ನೋಟರಿ ಕಾಯ್ದೆಗೆ ತಿದ್ದುಪಡಿ ತರದಂತೆ ವಕೀಲರ ಮನವಿ
ಬೆಂಗಳೂರು, ಡಿ.15: ಕೇಂದ್ರ ಸರಕಾರವು ನೋಟರೀಸ್ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ತುದಿಗಾಲಿನಲ್ಲಿ ನಿಂತಿದೆ. ಕಾಯ್ದೆಗೆ ತಿದ್ದುಪಡಿ ತಂದರೆ, ಅನೇಕ ವಕೀಲರು ಬೀದಿಪಾಲಾಗುತ್ತಾರೆ ಎಂದು ಬೆಂಗಳೂರು ನೋಟರೀಸ್ ಅಸೋಸಿಯೇಷನ್‍ನ ಸಂಚಾಲಕ ಪಿದಾಂಬರಂ ತಿಳಿಸಿದ್ದಾರೆ.
ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಕಳೆದ ಏಳು ದಶಕಗಳಿಂದ ನೋಟರೀಸ್ ಕಾಯ್ದೆಗೆ ಯಾವುದೇ ತಿದ್ದುಪಡಿಯನ್ನು ತಂದಿರಲಿಲ್ಲ. ಹಾಗಾಗಿ ಯಾವುದೇ ಸಮಸ್ಯೆ ಉದ್ಭವಿಸಿರಲಿಲ್ಲ. ಆದರೆ ಈಗಿನ ಸರಕಾರವು ನೋಟರಿ ಲೇಸನ್ಸ್ ಅನ್ನು ಕೇವಲ ಎರಡು ಬಾರಿ ಮಾತ್ರ ನವೀಕರಣ ಮಾಡಬೇಕು ಎಂದು ಕಾಯ್ದೆಯ ಸೆಕ್ಷನ್ 2ಕ್ಕೆ ತಿದ್ದುಪಡಿ ಮಾಡಲು ಹೊರಟಿದೆ. ಇದರಿಂದ ದೇಶದ ಲಕ್ಷಾಂತರ ವಕೀಲರು ಬೀದಿಪಾಲಾಗುತ್ತಾರೆ. ಆದುದರಿಂದ ಕಾಯ್ದೆಗೆ ಯಾವುದೇ ತಿದ್ದುಪಡಿಯನ್ನು ತರಬಾರದು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ತಮ್ಮಣ್ಣಗೌಡ, ರವೀಂದ್ರ, ವಿಜಯ್ ಆರ್.ಎಸ್, ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.
Next Story





