ಮಾಹೆಯ ವಿದ್ಯಾರ್ಥಿಗಳಿಗೆ ರಾ. ಇನ್ನೋವೇಟಿವ್ ಪ್ರಶಸ್ತಿ
ಉಡುಪಿ, ಡಿ.15: ಮಂಗಳೂರಿನ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸ್‌ನ ಡಾ.ಮಹಿಮಾ ಮಿಸ್ರಾ ನೇತೃತ್ವದ ಮಾಹೆ ವಿವಿ ತಂಡ ಭಾರತ ಸರಕಾರದ ಶಿಕ್ಷಣ ಸಚಿವಾಲಯ ನಡೆಸಿದ ರಾಷ್ಟ್ರೀಯ ಇನ್ನೋವೇಷನ್ ಸ್ಪರ್ಧೆ (ಎನ್‌ಐಸಿ)ಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಭಾರತದಾದ್ಯಂತದ ಸುಮಾರು 900 ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಹಲವು ಸುತ್ತಿನ ಸ್ಪರ್ಧೆಗಳ ಬಳಿಕ 45 ತಂಡಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದ್ದು, ಈ ತಂಡಗಳಿಗೆ ಹೊಸ ಆವಿಷ್ಕಾರಗಳಿಗೆ ಸರಕಾರ ಆರ್ಥಿಕ ನೆರವು ಒದಗಿಸಲಿದೆ.
ಡಾ.ಮಹಿಮಾ ಮಿಶ್ರಾ ಅವರು ಮಣಿಪಾಲ ಇನ್ನೋವೇಟಿವ್ ಸೆಂಟರ್‌ನಲ್ಲಿ ಹೊಸ ಸಂಶೋಧನೆ ನಿರತರಾಗಿದ್ದಾರೆ. ಅವರ ತಂಡದಲ್ಲಿ ಮಣಿಪಾಲ ಎಂಐಟಿಯ 2ನೇ ವರ್ಷದ ಬಿಟೆಕ್ ವಿದ್ಯಾರ್ಥಿ ಸೌಮಿಕ್ ರಾಯ್, 4ನೇ ವರ್ಷದ ಬಿಟೆಕ್ ವಿದ್ಯಾರ್ಥಿ ರುಚಿತ್ ಭಕ್ತಿ, ಮಾಹೆಯ ಚೀಫ್ ಇನ್ನೋವೇಟಿವ್ ಅಧಿಕಾರಿ ಡಾ.ಅರುಣ್ ಶಾನುಭಾಗ್ ಮುಂತಾದವರಿದ್ದರು.
Next Story





