ಬಿಸಿಯೂಟದ ಜೊತೆ ಮೊಟ್ಟೆ ಕೊಡಲು ದ.ಕ.ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು, ಡಿ.15: ರಾಜ್ಯದ ಏಳು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ಕೊಡುವ ಬಗ್ಗೆ ಸರಕಾರವು ಕೈಗೊಂಡ ನಿರ್ಧಾರ ವನ್ನು ಸಿಟಿಝೆನ್ ಫೋರಂ ಫಾರ್ ಮಂಗಳೂರು ಡೆವೆಲೆಪ್‌ಮೆಂಟ್ (ಸಿಎಫ್‌ಎಂಡಿ) ಸ್ವಾಗತಿಸಿದೆ.
ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ಪತ್ರ ಬರೆದ ಸಿಎಫ್‌ಎಂಡಿ, ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನ ಪ್ರಕಾರ ಮಗುವಿನ ಆಹಾರದ ಹಕ್ಕಾಗಿ ಮಧ್ಯಾಹ್ನದ ಬಿಸಿಯೂಟ ದೊರೆತಿದೆ. ದೇಶದಲ್ಲಿ ಪೆಡಂಭೂತವಾಗಿ ಬೆಳೆದು ನಿಂತಿರುವ ಮಕ್ಕಳ ಅಪೌಷ್ಟಿಕತೆಯ ನಿವಾರಣೆಗೆ ಮತ್ತು ಅವರ ಆರೋಗ್ಯದ ದಿಕ್ಕಿನಲ್ಲಿ ಇದು ಸರಿಯಾದ ಹೆಜ್ಜೆ ಎಂದು ತಿಳಿಸಿದೆ.
ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ಮೊಟ್ಟೆಗಳನ್ನು ನೀಡಿತ್ತಿದ್ದು, ಇದನ್ನು ದ.ಕ. ಜಿಲ್ಲೆಗೂ ವಿಸ್ತರಿಸಬೇಕು. ಮೊಟ್ಟೆ ತಿನ್ನುವ ಮಕ್ಕಳಿಗೆ ಜಿಲ್ಲೆಯಲ್ಲೂ ಬಿಸಿಯೂಟದೊಂದಿಗೆ ಮೊಟ್ಟೆ ವಿತರಿಸಬೇಕು ಎಂದು ಸಿಎಫ್‌ಎಂಡಿಯ ವಿದ್ಯಾ ದಿನಕರ್ ಮಾಡಿದ್ದಾರೆ.
Next Story





