ಟ್ವೆಂಟಿ-20 ನಾಯಕತ್ವ ಬಿಡಬೇಡಿ ಎಂದು ಬಿಸಿಸಿಐ ಹೇಳಿರಲಿಲ್ಲ: ವಿರಾಟ್ ಕೊಹ್ಲಿ
ಹೊಸದಿಲ್ಲಿ: ರಾಷ್ಟ್ರೀಯ ತಂಡದ ಟ್ವೆಂಟಿ-20 ನಾಯಕತ್ವವನ್ನು ಬಿಟ್ಟುಕೊಡದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನಗೆ ತಿಳಿಸಿಲ್ಲ ಎಂದು ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಪ್ರತಿಪಾದಿಸಿದ್ದಾರೆ. ಈ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
ಟ್ವೆಂಟಿ-20 ನಾಯಕ ಸ್ಥಾನ ತ್ಯಜಿಸದಂತೆ ಬಿಸಿಸಿಐ ವಿರಾಟ್ ಕೊಹ್ಲಿಯವರನ್ನು ಕೋರಿಕೊಂಡಿತ್ತು. ನಾಯಕನ ಸ್ಥಾನ ತ್ಯಜಿಸುವ ಯೋಜನೆ ಇರಲಿಲ್ಲ.ಆದರೆ ಅವರು ಟ್ವೆಂಟಿ-20 ನಾಯಕತ್ವವನ್ನು ತ್ಯಜಿಸಿದ್ದರು. ಆಯ್ಕೆಗಾರರು ಏಕದಿನ ಹಾಗೂ ಟ್ವೆಂಟಿ-20ಗೆ ಪ್ರತ್ಯೇಕ ನಾಯಕನನ್ನು ನೇಮಿಸದಿರಲು ನಿರ್ಧರಿಸಿದ್ದರು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಇತ್ತೀಚಗೆ ಹೇಳಿಕೆ ನೀಡಿದ್ದರು.
ಟ್ವೆಂಟಿ-20 ನಾಯಕತ್ವ ತ್ಯಜಿಸುವ ಮುನ್ನ ಬಿಸಿಸಿಐಗೆ ಹೇಳಿದ್ದೆ. ನಾನು ನನ್ನ ದೃಷ್ಟಿಕೋನವನ್ನು ಅವರಿಗೆ ಹೇಳಿದ್ದೆ. ಇದನ್ನು ಬಿಸಿಸಿಐ ಚೆನ್ನಾಗಿ ಸ್ವೀಕರಿಸಿದೆ. ಯಾವುದೇ ಅಪರಾಧ ಇರಲಿಲ್ಲ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೊಂದು ಪ್ರಗತಿಪರ ಹೆಜ್ಜೆ ಎಂದರು. ನಾನು ಏಕದಿನ ನಾಯಕನಾಗಿ ಹಾಗೂ ಟೆಸ್ಟ್ ನಾಯಕನಾಗಿ ಮುಂದುವರಿಯುತ್ತೇನೆ ಎಂದು ನಾನು ಅವರಿಗೆ ಹೇಳಿದ್ದೇನೆ ಎಂದು ಕೊಹ್ಲಿ ಅವರು ಟ್ವೆಂಟಿ-20 ನಾಯಕತ್ವವನ್ನು ತ್ಯಜಿಸಿರುವ ಪ್ರಶ್ನೆಗೆ ಉತ್ತರಿಸಿದರು.
" ಪದಾಧಿಕಾರಿಗಳು ಅಥವಾ ಆಯ್ಕೆದಾರರು ನಾನು ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಬಯಸದಿದ್ದರೆ ಅವರು ಹೇಳಿದಂತೆ ಮಾಡುತ್ತೇನೆ ಎಂದು ಆ ಸಮಯದಲ್ಲಿ ನಾನು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ,. ನನ್ನ ಟ್ವೆಂಟಿ-20 ನಾಯಕತ್ವದ ಬಗ್ಗೆ ಚರ್ಚಿಸಲು ನಾನು ಬಿಸಿಸಿಐ ಅನ್ನು ಸಂಪರ್ಕಿಸಿದಾಗ ನಾನು ಇದನ್ನು ಸ್ಪಷ್ಟವಾಗಿ ಹೇಳಿದ್ದೇನೆ ”ಎಂದು 33 ವರ್ಷ ವಯಸ್ಸಿನ ಕೊಹ್ಲಿ ಅವರು ಹೇಳಿದರು.
“ಬಿಸಿಸಿಐ ಜೊತೆಗಿನ ನನ್ನ ಸಂವಹನ ನಡೆದಿಲ್ಲ ಹಾಗೂ ನಾನು ವಿಶ್ರಾಂತಿ ಪಡೆಯಲು ಬಯಸಿದ್ದೆ. ಸಭೆಗೆ ಒಂದೂವರೆ ಗಂಟೆಗಳ ಮೊದಲು ನನ್ನನ್ನು ಸಂಪರ್ಕಿಸಲಾಯಿತು. ಐವರು ಆಯ್ಕೆಗಾರರು ನಾನು ಏಕದಿನ ಕ್ರಿಕೆಟ್ ನಾಯಕನಾಗುವುದಿಲ್ಲ ಎಂದು ಹೇಳಿದ್ದರು ಅದು ಉತ್ತಮವಾಗಿದೆ ”ಎಂದು ಅವರು ಹೇಳಿದರು.