ಕ್ರೀಡೆಯಿಂದ ಆರೋಗ್ಯವನ್ನು ಕಾಪಾಡಲು ಸಾಧ್ಯ : ಡಾ. ಜೆರಾಲ್ಡ್

ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಮಟ್ಟದ ಬಿ.ಸದಾನಂದ ಮತ್ತು ವಾಮನ್ ಮೆಮೋರಿಯಲ್ ಟ್ರೋಫಿಯ ಫುಟ್ಬಾಲ್ ಪಂದ್ಯಾವಳಿಯ ಇದರ ಉದ್ಘಾಟನೆಯನ್ನು ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ್ ಡಿ.ಸೋಜರವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನಕ್ಕೆ ಹೊರಾಂಗಣ ಕ್ರೀಡೆ ಮುಖ್ಯವಾಗಿದ್ದು ಆ ನೆಲೆಯಲ್ಲಿ ಇಲ್ಲಿ ಸೇರಿರುವ ನಿಮ್ಮೆಲ್ಲರನ್ನು ಪ್ರಶಂಸಿಸುತ್ತಿದ್ದೇನೆ. ಅಂತರ್ಜಾಲ ಆಟದ ಗೀಳಿಗೆ ಇಳಿಯದೆ ವಿದ್ಯಾರ್ಥಿಗಳು ದೈಹಿಕ ಕ್ರೀಡೆಗಳಲ್ಲಿ ಸಕ್ರೀಯರಾಗಬೇಕು ಆ ಮೂಲಕ ಉತ್ತಮ ಆಟಗಾರನಾಗಿ ಹೊರಹೊಮ್ಮಬಹುದೆಂದು ಹೇಳಿದರು.
ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಝ್ ಜೆ ಹಾಶಿಂ ಅಧ್ಯಕ್ಷೀಯ ಮಾತುಗಳನ್ನಾಡಿ, ಕ್ರೀಡೆಯು ನಮ್ಮ ಜೀವನದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮಂಗಳೂರು ವಿ.ವಿ.ದ ದೈಹಿಕ ಶಿಕ್ಷಣ ವಿಭಾಗದ ಸಹ ನಿರ್ದೇಶಕರಾದ ಪ್ರಸನ್ನ ಕುಮಾರ್, ಕಾಲೇಜಿನ ದೈಹಿಕ ವಿಭಾಗದ ಪ್ರಾಧ್ಯಾಪಕರಾದ ಇಬ್ರಾಹೀಂ, ಪೇಸ್ ಮುಖ್ಯಾಧಿಕಾರಿ ಡಾ. ಸೆಯ್ಯದ್ ಅಮೀನ್ ಈ ಸಂದರ್ಭ ವೇದಿಕೆಯಲ್ಲಿದ್ದರು. ಕಾಲೇಜಿನ ದೈಹಿಕ ವಿಭಾಗದ ಮುಖ್ಯಸ್ಥರಾದ ಇಕ್ಬಾಲ್ ಸ್ವಾಗತಿಸಿದರು. ಪ್ರಾಧ್ಯಾಪಕಿ ಅಶ್ವಿನಿಯವರು ವಂದಿಸಿದರು. ವಿದ್ಯಾರ್ಥಿನಿಯಾದ ಹಿಬಾ ಕಾರ್ಯಕ್ರಮ ನಿರೂಪಿಸಿದರು.








