ಭಟ್ಕಳ: ಡಿ. 18ರಂದು ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವ
ಭಟ್ಕಳ: ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವ ಡಿ.18ರಂದು ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಜಾನೆಯಿಂದ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ಗಂಟೆಗೆ ಪುರಬೀದಿಯಲ್ಲಿ ಪದ್ಮಾವತಿ ದೇವಿಯ ರಥೋತ್ಸವದ ಮೆರವಣಿಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





