಾದರಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಟ್ರಸ್ಟ್ ಹಮ್ಮಿಕೊಂಡಿದೆ. ಟ್ರಸ್ಟ್‍ನ ಅಧ್ಯಕ್ಷ ಹಾಗೂ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪುರಸ್ಕøತರ ಕುರಿತು ಗಿರೀಶ್ ರಾವ್ ಹತ್ವಾರ್ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





