ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ
![ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ](https://www.varthabharati.in/sites/default/files/images/articles/2021/12/15/317799-1639585510.jpg)
ಮಂಗಳೂರು, ಡಿ.15: ಸಂತ ಅಲೋಶಿಯಸ್ ಕಾಲೇಜಿನ 2019-20ನೆ ಸಾಲಿನಲ್ಲಿ ಅಗ್ರ ಶ್ರೇಯಾಂಕ ಪಡೆದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಉದ್ಯಮಿ ವಾಲ್ಟರ್ ಡಿಸೋಜಾ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ವಂ. ಮೆಲ್ವಿನ್ ಜೆ. ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ವಂ. ಡಾ. ಪ್ರವೀಣ್ ಮಾರ್ಟಿಸ್, ಪ್ರಭಾಕರ ಕುಲಸಚಿವರಾದ ಡಾ. ಆಲ್ವಿನ್ ಡೇಸಾ, ಹಣಕಾಸು ಅಧಿಕಾರಿ ವಂ. ವಿನ್ಸೆಂಟ್ ಪಿಂಟೋ, ಕಾರ್ಯಕ್ರಮ ಸಂಯೋಜಕ ರೆನ್ನಿ ಡಿಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ವಿಭಾಗದ 75 ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಿದರು.
ಎಂಎಸ್ಸಿ ಬಿಗ್ ಡೇಟಾ ಎನಾಲಿಟಿಕ್ಸ್ ವಿಭಾಗದ ವಿದ್ಯಾರ್ಥಿನಿ ಅವಿಲಾ ಪಿಂಟೋ, ಬಿಎಸ್ಸಿ ವಿದ್ಯಾರ್ಥಿನಿ ಪಲ್ಲವಿ ಪ್ರಭು ಅನಿಸಿಕೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಭಾರ ಕುಲಸಚಿವರಾದ ಡಾ. ಆಲ್ವಿನ್ ಡೇಸಾ ಶ್ರೇಯಾಂಕ ಪಡೆದವರ ಪಟ್ಟಿ ವಾಚಿಸಿದರು. ಡಾ. ಲೊವೀನಾ ಲೋಬೋ ಸ್ವಾಗತಿಸಿದರು. ಡಾ. ರಿಚ್ಚರ್ಡ್ ಗೊನ್ಸಾಲ್ವಿಸ್ ಅತಿಥಿಗಳನ್ನು ಪರಿಚಯಿಸಿದರು. ಅಲಿಟಾ ಮರಿಯಾ ಡೇಸಾ ಕಾರ್ಯಕ್ರಮ ನಿರೂಪಿಸಿದರು. ರೆನಿಟಾ ಡಿಸೋಜಾ ವಂದಿಸಿದರು.