ಬುರೂಜ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ

ಬಿ.ಸಿ.ರೋಡ್, ಡಿ.15: ಕಲಾ ಬಾಗಿಲುವಿನ ರಝಾ ನಗರದಲ್ಲಿರುವ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯಪಾಲರು ನೀಡುವ ರಾಜ್ಯ ಪುರಸ್ಕಾರ ಲಭಿಸಿದೆ.
ಗೈಡ್ಸ್ ವಿಭಾಗದಿಂದ 9ನೇ ತರಗತಿಯ ಫಾತಿಮಾ ಅಝ್ಮೀಯ, ಸಾನಿಯಾ ಬಾನು, ತಸ್ನೀಯಾ, ಹುಝೈಫಾ ಬಾನು ಹಾಗೂ ಸ್ಕೌಟ್ ವಿಭಾಗದಿಂದ ರಕ್ಷಣ್ ಆರ್. ಅಡಪ್ಪ, ಶೇಕ್ ಶಿಫಾನ್, ಮುಹಮ್ಮದ್ ತಾಜುದ್ದೀನ್, ಆಶಿಶ್, ಮುಹಮ್ಮದ್ ಹಸೀಬ್, ಶ್ರೇಯಸ್, ಸಾರ್ಥಕ್ ಗಟ್ಟಿ ಪ್ರತ್ವಿನ್, ವಿಶಾಲ್ ಕುಲಾಲ್ ಮತ್ತು ಸಿದ್ಧಾಂತ ಜೈನ್ ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಕಳೆದ ವರ್ಷ ಲಾಕ್ಡೌನ್ ನಿಂದಾಗಿ ಈ ಪ್ರಶಸ್ತಿಯನ್ನು ಪಡೆಯಲು ಬೆಂಗಳೂರಿಗೆ ತೆರಳಲು ಅಸಾಧ್ಯವಾಗಿತ್ತು ಅವರಿಗೆ ಜಿಲ್ಲಾ ಸಂಸ್ಥೆಯು ಈ ವರ್ಷ ಪ್ರಶಸ್ತಿ ಪತ್ರವನ್ನು ನೀಡಿದೆ.
ಇವರಿಗೆ ಸ್ಕೌಟ್ ಶಿಕ್ಷಕಿ ಶೋಭಾ ಡಿ. ಮತ್ತು ಗೈಡ್ಸ್ ಶಿಕ್ಷಕಿ ವನಿತಾ ಶೆಟ್ಟಿ ತರಬೇತಿ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





