ಬಿಎಂಟಿಸಿ ವಜ್ರ ಬಸ್ ಪಾಸ್ ಪ್ರಯಾಣ ದರ ಶೇ.34 ರಷ್ಟು ಇಳಿಕೆ

ಬೆಂಗಳೂರು, ಡಿ.15: ಸಾರ್ವಜನಿಕರು ಸಮೂಹ ಸಾರಿಗೆಯನ್ನು ಬಳಸಲು ಉತ್ತೇಜಿಸುವ ಉದ್ದೇಶದಿಂದ ಬಿಎಂಟಿಸಿಯ ವಜ್ರ ಸಾರಿಗೆ ಸಂಸ್ಥೆ ಹವಾನಿಯಂತ್ರಿತ ಪ್ರಯಾಣ ದರವನ್ನು ಶೇ.34ರಷ್ಟು ಕಡಿತ ಮಾಡಲಾಗಿದೆ.
ಪರಿಷ್ಕೃತ ದರ ಮುಂದಿನ ವರ್ಷದ ಜನವರಿ 1ರಿಂದ ಅನ್ವಯವಾಗಲಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದೆ.
ವಜ್ರ ಸಾರಿಗೆ ಸಂಸ್ಥೆಯ ದಿನದ ಮತ್ತು ಮಾಸಿಕ ಬಸ್ ಪ್ರಯಾಣ ದರವನ್ನು ಶೇ. 34 ರಷ್ಟು ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಇದರಿಂದಾಗಿ ಹವಾನಿಯಂತ್ರಿತ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಜಿಎಸ್‍ಟಿ ಸೇರಿ ಹವಾನಿಯಂತ್ರಿತ ದಿನದ ಬಸ್ ಪಾಸ್ ದರವನ್ನು 120 ರಿಂದ 100 ರೂಪಾಯಿಗೆ ಇಳಿಕೆ ಮಾಡಲಾಗಿದೆ.
ಅದೇ ರೀತಿ ಹವಾನಿಯಂತ್ರಿತ ಮಾಸಿಕ ಬಸ್ ಪಾಸ್ ದರವನ್ನು ಜಿಎಸ್‍ಟಿ ಸೇರಿ 2000 ರೂ. ದರವನ್ನು 1500 ರೂಪಾಯಿಗೆ ಕಡಿತ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಹವಾನಿಯಂತ್ರಿತ ವಜ್ರ ಸಾರಿಗೆ ಸಂಸ್ಥೆಯ ದಿನದ ಪಾಸಿನಲ್ಲಿ 20 ಮತ್ತು ಮಾಸಿಕ ಬಸ್ ಪಾಸ್ ನಲ್ಲಿ 500 ರೂಪಾಯಿ ಕಡಿತ ಮಾಡಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯಾಪ್ತಿಯ 21 ಮಾರ್ಗಗಳಲ್ಲಿ 173 ಅಧಿಕ ವಜ್ರ ಸಾರಿಗೆ ಹವಾನಿಯಂತ್ರಿತ ಬಸ್ ಗಳ ಸಂಚಾರ ಮಾಡುತ್ತಿವೆ.
ಪ್ರತೀ ಕೀ.ಮೀಗೆ-ಪರಿಷ್ಕೃತ ದರ ಹೀಗಿದೆ
(ಶೇ.34): 2ಕಿಮೀ-10ರೂಪಾಯಿ., 4ಕಿಮೀ-15ರೂ., 6 ಕಿಮೀ-20ರೂ., 8 ಕಿಮೀ-25ರೂ., 10 ಕಿಮೀ-30ರೂ., 20 ಕಿಮೀ-35ರೂ., 28ಕಿಮೀ-40ರೂ., 34ಕಿಮೀ-45ರೂ., 50ಕಿಮೀ-50 ರೂ.ದರ ನಿಗದಿಪಡಿಸಿದೆ.








